ಕಲಶಪೂಜೆ ಮಾಡುವ ಹಿಂದಿನ ವೈಜ್ಞಾನಿಕ ಕಾರಣ.

0
4904

ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ವೈದಿಕ ಪರಂಪರೆಯಲ್ಲಿ ಎಲ್ಲಾ ತರಹದ ಪೂಜೆಗಳಲ್ಲಿ ಜಲತತ್ತ್ವದ ಪೂಜೆಯು ಬಹಳ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಎಲ್ಲಾ ಪೂಜಾ ವಿಧಿ ವಿಧಾನಗಳಲ್ಲಿ ಮುಖ್ಯವಾಗಿ ಉಪಯೋಗಿಸಲ್ಪಡುವುದೇ ನೀರು. ಶ್ರೀ ಸತ್ಯ ನಾರಾಯಣ ವೃತ್ತ, ನಾಗಪಂಚಮಿ, ವಿನಾಯಕ, ವರಮಹಾಲಕ್ಷ್ಮಿ, ಸೋಮವಾರ ವೃತ್ತ, ಸ್ವರ್ಣ ಗೌರಿ, ಮಂಗಳ ಗೌರಿ, ಅನಂತಪದ್ಮನಾಭ ವೃತ್ತ, ಇತ್ಯಾದಿ ಹಲವು ಎಲ್ಲಾ ಪೂಜೆಯಲ್ಲಿಯೂ ಕಲಶವೇ ಪ್ರಧಾನ ಪಾತ್ರ ವಹಿಸುತ್ತದೆ. ಬನ್ನಿ ಹಾಗಾದರೆ ಕಲಶ ಪೂಜೆ ಹೇಗೆ ಮತ್ತು ಕಲಶ ಪೂಜೆಗೆ ಬಳಸಲಾಗುವ ಸಾಮಗ್ರಿಗಳ ಹಿಂದಿನ ವೈಜ್ಞಾನಿಕ ಕಾರಣ ತಿಳಿದುಕೊಳ್ಳೋಣ.

ಕಲಶಗಳ ಕೆಳಗೆ ಅಕ್ಕಿಯನ್ನು ಹಾಕಬೇಕು.

Also read: ಕಲಶ ಪೂಜೆಯಲ್ಲಿ ವೀಳ್ಯದೆಲೆ ಇಟ್ಟು ಪೂಜೆ ಮಾಡುವ ಹಿಂದಿನ ವೈಜ್ಞಾನಿಕ ಕಾರಣ..!

ಅಕ್ಕಿಯುಶಾಂತಿಯ ಸಂಕೇತ. ಪ್ರತಿದಿನ ನಮ್ಮ ಹಸಿವನ್ನು ನೀಗಿಸುವ ಧಾನ್ಯಕ್ಕೆ ಕೃತಜ್ಞತೆ ತೋರಿಸುವ ಉದ್ದೇಶಕ್ಕಾಗಿ ಮತ್ತು ಏಕದಳಧಾನ್ಯವಾಗಿರುವ ಅಕ್ಕಿಯನ್ನು ಪೂಜೆ ಮಾಡುವ ಕಲಶಗಳ ಕೆಳಗೆ ಹಾಕುವುದು, . ಮನುಷ್ಯನಿಗೆ ಉಪಕಾರಿಯಾಗುವ ಎಲ್ಲ ವಸ್ತುಗಳು ದೈವರೂಪವೇ ಎಂದು ಅವುಗಳೆಲ್ಲವಕ್ಕೂ ದೇವರ ಸನ್ನಿಧಿಯಲ್ಲಿ ಸ್ಥಾನ ಕಲ್ಪಿಸಿದೆ ನಮ್ಮ ಧರ್ಮ.

ನಾವು ಕಲಶಕ್ಕೆ ತಾಮ್ರದ ಕಳಸವನ್ನು ಉಪಯೋಗಿಸುತ್ತೇವೆ.

source: mygranary.com

ತಾಮ್ರವು ಲೋಹಗಳಲ್ಲೆಲ್ಲ ಅತುತ್ತಮವಾದದ್ದು. ಇದಕ್ಕೆ ವಿಷೇಶವಾದ ಗುಣಗಳಿರುವುದರಿಂದಲೇ ಇದಕ್ಕೆ ವಿಷೇಷವಾದ ಸ್ಥಾನವನ್ನು ಕೊಟ್ಟಿದ್ದಾರೆ. ತಾಮ್ರದೊಂದಿಗೆ ನೀರು ಬೆರೆತಾಗ ಅಲ್ಲಿ ರಾಸಾಯನಿಕ ಕ್ರಿಯೆಉಂಟಾಗಿ ವಿಶಿಷ್ಟವಾದ ದ್ರಾವಣ ಉತ್ಪತ್ತಿಯಾಗುತ್ತದೆ. ಈ ದ್ರಾವಣದಿಂದ ಅನೇಕ ತರಹದ ಚರ್ಮರೋಗಗಳು ಗುಣವಾಗುತ್ತವೆಂದು ವೈಜ್ಞಾನಿಕವಾಗಿ ಸಾಬೀತು ಮಾಡಲಾಗಿದೆ. ಅಂತಹ ಉಪಯುಕ್ತವಾದ ಮತ್ತು ಮಹತ್ವದ್ದಾದ ಕಳಸವನ್ನು ಹೀಗಳೆಯುವುದು ಸಾಧುವಲ್ಲವೆಂಬುದು ನನ್ನ ಅಭಿಪ್ರಾಯ.

ನಾವು ಕಲಶದೊಳಗೆ ಧರ್ಬೆಯ ಕೂರ್ಚವನ್ನು ಹಾಕುತ್ತೇವೆ.

ನಾವು ಮಂತ್ರವನ್ನು ಉಚ್ಛಾರ ಮಾಡುವಾಗ ಕೆಲವು ಏರುಪೇರುಗಳನ್ನು ಗಮನಿಸಿರುತೇವೆ. ಈ ಏರು ಪೇರುಗಳನ್ನು ಸ್ವರಗಳೆನ್ನುತ್ತಾರೆ. ಸ್ವರಗಳನ್ನು ಛಂದೋಬದ್ಧವಾಗಿ ಹೇಳುವ ಮಂತ್ರಗಳು ಪ್ರಕೃತಿಯಲ್ಲಿನ ವಿದ್ಯುತ್ಕಾಂತೀಯ ಶಕ್ತಿಯನ್ನು {ಎಲೆಕ್ಟ್ರೋಮ್ಯಾಗ್ನೆಟೀಕ್ಪಾವರ್} ಸಂಯೋಜಿಸುತ್ತವೆ. ಈ ರೀತಿ ಸಂಯೋಜಿಸಲ್ಪಟ್ಟ ಶಕ್ತಿಯು ಕಲಶದೊಳಗಿಟ್ಟಿರುವ ಧರ್ಭೆಯಿಂದ ಆಕರ್ಶಿತಗೊಂಡು ಕಲಶದೊಳಗೆಸೇರುತ್ತದೆ. ಇದನ್ನೇ ಹಿಂದಿನ್ಕಾಲದವರು ದೈವಸಾನ್ನಿಧ್ಯವೆನ್ನುತ್ತಿದ್ದರು ಎಂದು ಕಾಣುತ್ತದೆ. ಇಂತಹ ದೈವಸಾನ್ನಿಧ್ಯಕ್ಕಾಗಿ ಧರ್ಬೆಯ ಕೂರ್ಚನ್ನು ಕಲಶದೊಳಗೆ ಹಾಕುತ್ತೇವೆ.

ಕಲಶದೊಳಗೆ ಮಾವಿನ ಸೊಪ್ಪನ್ನು ಹಾಕುತ್ತೇವೆ

ಮಾವಿನ ಎಲೆಗಳಲ್ಲಿ ಪತ್ರಹರಿತ್ತಿನ ಪ್ರಮಾಣ ಹೆಚ್ಚಾಗಿರುತ್ತದೆ. ಪತ್ರಹರಿತ್ತು ಹೆಚ್ಚಾಗಿರುವ ಎಲೆಗಳು ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಇದು ತಿಳಿದಿರುವ ಸಂಗತಿಯಾಗಿದೆ. ಶುಭ ಕಾರ್ಯಗಳು ಮನೆಯಲ್ಲಿ ಜರುಗುವಾಗ ಬಹಳ ಜನ ಸೇರುವುದು ಸಾಮಾನ್ಯವಾಗಿರುತ್ತದೆ. ಹಾಗೆ ಬಹಳ ಜನ ಸೇರಿದಾಗ ಅಷ್ಠೂಜನಕ್ಕೆ ಸರಿಹೊಂದುವ ಆಮ್ಲಜನಕ ವಾತಾವರಣದಲ್ಲಿ ಸೇರಿಸುವ ಸಲುವಾಗಿ ಮಾವಿನ ಸೊಪ್ಪು ಮತ್ತು ಬಾಳೆ ಎಲೆಗಳನ್ನು ಉಪಯೋಗಿಸುತ್ತಾರೆ . (ಮಾವಿನ ಎಲೆಗಳು ಮತ್ತು ಬಾಳೆ ಎಲೆಗಳು ಧೀರ್ಘಕಾಲದವರೆಗೆ ಆಮ್ಲಜನಕವನ್ನು ಉತ್ಪಾದಿಸುತ್ತವೆ) ಅಲ್ಲದೆ ಮಾವಿನ ಎಲೆಗಳಲ್ಲಿ ಔಷದೀಯ ಗುಣಗಳು ಹೇರಳವಾಗಿರುತ್ತವೆ ಮತ್ತು ಚರ್ಮರೋಗಗಳಿಗೆ ರಾಮಬಾಣವಾಗಿದೆ.

ಕಲಶದ ಮೇಲೆ ತೆಂಗಿನಕಾಯಿ ಇಡಬೇಕು.

ಪರಮಾತ್ಮನು ಜ್ಯೋತಿ ಸ್ವರೂಪನಾಗಿದ್ದಾನೆ. ಜ್ಯೋತಿ ಸ್ವರೂಪನಾದ ಭಗವಂತನನ್ನು ಕಲಶದಲ್ಲಿ ಆವಾಹನೆ ಮಾಡುತ್ತೇವೆ. ಕಲಶವೂ ಜ್ಯೋತಿ ಸ್ವರೂಪದಂತೆ ಕಾಣುತ್ತದೆ. ತೆಂಗಿನಕಾಯಿ ಬಗ್ಗೆ ಹೇಳಬೇಕಾದದ್ದೇನೂ ಇಲ್ಲ. ತೆಂಗಿನ ಮರದ ಯಾವುದೇ ಭಾಗವೂ ಕೆಲಸಕ್ಕೆ ಬಾರದೇ ಇಲ್ಲ. ಆದ್ದರಿಂದಲೇ ಅದಕ್ಕೂ ದೈವಸ್ಥಾನವನ್ನು ಕೊಟ್ಟು ಕಲ್ಪ ವೃಕ್ಷವೆಂದಿದ್ದೇವೆ. ಅಂತಹ ಪವಿತ್ರವಾದ ಮರದಲ್ಲಿ ಹುಟ್ಟಿದ ತೆಂಗಿನ ಕಾಯಿಯನ್ನು ಪರಮಾತ್ಮನಿಗೆ ಅರ್ಪಿಸುವುದರಿಂದ ಧನ್ಯತೆಯನ್ನು ಪಡೆಯುವುದರ ಉದ್ದೇಶವನ್ನಿಟ್ಟುಕೊಂಡು ತೆಂಗಿನ ಕಾಯಿಯನ್ನು ಪೂಜೆಯಲ್ಲಿ ಕಲಶದ ಮೇಲೆ ಇಡಲು ಬಳಸುತ್ತೇವೆ.

Also read: ಹಿಂದೂ ಸಂಪ್ರದಾಯದ ಪೂಜಾ ಸಾಮಗ್ರಿಗಳ ಮಹತ್ವ ಹಾಗೂ ಅದರಿಂದಾಗುವ ಫಲಗಳ ಬಗ್ಗೆ ತಿಳಿದುಕೊಳ್ಳಿ..