ಎಂಥ ಕಾಲ ಬಂತು ಸ್ವಾಮಿ, ‘ಕಬಾಲಿ’ಗೋಸ್ಕರ ರಜೆ ಘೋಷಿಸಿದ ಬೆಂಗಳೂರು ಕಂಪನಿಗಳು…

0
1198

ತಿಳಿದುಬಂದ ಮೂಲಗಳ ಪ್ರಕಾರ ಈಗಾಗಲೇ ಕಬಾಲಿ ಚಿತ್ರದ ಟಿಕೆಟ್ಸ್ sold ಔಟ್ ಆಗಿದ್ದು, ಅಮೆರಿಕ ಒಂದರಲ್ಲೇ ಸರಿ ಸುಮಾರು 400 ಕೇಂದ್ರಗಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಈ ವಿಚಾರ ನಿಮಗೆ ಅಷ್ಟು ಆಶ್ಚರ್ಯವೆನ್ನಿಸದಿದ್ದರೂ ಮತ್ತೊಂದು ವಿಚಾರ ನಿಮಗೆ ಆಶ್ಚರ್ಯ ಎನ್ನಿಸದೆ ಇರಲಾರದು. ಬೆಂಗಳೂರಿನ ಕಂಪನಿಯೊಂದು ಕಬಾಲಿ ಸಿನೆಮಾ ವೀಕ್ಷಿಸಲು ತನ್ನ ನೌಕರರಿಗೆ ರಜೆ ನೀಡಿದೆ ಎಂದರೆ ನಂಬಲೇ ಬೇಕು..!!!

OPUS ಎಂಬ ಕಂಪನಿಯೊಂದು ಯಾವಾಗ ತನ್ನ ನೌಕರರು ಸಿನೆಮಾ ವೀಕ್ಷಿಸುವ ಸಲುವಾಗಿ ಸಾಮೂಹಿಕ ರಜೆ ಮೇಲೆ ತೆರಳಲು ಸಿದ್ಧತೆ ನೆಡೆಸಿದ್ದಾರೆ ಎಂದು ತಿಳಿದು ತಾನೇ ರಜೆ ಘೋಷಿಸಿದೆ ಎಂದು ವರದಿಯಾಗಿದೆ. ಇದೆ ರೀತಿ ಈಗಾಗಲೇ 22 ರಂದು ಚೆನ್ನೈ ಮತ್ತು ಬೆಂಗಳೂರಿನ ಕೆಲವು ಕಂಪನಿಗಳು ರಜೆ ಘೋಷಿಸಿವೆ ಎಂದು ತಿಳಿದುಬಂದಿದೆ.

ಕಲಿಗಾಲ ಅಂದ್ರೆ ಇದೆ ಇರಬೇಕು, ಬೆಂಗಳೂರಿನ ಕಂಪನಿಯೊಂದು ಯಾವುದೋ ರಾಜ್ಯದ ನಟನ ಚಿತ್ರಕ್ಕೆ ರಜೆ ಕೊಡುತ್ತದೆ ಎಂದರೆ ನೀವು ನಂಬಲೇ ಬೇಕು ಓದುಗರೇ… ತಲೈವಾ ತಲೈವಾ ಎಂದು ತಲೆ ಮೇಲೆ ಕೂರಿಸಿ ಮೆರವಣಿಗೆ ಮಾಡುತ್ತಿರುವ ಕರ್ನಾಟಕದ ಮಂದಿ ತಮ್ಮ ನೆಲ ಭಾಷೆ ಸಂಸ್ಕೃತಿಯನ್ನು ಮರೆತು ಬೇರೆಯವರ ತಾಳಕ್ಕೆ ಕುಣಿಯುತ್ತಿರುವ ಕಾರಣ ನಿಜಕ್ಕೂ ನಮ್ಮ ಬೆಂಗಳೂರನ್ನು ಬೇರೆ ರಾಜ್ಯಕ್ಕೆ ಮಾರುವ ಸ್ಥಿತಿ ಬಂದೊದಗಿದೆ.

ಹೀಗೆ ಮುಂದುವರೆದರೆ ಮುಂದೊಂದು ದಿನ ತಮಿಳುನಾಡಿನ ಎರಡನೇ ರಾಜಧಾನಿ ಬೆಂಗಳೂರು ಆಗುವ ಕಾಲ ದೂರವಿಲ್ಲ. ಮೊನ್ನೆ ಮೊನ್ನೆ ತಾನೆ ನಮ್ಮ ಕರ್ನಾಟಕದ ಹುಡುಗನಿಗೆ ತಮಿಳುನಾಡಿನಲ್ಲಿ ಕನ್ನಡ ಮಾತಾಡಿದ ಎಂಬ ಕಾರಣಕ್ಕೆ ದಂಡ ಹಾಕಿಸಿಕೊಂಡಿದ್ದು ನಮ್ಮ ಜನ ಮರೆತಂತಿದೆ.