ರುಚಿ-ರುಚಿಯಾದ ಮನೆಯಲ್ಲೇ ತುಂಬಾ ಸಿಂಪಲ್ ಆಗಿ ತಯಾರಿಸಬಹುದಾದ ಬಿಸಿ ಬಿಸಿ ಕಜ್ಜಾಯ ಮಾಡುವ ವಿಧಾನ..!!

0
3008

ಚಿರೋಟಿ, ಲಡ್ಡು, ಕಜ್ಜಾಯ ಇವೆಲ್ಲಾ ದೀಪಾವಳಿ ಹಬ್ಬಕ್ಕೆ ಮಾಡುವ ವಿಶೇಷ ತಿನಿಸುಗಳು. ಕಜ್ಜಾಯ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಆದ್ರೆ ಅದನ್ನ ಮಾಡೋಕೆ ಮಾತ್ರ ಕಷ್ಟ, ಮಾಡಿದ್ರೂ ಸರಿಯಾಗಿ ಪಾಕ ಬರಬೇಕು ಅಂತೆಲ್ಲಾ ಯೋಚಿಸ್ತಿದ್ರಾ? ಹಾಗಿದ್ರೆ ಇಲ್ಲಿ ನಾವು ರುಚಿ-ರುಚಿಯಾದ ಮನೆಯಲ್ಲೇ ತುಂಬಾ ಸಿಂಪಲ್ ಆಗಿ ಕಜ್ಜಾಯ ಮಾಡುವ ವಿಧಾನವನ್ನು ನಿಮಗೆ ತಿಳಿಸುತ್ತಿದ್ದೇವೆ.

ಬೇಕಾಗುವ ಸಾಮಾಗ್ರಿಗಳು:

 • ಅಕ್ಕಿ – ಒಂದುವರೆ ಕಪ್
 • ಬೆಲ್ಲ- 1 ಕಪ್
 • ತುಪ್ಪ ಅಥವಾ ಎಣ್ಣೆ- 4-5 ಚಮಚ
 • ಎಳ್ಳು- 2 ಚಮಚ
 • ಗಸಗಸೆ- 1 ಚಮಚ
 • ಏಲಕ್ಕಿ- 2 ಚಮಚ
 • ಎಣ್ಣೆ- ಕರಿಯಲು

ಮಾಡುವ ವಿಧಾನ:

 1. ಮೊದಲನೆಯದಾಗಿ ಅಕ್ಕಿಯನ್ನು 2 ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ನೀರು ಬಸಿದು ಅಕ್ಕಿ ತೆಗೆದು ಒಣಗಿಸಿಕೊಳ್ಳಿ. ಒಣಗಿದ ಅಕ್ಕಿಯನ್ನು ಪುಡಿ ಮಾಡಿಕೊಂಡಿರಬೇಕು.
 2. ಒಲೆ ಮೇಲೆ ಬಾಣಲೆ ಇಟ್ಟು ಅರ್ಧ ಕಪ್ ನೀರು ಮತ್ತು ಬೆಲ್ಲ ಹಾಕಿ. ಬೆಲ್ಲ ನಜ್ಜುಗುಜ್ಜು ಮಾಡಿ ಪಾಕ ಬರುವವರೆಗೂ ಕುದಿಸಿ.
 3. ನಂತರ ಒಲೆಯ ಉರಿ ಕಡಿಮೆ ಮಾಡಿ ಪುಡಿ ಮಾಡಿದ ಅಕ್ಕಿಯನ್ನು ಹಾಕಿ. ಎಳ್ಳು, ಗಸಗಸೆ, ಏಲಕ್ಕಿ ಹಾಕಿ ಮಿಕ್ಸ್ ಮಾಡಿ.
 4. ಗಂಟು ಬಾರದ ರೀತಿಯಲ್ಲಿ ಸ್ಪಲ್ವ ಗಟ್ಟಿಯಾಗುವರೆಗೂ ಮಿಕ್ಸ್ ಮಾಡಿ, ನಂತರ ಒಲೆಯಿಂದ ಕೆಳಗಿಳಿಸಿ.
 5. ನಂತರ ಬೇರೆ ಬಾಣಲಿಗೆ ಎಣ್ಣೆ ಹಾಕಿ ಕಾಯಲು ಇಡಿ.
 6. ಸಿದ್ದ ಮಾಡಿದ ಹಿಟ್ಟನ್ನು ಸ್ವಲ್ಪ ತೆಗೆದು ಒಂದು ಪ್ಲೇಟ್‍ನಲ್ಲಿ ಸಣ್ಣದಾಗಿ ಒಬ್ಬಟ್ಟಿನ ರೀತಿಯಲ್ಲಿ ತಟ್ಟಿಕೊಳ್ಳಿ. ನಂತರ ಅದನ್ನು ಕಾದ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೂ ಕರಿದರೆ, ಬಿಸಿ ಬಿಸಿ ಕಜ್ಜಾಯ ತಯಾರಾಗುತ್ತದೆ.

ಹೀಗೆ ಮಡಿದ ಕಜ್ಜಾಯವನ್ನು ಗಾಳಿಯಾಡದ ಡಬ್ಬದಲ್ಲಿ ಮುಚ್ಚಿಟ್ಟರೆ ವಾರವಿಡೀ ಇದರ ರುಚಿಯನ್ನು ಸವಿಯಬಹುದು.