ಹಿಂದೂ ಸಮಾಜ ದೇಶದಲ್ಲಿ ಲಕ್ಷ ಲಕ್ಷ ಮಸೀದಿ-ಚರ್ಚ್-ಗಳಿಗೆ ಜಾಗ ಕೊಟ್ಟಿದೆ, ಆದರೂ ನಮ್ಮನ್ನು ಜಾತ್ಯಾತೀತ ಅಂತ ಕರೆಯೋಲ್ಲ: ಕಲ್ಲಡ್ಕ; ಇವರ ಮಾತನ್ನು ಒಪ್ಪುತ್ತೀರಾ??

0
99

ಮತಾಂತರ ಈ ದೇಶದ ಅತಿದೊಡ್ಡ ಪಿಡುಗು. ವಿವಿಧ ಕಾರಣದಿಂದಾಗಿ ಈ ದೇಶದ ಅನೇಕ ಜನರನ್ನು ಮತಾಂತರ ಮಾಡಲಾಗಿದೆ. ಆದರೆ, ಇದು ಕ್ರಿಸ್ತ, ಪೈಗಂಬರನ ದೇಶವಲ್ಲ ಬದಲಾಗಿ ಕೃಷ್ಣನ ದೇಶ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು” ಹಿಂದೆ ಸ್ವಾತಂತ್ರ್ಯ ಪೂರ್ವದಲ್ಲಿ ಮುಸ್ಲಿಂ ಲೀಗ್, ‘ನಮಗೂ ಹಿಂದುಗಳಿಗೂ ಸರಿ ಹೋಗಲ್ಲ. ನಮಗೆ ಬೇರೆಯದೇ ಭೂಮಿ ಕೊಡಿ ಹೋಗ್ತೀವಿ,’ ಅಂತ ಹೇಳಿದರು. ಆದರೆ ಹಿಂದುಗಳ ಪರವಾಗಿ ಯಾರು ಇದ್ರು ಎಂದು ಆರ್‌ಎಸ್‌ಎಸ್‌ ನಾಯಕ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆಮಾಡಿ. ದೇಶದ ಲಕ್ಷ ಲಕ್ಷ ಮಸೀದಿಗಳು, ಚರ್ಚ್‌ಗಳಿಗೆ ಭೂಮಿ ಕೊಟ್ಟಿದ್ದು ನಾವೇ ಎಂದು ಹೇಳಿದ್ದಾರೆ.

ರಾಮನಗರದಲ್ಲಿ ಇಂದು ಆರ್​ಎಸ್​ಎಸ್​ ಪಥಸಂಚಲನ ನಡೆಸಿ ನಂತರ ಮಾತನಾಡಿರುವ ಕಲ್ಲಡ್ಕ ಪ್ರಭಾಕರ್, “ಮುನೇಶ್ವರ ಸ್ವಾಮಿಯ ಕಲ್ಲಿನ ಮೇಲೆ ಕಲ್ಲುಗಳನ್ನು ಹಾಕಿ ಏಸುವಿನ ಶಿಲುಬೆ ನಿಲ್ಲಿಸಲು ಕೆಲವರು ಹಾತೊರೆಯುತ್ತಿದ್ದಾರೆ. ಈಗಾಗಲೇ 13 ಅಡಿ ಎತ್ತರದಲ್ಲಿ ನಿಲ್ಲಿಸಲಾಗಿರುವ ಏಸುವಿನ ಶಿಲೆಯನ್ನು ಭವಿಷ್ಯದಲ್ಲಿ 114 ಅಡಿ ಎತ್ತರಕ್ಕೆ ಏರಿಸಲು ಹೊರಟಿದ್ದಾರೆ. ಪಕ್ಕದಲ್ಲಿನ ಕೆರೆಯನ್ನು ಫಾದರಿ ಕೆರೆ ಅಂತಾರೆ. ಆದರೆ, ಅಲ್ಲಿ ಯಾವ ಫಾದರಿ ಬಿದ್ದು ಸತ್ತನೋ ನನಗಂತೂ ಗೊತ್ತಿಲ್ಲ. ಮತಾಂತರ ಈ ದೇಶದ ಅತಿದೊಡ್ಡ ಪಿಡುಗು. ವಿವಿಧ ಕಾರಣದಿಂದಾಗಿ ಈ ದೇಶದ ಅನೇಕ ಜನರನ್ನು ಮತಾಂತರ ಮಾಡಲಾಗಿದೆ. ಆದರೆ, ಇದು ಕ್ರಿಸ್ತ, ಪೈಗಂಬರನ ದೇಶವಲ್ಲ ಬದಲಾಗಿ ಕೃಷ್ಣನ ದೇಶ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು”.

ಎಲ್ಲಾ ಸಮುದಾಯಗಳನ್ನು ಒಪ್ಪಿ, ಅಪ್ಪಿಕೊಳ್ಳುವ ಸಮಾಜವೆಂದರೆ ಅದು ಹಿಂದೂ ಸಮಾಜ. ದೇಶದ ಲಕ್ಷ ಲಕ್ಷ ಮಸೀದಿಗಳು, ಚರ್ಚ್‌ಗಳಿಗೆ ಭೂಮಿ ನೀಡಿದವರು ನಾವು. ಆದರೂ ಹಿಂದೂ ಸಮಾಜ ಜಾತ್ಯಾತೀತ ವಿರೋಧಿನಾ? ಹಿಂದೆ ಸ್ವಾತಂತ್ರ್ಯ ಪೂರ್ವದಲ್ಲಿ ಮುಸ್ಲಿಂ ಲೀಗ್, ‘ನಮಗೂ ಹಿಂದುಗಳಿಗೂ ಸರಿ ಹೋಗಲ್ಲ. ನಮಗೆ ಬೇರೆಯದೇ ಭೂಮಿ ಕೊಡಿ ಹೋಗ್ತೀವಿ,’ ಅಂತ ಹೇಳಿದರು. ಆದರೆ ಹಿಂದುಗಳ ಪರವಾಗಿ ಯಾರು ಇದ್ರು? ಹಿಂದುಗಳು ಕಾಂಗ್ರೆಸ್ ನಮ್ಮ ಪರವಾಗಿ ನಿಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಕಾಂಗ್ರೆಸ್ ಹಿಂದುಗಳ ಪರ ನಿಲ್ಲಲೇ ಇಲ್ಲ. ನಂತರ ಗೋಳ್ವಲ್ಕರ್ ಹಿಂದುಗಳ ಪರ ನಿಂತರು ಎಂದರು. “ಇಲ್ಲೇ ಇದ್ದುಕೊಂಡು ಪಾಕಿಸ್ತಾನಕ್ಕೆ ಜೈ ಅಂತಾರೆ. ಆದರೆ ಪಾಕಿಸ್ತಾನಕ್ಕೆ ಜೈ ಅನ್ನೋರು ಪಾಕಿಸ್ತಾನಕ್ಕೆ ಹೋಗಲ್ಲ‌. ಅವರು ಸಹ ಇಲ್ಲೇ ಇರುತ್ತಾರೆ. ಯಾಕೆಂದರೆ ಮುಸಲ್ಮಾನರು ಅತ್ಯಂತ ಸಂತೋಷವಾಗಿ ಬದುಕುತ್ತಿರುವುದು ಭಾರತದಲ್ಲಿ ಮಾತ್ರ. ಸಿಎಎ ಮೂಲಕ ಪೌರತ್ವ ಕೊಡ್ತಾ ಇದ್ದಾರೆ, ಪೌರತ್ವ ಕಿತ್ತುಕೊಳ್ಳುತ್ತಿಲ್ಲ,” ಎಂದು ಹೇಳಿದರು.

ಸ್ವತಂತ್ರ ಭಾರತದ ವೇಳೆ ದುರ್ಬಲ ಹಾಗೂ ಹೇಡಿ ನಾಯಕತ್ವವಿತ್ತು. ಆದರೆ ಇದೀಗ ದೇಶದಲ್ಲಿ ಅತ್ಯಂತ ಪ್ರಬಲವಾದ ನಾಯಕತ್ವ ಅಧಿಕಾರ ನಡೆಸುತ್ತಿದ್ದು, ಪಾಕಿಸ್ತಾನಕ್ಕೆ ನಮ್ಮನ್ನ ಕೆಣಕುವುದು ಕಷ್ಟದ ಕೆಲಸವಾಗಿದೆ. ಭಯೋತ್ಪಾದಕರನ್ನು ನಿರ್ಮಾಣ ಮಾಡುವಂತಹ ಕಾರ್ಖಾನೆ ಪಾಕಿಸ್ತಾನವಾಗಿದ್ದು, ಅದು ಪಾಪಿಗಳ ರಾಜ್ಯ ಪಾಕಿಸ್ತಾನವಾಗಿದೆ. ಎಂದು ಹೇಳಿದ ಅವರು ಹೊರದೇಶದಿಂದ ಬಂದು ದೇಶದಲ್ಲಿರುವ ಎರಡ್ಮೂರು ಕೋಟಿ ಜನರಿಗೆ ರೇಷನ್ ಕಾರ್ಡ್ ಕೊಟ್ಟಿಲ್ಲ. ಭೂಮಿ ಕೊಟ್ಟಿಲ್ಲ, ಏನೇನೂ ಕೊಟ್ಟಿಲ್ಲ. ಆ ಹಿಂದೂ ಸಮಾಜಕ್ಕೆ ನ್ಯಾಯ ಕೊಡುವುದಕ್ಕಾಗಿ ಪೌರತ್ವ ಕಾಯ್ದೆ ತಂದಿರುವುದು. ಪೌರತ್ವವನ್ನು ಕೊಡುತ್ತಿರುವುದೇ ವಿನಃ ತೆಗೆಯುತ್ತಿರುವುದಲ್ಲ ಎಂದು ಪೌರತ್ವ ಕಾಯ್ದೆ ತಿದ್ದುಪಡಿ. ಎಂದು ಆರ್‍ಎಸ್‍ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಪಥಸಂಚಲನದಲ್ಲಿ ಹೇಳಿದ್ದಾರೆ.

Also read: ಕರ್ನಾಟಕದಲ್ಲಿ ಹುಟ್ಟುತ್ತಿರುವ ಬಹುತೇಕ ಕೆಲಸಗಳು ಪರ ರಾಜ್ಯದವರ ಪಾಲಾಗುತ್ತಿದೆಯೆಂದು ಇದೇ 13ರಂದು ಕನ್ನಡ ಪರ ಸಂಘಟನೆಯಿಂದ ಭಾರೀ ಹೋರಾಟ; ಈ ಹೋರಾಟಕ್ಕೆ ನಿಮ್ಮ ಬೆಂಬಲವಿದೆಯೇ ??