ಕಾಲು-ಬಾಯಿ ರೋಗ:ಹಾಲನ್ನು ಮೊದಲು ಚೆನ್ನಾಗಿ ಕಾಯಿಸಿ ಉಪಯೋಗಿಸಿ

0
867

ಬೆಂಗಳೂರು: ಜಾನುವಾರಗಳಿಗೆ ಮಾರಕವಾಗಿರುವ ಕಾಲು-ಬಾಯಿ ರೋಗ ರಾಜ್ಯದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಬೆಂಗಳೂರಿಗೆ ಹಾಲಿನ ಉತ್ಪನ್ನಗಳ ಮೂಲವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಾನುವಾರಗಳಿಗೆ ಕಾಲು-ಬಾಯಿ ರೋಗ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಹೆಚ್ಚು ಆತಂಕವಾಗಿದೆ.

ಚಿಕ್ಕಬಳ್ಳಾಪುರ ಭಾಗದಲ್ಲಿ ಈ ರೋಗದ ವೈರಾಣುವಿನ ಪ್ರಭೇಧಗಳನ್ನೊಳಗೊಂಡ ಕಾಲುಬಾಯಿ ಜ್ವರ ಟ್ರೈವೆಲಂಟ್ (O,A,Asia-01) ಸಂಬಂಧಿತ ಲಸಿಕೆಯನ್ನು ಹಾಕಬೇಕಾಗುತ್ತದೆ ಎಂದು ಚಿಕ್ಕಬಳ್ಳಾಪುರ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಪಾಂಡುರಂಗಪ್ಪ ತಿಳಿಸಿದ್ದಾರೆ.

ಮೂಲಗಳ ಪ್ರಕಾರ 42 ಜಾನುವಾರಗಳಿಗೆ ಕಾಲುಬಾಯಿ ರೋಗದ ವೈರಸ್ ಸೋಂಕಿರುವುದು ಕಂಡುಬಂದಿದ್ದು, ಈಗಾಗಲೇ ಈ ಸೋಂಕಿನಿಂದಾಗಿ ಎರಡು ಕರುಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. ಬಹಿರಂಗ. ಕೋಲಾರ ಹಾಲು ಉತ್ಪಾದಕರ ಸಂಘದ ವ್ಯವಸ್ಥಾಪಕ ನಿರ್ದೇಶಕರು ಹೇಳುವಂತೆ “ರೋಗದ ಸೋಂಕು ಕಾಣಿಸಿರುವ ಬಗ್ಗೆ ತಿಳಿದುಬಂದ ಹಳ್ಳಿಗಳ ರೈತರಿಂದ ಹಾಲು ಖರೀದಿ ಮಾಡುವುದನ್ನು ನಿಲ್ಲಿಸಲಾಗಿದೆ. ಅಲ್ಲದೇ ಚಿಕಿತ್ಸೆ ನೀಡುವ ನಿತ್ಟಿನಲ್ಲಿ ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ವೈರಸ್ ನಾಲ್ಕು ಹಂತಗಳಲ್ಲಿ ಹಡುತ್ತದೆ. ಎ, ಸಿ, ಏಷಿಯಾ 1 ಮತ್ತು ಒ ಪ್ರಸ್ತುತ ಸೋಂಕಿತ ಜಾನುವಾರುಗಳಲ್ಲಿ ಒ ಸ್ಟ್ರೈನ್ ಪಾಸಿಟಿವ್ ಇರುವುದು ಕಂಡು ಬಂದಿದ್ದು, ಕರ್ನಾಟಕ ಹಾಲು ಒಕ್ಕೂಟ ಪ್ರದೇಶದಲ್ಲಿ ರೈತರು ಮತ್ತು ಡೈರಿಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನಕೊಡುವ ಅಗತ್ಯವಿದ್ದು, ಜಾನುವಾರಗಳಲ್ಲಿ ಈ ರೋಗದ ಬಗ್ಗೆ ಗಮನಕ್ಕೆ ಬಂದ ಕೂಡಲೇ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಸುರಕ್ಷಿತ ಕ್ರಮಗಳನ್ನು ಪಡೆದುಕೊಳ್ಲುವುದು ಉತ್ತಮ.

ಬಾಯಿ, ನಾಲಿಗೆ ವಸಡಿನ ಮೇಲ್ಪದರೆ ಒಡೆದು ನೀರ್ಗುಳ್ಳೆಗಳಾಗುತ್ತವೆ. ಇದರಿಂದ ಮೇವು ತಿನ್ನಲು ಆಗುವುದಿಲ್ಲ. ಕಾಲಿನ ಗೊರಸುಗಳಲ್ಲಿಯೂ ನೀರ್ಗುಳ್ಳೆಗಳು ಕಾಣಿಸಿಕೊಂಡು ಹುಳ ಬೀಳುತ್ತದೆ. ಇದರಿಂದ ನಡೆಯಲಾರದೆ ರಾಸುಗಳು ನಿತ್ರಾಣಗೊಳ್ಳುತ್ತವೆ. ಗರ್ಭಧರಿಸಿದ್ದರೆ ರಾಸುಗಳಿಗೆ ಗರ್ಭಸ್ರಾವ ಆಗುತ್ತದೆ ಮತ್ತೆ ಮುಂದೆ ಗರ್ಭ ಧಾರಣೆಯ ಸಾಧ್ಯತೆಯೂ ಕ್ಷೀಣಿಸುತ್ತದೆ’ ಇದು ಕಾಲುಬಾಯಿ ರೋಗದಿಂದಾಗುವ ತೊಂದರೆಗಳಾಗಿದೆ

ಒಂದು ವೇಳೆ ರೈತರಿಂದ ನೇರವಾಗಿ ಹಾಲು ಖರೀದಿ ಮಾಡುವವರು ಮುಂಜಾಗ್ರುತಾ ಕ್ರಮವಾಗಿ ಹಾಲನ್ನು ಕುದಿಸಿ ಬಳಿಕ ಉಪಯೋಗಿಸುವು ಉತ್ತಮ. ಹೀಗೆ ಹಾಲನ್ನು ಕುದಿಸಿ ಉಪಯೋಗಿಸುವುದರಿಂದ ಅದರಲ್ಲಿರುವ ಬ್ಯಾಕ್ಟಿರಿಯಾಗಳು ಸಾಯುತ್ತವೆ. ಕುದಿಸಿ ಉಪಯೋಗಿಸುವ ಹಾಲಿನಿಂದ ಇಂತಹ ರೋಗಗಳು ಹರಡುವುದು ಕಡಿಮೆ ಎಂದು ಸಲಹೆ ನೀಡಿದ್ದಾರೆ.