ಕಾಲಿಫ್ಲವರ್ ಬಿರಿಯಾನಿ ಮಾಡುವ ವಿಧಾನ

0
883

ಬೇಕಾಗಿರುವ ಪದಾರ್ಥಗಳು ;

ಬಾಸ್ಮತಿ ಅಕ್ಕಿ-ಒಂದೂವರೆ ಕಪ್ಪು, ನೀರು-3 ಕಪ್ ಗಳು , ಒಂದು ಈರುಳ್ಳಿ, 2 ಹಸಿಮೆಣಸಿನಕಾಯಿ- ಇವೆರಡನ್ನು ನುಣ್ಣಗೆ ಪೇಸ್ಟ್ ಮಾಡಬೇಕು. ಟಮೋಟ ಸ್ಮಾಷ್-ಅರ್ಧಕಪ್. ಹಸಿಬಟಾಣಿ-1, ಹಿಡಿ ಕಾಲಿಫ್ಲವರ್(ಮೀಡಿಯಂಗೆ ಹೆಚ್ಚಿರುವುದು)- 1ಕಪ್ ತುಪ್ಪಾ-1ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು-ಸ್ವಲ್ಪ ತುರಿ.

ಮಸಾಲೆಗಾಗಿ ;

ಜೀರಿಗೆ-ಅರ್ಧ ಟೀ ಸ್ಪೂನ್, ಧನಿಯಾ ಪುಡಿ-ಸ್ವಲ್ಪ, ಏಲಕ್ಕಿ ಪುಡಿ-ಸ್ವಲ್ಪ, ಅರಿಶಿಣ-ಚಿಟಕಿ, ಶುಂಟಿ+ಬೆಳ್ಳುಳ್ಳಿ= 1 ಟೀ ಸ್ಪೂನ್, ಬಿರಿಯಾನಿ ಮಸಾಲೆ- 1 ಟೀ ಸ್ಪೂನ್,

ತಯಾರಿಸುವ ವಿಧಾನ ;

3 ಕಪ್ ಗಳಷ್ಟು ನೀರಿನಲ್ಲಿ ಬಾಸ್ಮತಿ ಅಕ್ಕಿಯನ್ನು ಸುರಿದು ಬೆಯಿಸಿಕೊಳ್ಳಿರಿ. ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ,ಅದರೊಳಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿಪೆಸ್ಟ್ ನ್ನು ಹಾಕಿ ಘಮ ಘಮ ಸುವಾಸನೆ ಬರುವವರೆಗು ಬಾಡಿಸಬೆಕು, ಆ ನಂತರ ಟಮೋಟೊಪೆಸ್ಟ್, ಹಸಿ ಬಟಾಣಿ, ಕಾಲಿಫ್ಲವರ್ ಹೋಳುಗಳನ್ನು ಹಾಕಿ ಚೆನ್ನಾಗಿ ಬೆರೆಸಬೇಕು. ಈ ಪದಾರ್ಥಗಳೆಲ್ಲವೂ ಮೃದುವಾಗಿ ಆಗುವವರೆಗೂ ಬಿಡಿ. ಉರಿಯನ್ನು ಸಿಮ್ ಲ್ಲಿ ಇರಿಸಿ. ಅಗತ್ಯಬಿದ್ದರೇ ಸ್ವಲ್ಪ ನೀರು ಚಿಮುಕಿಸಿರಿ. ಕೊನೆಯದಾಗಿ ಈ ಮಿಶ್ರಣವು ಬಾಣಲೆಯ ಮೇಲಿರುವಂತೆಯೇ ಮುಂಚೆಯೇ ಬೇಯಿಸಿಟ್ಟುಕೊಂಡ ಅನ್ನವನ್ನು ಅದಕ್ಕೆ ಸುರಿದು ಸ್ಟೀಲ್ ಕೈನಿಂದ ಚೆನ್ನಾಗಿ ಬೆರೆಸಿರಿ. ಇಳಿಸಿ ಐದು ನಿಮಿಷ ಬಿಟ್ಟು ಅದಕ್ಕೆ ಕೊತ್ತಂಬರಿ ಸೊಪ್ಫು ಹಾಕಿ. ಸರ್ವ್ ಮಾಡಿ ತಿಂದರೇ ಸ್ವಾದಿಷ್ಟವಾಗಿರುತ್ತದೆ.