ಕಾಲ ಸರ್ಪ ದೋಷ ನಿಮ್ಮನ್ನು ಕಾಡುತ್ತಿದೆಯೇ? ಈ ಪೂಜಾ ವಿಧಾನ ಪಾಲಿಸಿ ಕಾಲಸರ್ಪ ದೋಷದಿಂದ ನಿವಾರಣೆ ಹೊಂದಿ…!!

0
2041

ಕಾಲಸರ್ಪದೋಷಕ್ಕೆ ಒಳಗಾದವರು ಆ ದೋಷ ನಿವಾರಣೆಗೆ ರಾಹು-ಕೇತುಗಳಿಗೆ ಪೂಜೆ ಸಲ್ಲಿಸಬೇಕಾಗುತ್ತದೆ. ಈ ಪೂಜೆಯನ್ನು ಖುದ್ದಾಗಿ ಆಚರಿಸುವುದಕ್ಕಿಂತ ಸರ್ಪದೋಷ ನಿವಾರಣೆಯನ್ನು ದೇವಾಲಯಗಳಲ್ಲಿ ಬ್ರಾಹ್ಮಣರಿಂದ, ಅವರ ಆದೇಶಾನುಸಾರ ಆಚರಿಸುವುದು ಉತ್ತಮ. ಹಾಗೆ ಸಾಧ್ಯವಾಗದಿದ್ದಲ್ಲಿ ಬೆಳ್ಳಿ ರಾಹು ಕೇತುಗಳ ಪ್ರತಿಮೆಗೆ ಖುದ್ಧಾಗಿ ಈ ಕೆಳಗಿನ ರೀತಿಯಲ್ಲಿ ಪೂಜೆ ಮಾಡತಕ್ಕದ್ದು…

ಬೇಕಾಗಿರುವ ಪೂಜಾ ಸಾಮಾನುಗಳು:
ಉದ್ದು, ಹುರುಳಿ,ನೀಲಿ ಹೂವುಗಳು,ಕೆಂಪು ಹೂವುಗಳು,ನೀಲಿ ವಜ್ರ, ಮಿಶ್ರ ಬಣ್ಣದ ವಸ್ತ್ರಗಳು, ಹಸುವಿನ ಹಾಲುಗಳು, ಅರಿಶಿನ ಕುಂಕುಮ, ಬೆಲ್ಲ, ಎಳನೀರು, ಪಂಚಾಮೃತ, ಬಾಳೆ ಹಣ್ಣು,ಚಿಗುಳಿ,ಕೋಸಂಬರಿ,ಪಾನಕ..

ವಿಧಾನ:

  • ಮೊದಲು ಚೌಕಾಕಾರದ ಮರದ ಪೀಠವನ್ನು ಶುಭ್ರಮಾಡಿ ಅರಿಶಿನ ಕುಂಕುಮದಿಂದ ಅದನ್ನು ಅಲಂಕರಿಸಿ ಹಸುವಿನ ಹಾಲಿನಿಂದ ಶುಭ್ರಪಡಿಸಿದ ರಾಹುಕೇತುವಿನ ಪ್ರತಿಮೆಯನ್ನು ಅದರ ಮೇಲಿಡಬೇಕು.
  • ನಂತರ ಅರಿಶಿನದಿಂದ ಗಣೇಶನನ್ನು ಮಾಡಿ ಪತ್ರೆಗಳ ನಡುವೆ ಇರಿಸಿ ಈ ಪ್ರತಿಮೆಗಳ ಮುಂದೆ ಇರಿಸಬೇಕು.
  • ಮೊದಲು ವಿಜ್ಞೇಶ್ವರನನ್ನು ಪೂಜಿಸಿ ನಂತರ ಸರ್ಪಸೂಕ್ತವನ್ನು ಪಠಿಸಬೇಕು.
  • ತದನಂತರ ರಾಹುಕೇತುಗಳ ವಿಗ್ರಹಕ್ಕೆ ಹಾಲಿನಿಂದ ಕೂಡಿದ ಪಂಚಾಮೃತಾಭಿಷೇಕ ಮಾಡಿಸಬೇಕು.
  • ರಾಹು ಅಷ್ಟೋತ್ತರ ನಾಮಾವಳಿ ಹೇಳುತ್ತಾ ಉದ್ದಿನಿಂದಲೂ ಮತ್ತು ಕೇತು ಅಷ್ಟೋತ್ತರ ನಾಮಾವಳಿ ಪಠಿಸುತ್ತಾ ಹುರುಳಿಯಿಂದಲೂ ಪೂಜೆಗೈಯಬೇಕು.
  • ನಂತರ ಸುಬ್ರಮಣ್ಯ ಮತ್ತು ನಾಗ ಅಷ್ಟೋತ್ತರವನ್ನು ಪಠಿಸಬೇಕು.
  • ಪೂಜೆ ಆದನಂತರ ರಾಹುವಿಗೆ ಕಾಲು ಕೆಜಿ ಉದ್ದನ್ನು ಮತ್ತು ಕೇತುವಿಗೆ ಕಾಲು ಕೆಜಿ ಹುರುಳಿಯನ್ನು ದಾನವಾಗಿ ಕೊಡಬೇಕು.
  • ಈ ರೀತಿ ಪೂಜೆಯನ್ನು ಸಂಕಲ್ಪದಿಂದ ಆರಂಭಿಸಿ ಕಡೆಗೆ ಗಾಯತ್ರಿ ಸರ್ಪ ಮಂತ್ರವನ್ನು ಹನ್ನೊಂದು ಬಾರಿ ಪಠಿಸಿ ಮುಗಿಸಬೇಕು.