ಕಲಬುರ್ಗಿಯಲ್ಲಿ ಪತ್ತೆಯಾಗಿದ್ದು ವಿಶ್ವದ ಅತಿ ದೊಡ್ಡ ಫಿರಂಗಿ?

0
1827

ಕಲಾವಿದರಾದ ರಾಷ್ಟ್ರಪ್ರಶಸ್ತಿ ವಿಜೇತ ಮೊಹಮದ್‍ ಅಯಸುದ್ದೀನ್‍ ಪಟೇಲ್‍, ಇಂಡೊ- ಇಸ್ಲಾಮಿಕ್‍ ಸಂಶೋಧಕ ಡಾ. ರೆಹಮಾನ್‍ ಪಟೇಲ್‍ ಮತ್ತು ಬಹಮನಿ ರಾಜಮನೆತನದ ಸಂಶೋಧಕ ಮೊಹಮದ್‍ ಇಸ್ಲಾಮಿ ಅವರನ್ನೊಳಗೊಂಡ ಸಂಶೋಧರಕ ತಂಡ ಇತ್ತೀಚೆಗೆ ಕಲಬುರಗಿಯಲ್ಲಿ ಪತ್ತೆಹಚ್ಚಿದ ಫಿರಂಗಿ ವಿಶ್ವದ ಅತೀ ದೊಡ್ಡ ಫಿರಂಗಿ ಎಂದು ಹೇಳಿಕೊಂಡಿದ್ದಾರೆ.

ಬಹಮನಿ ಸುಲ್ತಾನ ಅಲಾಹುದ್ದೀನ್‍ ಹಸನ್‍ ಬಹಮನ್‍ ಶಾ ಆಡಳಿತದಲ್ಲಿ ನಿರ್ಮಾಣವಾದ ಗುಲ್ಬರ್ಗದ ಕೋಟೆಯ ಜಮಾ ಮಸೀದಿಯಲ್ಲಿ ಸಂಶೋಧನೆ ನಡೆಸುವಾಗ ಇತ್ತೀಚೆಗೆ ಈ ಫಿರಂಗಿ ಪತ್ತೆಯಾಗಿತ್ತು.

ಪ್ರಸ್ತುತ ವಿಶ್ವದಾಖಲೆ ಹೆಸರಿನಲ್ಲಿರುವುದು ರಷ್ಯಾದಲ್ಲಿ 1ನೇ ಶತಮಾನದಲ್ಲಿ ನಿರ್ಮಾಣವಾದ ಟ್ಸರ್‍ ಎಂಬ ಫಿರಂಗಿ ಹೆಸರಿನಲ್ಲಿದೆ. ಈ ಫಿರಂಗಿ 17.5 ಅಡಿಯಷ್ಟು ಉದ್ದವಿದೆ ಎಂದು ದಾಖಲೆ ಹೇಳುತ್ತವೆ.

ಆದರೆ ಭಾರತದಲ್ಲೇ ಇದಕ್ಕಿಂತ ಉದ್ದವಾದ ಮೂರು ಫಿರಂಗಿಗಳು ಭಾರತದಲ್ಲೇ ಇವೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಅತಿ ದೊಡ್ಡ ಫಿರಂಗಿ 23 ಅಡಿ ಉದ್ದವಿದೆ. ಇದು ಹೈದರಾಬಾದ್‍ನ ಕೌಲಾಸ್‍ ಕೋಟೆಯ ಪತ್ತೆಯಾಗಿದ್ದು, ರಜಪೂತ ವಂಶದ ದೊರೆ ಗೋಪಾಲ್‍ ಸಿಂಗ್‍ ಗೌರ್‍ ಕ್ರಿಸ್ತಪೂರ್ವ 1724ರಲ್ಲಿ ನಿರ್ಮಿಸಿದ್ದ ಎಂದು ಹೇಳಲಾಗಿದೆ. ಹೈದರಾಬಾದ್- ಕರ್ನಾಟಕ ಭಾಗದ ಕಲಬುರಗಿಯಲ್ಲಿ ಪತ್ತೆಯಾದ ಬಹಮನಿ ಸುಲ್ತಾನರು ನಿರ್ಮಿಸಿದ ಈ ಫಿರಂಗಿ 29 ಅಡಿ ಉದ್ದವಿದ್ದು, ವಿಶ್ವದಾಖಲೆಯಾಗಿದೆ ಎಂದು ಅಯಸುದ್ದೀನ್ ಪಟೇಲ್‍ ವಿವರಿಸಿದ್ದಾರೆ,

ಕಲಬುಗರಿಯಲ್ಲಿ ಪತ್ತೆಯಾದ ಈ ಫಿರಂಗಿಯನ್ನು ಬಾರಾ ಗಾಜಿ ಎಂದು ಹೆಸರಿಸಲಾಗಿದೆ. ಇದು ಒಟ್ಟಾರೆ 29 ಅಡಿ ಉದ್ದವಿದೆ. ಫಿರಂಗಿಯ ಸುತ್ತಳತೆ 7.6 ಅಡಿಯಷ್ಟಾಗಿದ್ದು ಉದ್ದ 2 ಅಡಿ ಹಾಗೂ ಬ್ಯಾರಲ್‍ 7 ಇಂಚು ದಪ್ಪಗಿದೆ ಎಂದು ಅವರು ವಿವರಿಸಿದ್ದಾರೆ.