ತಮಿಳುನಾಡಿನ ಇತಿಹಾಸ ಹೊಂದಿರುವ ಶ್ರೀ ಕಬ್ಬಾಳಮ್ಮ ದೇವಸ್ಥಾನ, ಕಬ್ಬಾಳು…

0
2987

ಕಬ್ಬಾಳು ಹಳ್ಳಿಯು ಕಬ್ಬಾಳಮ್ಮ ದೇವಿಯ ಮನೆಯಾಗಿದೆ. ದೇವಿಯು ಈ ಹಳ್ಳಿಗೆ ಬರುವ ಬಗ್ಗೆ ಒಂದು ಕಲ್ಪಿತವಾದ ಕಥೆಯಿದೆ. ಈ ಹಳ್ಳಿಗೆ ಬರುವ ಮೊದಲು ದೇವಿಯು ತಮಿಳುನಾಡಿನಲ್ಲಿದ್ದು ನೆಲೆಸಲು ಸ್ಥಳವನ್ನು ಹುಡುಕುತ್ತಿದ್ದಳು. ಈ ರೀತಿಯಾಗಿ ಕಬ್ಬಾಳಮ್ಮ ತನ್ನ ತಾಯಿಯಾದ ಬೈರಮ್ಮ, ತಂಗಿ ಬಿಸಿಲಮ್ಮ ಹಾಗು ಸಹೋದರ ಬೈರವೇಶ್ವರನ ಜೊತೆ ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಿದ್ದಳು. ಈ ರೀತಿಯಾಗಿ ಸಂಚರಿಸುತ್ತಿರುವಾಗ ಜೋರಾಗಿ ಮಳೆ ಬಂದ ಕಾರಣ ಕಬ್ಬಾಳು ಹತ್ತಿರದ ಹಟ್ಟಿ ಹಳ್ಳಿಯಲ್ಲಿರುವ ಅಡುಕೆ ತೋಟದಲ್ಲಿ ಹೋದರು.

d90459fd9eda4b0a7780a691984e0e257ba413d8

 

ಈ ಸಂದರ್ಭದಲ್ಲಿ ಕಬ್ಬಾಳಮ್ಮ ತನ್ನ ತಾಯಿ, ಸಹೋದರಿ ಹಾಗು ಸಹೋದರನಿಗೆ ಸುರಕ್ಷಿತವಾದ ಸ್ಥಳವನ್ನು ಸೇರಲು ಹೇಳಿ ತಾನು ಅಡುಕೆ ಮರದ ಹೊಂಬಾಳೆಯಲ್ಲಿ ಸೇರಿಕೊಳ್ಳುತ್ತಾಳೆ. ಮಳೆ ನಿಂತ ಮೇಲೆ ಹೊಂಬಾಳೆಯಿಂದ ಹೊರಬಂದು ಕಬ್ಬಾಳಿನ ಕಡೆಗೆ ಸಂಚರಿಸುತ್ತಾಳೆ. ಅಲ್ಲಿ ಗ್ರಾಮ ದೇವತೆಗಳಾದ ಕೋಣನ ಮಾರಮ್ಮ ಮತ್ತು ಮಂತಿನ ಮಾರಮ್ಮನ ಅನುಮತಿ ಪಡೆದು ಈ ಸ್ಥಳದಲ್ಲಿ ನೆಲೆಸುತ್ತಾಳೆ.

14695462_885846844879641_734079598968089354_n

ಗ್ರಾಮ ದೇವತೆಗಳು ಅನುಮತಿ ನೀಡಿದರೂ ಸಹ ಅಲ್ಲಿನ ಇನ್ನೊಂದು ಸ್ಥಳೀಯ ದೇವರು ಈ ದೇವಿ ಹೊರಗಿನವಳೆಂದು ಅಡ್ಡಿ ಮಾಡಿದರು. ಆದರೆ ಬಸವೇಶ್ವರ ದೇವರು ಪ್ರಥಮ ಆದ್ಯತೆಯನ್ನು ಸ್ಥಳೀಯ ದೇವರುಗಳಿಗೆ ಕೊಡಲಾಗುವುದೆಂದು ಹೇಳಿ ಈ ದೇವರನ್ನು ಓಲೈಸಿ ದೇವಿಯನ್ನು ಇಲ್ಲಿ ನೆಲೆಸಲು ಅನುಮತಿ ಕೊಟ್ಟರು. ಅಂದಿನಿಂದ ದೇವಿಯು ಕಬ್ಬಾಳು ಹಳ್ಳಿಯಲ್ಲಿ ನೆಲೆಸಿ “ಕಬ್ಬಾಳಮ್ಮ” ಎಂಬ ಹೆಸರಿನಿಂದ ಹೆಸರುವಾಸಿಯಾದಳು. ಈಗ ಈ ಸ್ಥಳವು ಒಂದು ಪುಣ್ಯ ಕ್ಷೇತ್ರವಾಗಿದೆ. ಇಲ್ಲಿ ಎರಡು ಅಗ್ನಿಕುಂಡ ಆಚರಣೆಯನ್ನು ನಡೆಸಲಾಗುತ್ತದೆ. ಒಂದು ದೀಪಾವಳಿಯ ಸಮಯದಲ್ಲಿ ಮತ್ತೊಂದು ಕಾತರ್ಿಕ ಪೂಜೆ ಉತ್ಸವದಲ್ಲಿ ಆಚರಿಸಲಾಗುತ್ತದೆ.

15219406_903384329792559_8982101670375463407_n

 

ಈ ಎರಡೂ ಸಂದರ್ಭದಲ್ಲಿಯೂ ಅಗ್ನಿಕುಂಡದ ಪೂಜೆಯನ್ನು ಮೊದಲಿಗೆ ಬಸವೇಶ್ವರ ದೇವರಿಗೆ ನೆರವೇರಿಸಲಾಗುತ್ತದೆ ನಂತರ ಕಬ್ಬಾಳಮ್ಮ ದೇವಿಗೆ ನೆರವೇರುವುದು. ದೇವಸ್ಥಾನದಲ್ಲಿ ಇತರೆ ಮುಖ್ಯವಾದ ಉತ್ಸವಗಳೆಂದರೆ ಶಿವರಾತ್ರಿ ಉತ್ಸವ ಹಾಗು ರಥೋತ್ಸವ. ಶಿವರಾತ್ರಿಯಂದು ದೊಡ್ಡ ಪ್ರಮಾಣದಲ್ಲಿ ಜಾನುವಾರುಗಳ ಜಾತ್ರೆ ನಡೆಯುತ್ತದೆ.

ಕಬ್ಬಾಳಮ್ಮ ದೇವಿಯ ಜೊತೆಗಿದ್ದ ದೇವತೆಗಳು ಹತ್ತಿರದ ಸ್ಥಳಗಳಲ್ಲಿ ನೆಲೆಸಿದ್ದಾರೆ. ಸಹೋದರಿ ಬಿಸಿಲಮ್ಮ ಹುಣಸೆಹಳ್ಳಿಯಲ್ಲಿ ನೆಲೆಸಿದ್ದಾಳೆ. ತಾಯಿ ಬೈರಮ್ಮ ದೇವಸ್ಥಾನ ಹಳ್ಳಿಯ ದ್ವಾರದಿಂದ 0.5 ಕಿ.ಮೀ ದೂರದಲ್ಲಿದೆ. ಸಹೋದರನು ಬೈರವೇಶ್ವರ ದೇವಸ್ಥಾನದ ಎಡಭಗದಲ್ಲಿ ನೆಲಸಿದನು. ಈ ಎಲ್ಲಾ ದೇವಸ್ಥಾನಗಳಿಗೆ ಸುಮಾರು 200 ವರ್ಷದ ಇತಿಹಾಸವಿದೆ ಎಂದು ಹೇಳಲಾಗಿದೆ.

Address :

  • ಶ್ರೀ ಕಬ್ಬಾಳಮ್ಮ ದೇವಸ್ಥಾನ, ಕಬ್ಬಾಳು, ಕಬ್ಬಾಳು ಪೋಸ್ಟ್, ಸಾತನೂರು ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ, ಪಿನ್ – 562126.
  • Phone
  • Website
  • Location
   ರಾಮನಗರ
  • ಬೆಳಿಗ್ಗೆ 6.00 ರಿಂದ ರಾತ್ರಿ 8:30 ರ ವರೆಗೆ…