ನಿಮಗೆ 30 ವರ್ಷವಾದರೂ ಕಂಕಣ ಭಾಗ್ಯ ಕೂಡಿಬಂದಿಲ್ಲವೇ? ಹಾಗಾದ್ರೆ ಈ ದೇವಾಲಯಗಳಿಗೆ ಭೇಟಿ ನೀಡಿ 90 ದಿನಗಳಲ್ಲೆ ಕಂಕಣ ಭಾಗ್ಯ ಕೂಡಿ ಬರುತ್ತೆ..

0
3377

ಪ್ರತಿಯೊಬ್ಬರ ಜೀವನದಲ್ಲಿ ವಿವಾಹ ಎಂಬುವುದು ಒಂದು ಭಾಗವಾಗಿದೆ. ಹಾಗೆಯೇ ಒಂದು ಗಂಡಿಗೆ ಒಂದು ಹೆಣ್ಣು ಇದ್ದೆ ಇರುತ್ತದೆ ಅಂತೆ. ಆದರೆ ಕೆಲವೊಂದು ದೋಷಗಳಿಂದ, ಇಲ್ಲ ಮದುವೆಯ ಪ್ಲಾನಿಂಗ್ ವಿಳಂಭವಾದರಿಂದ ಬೇಗನೆ ಕಂಕಣ ಭಾಗ್ಯ ಕೂಡಿ ಬಂದಿರುವುದಿಲ್ಲ, ಇವೆಲ್ಲ ಕಾರಣಗಳಿಂದ ನಿಮ್ಮ ಬಾಳ ಸಂಗಾತಿಯನ್ನು ಹುಡುಕುವುದು ಕಷ್ಟವಾಗಿರುತ್ತೆ. ಮನೆಯವರು ಕೂಡ ಎಷ್ಟೋ ಹಣವನ್ನು ಕರ್ಚು ಮಾಡಿ ದೂರ ಊರಿಗೆ ಹೋಗಿ ನೋಡಿದರು ಏನಾದ್ರು ಒಂದು ಎಡವಟ್ಟು ಕಂಡು ಬಂದು ವರ ಅಥವಾ ವಧು ಸಿಗೋದೆ ಇಲ್ಲ. ಆದಕಾರಣ ಮನೆಯರಿಗೆ ಮತ್ತು ಮದುವೆಯಾಗುವರಿಗೆ ಪ್ರತಿನಿತ್ಯವೂ ಹಿಂಸೆಯಾಗುತ್ತಿರುತ್ತದೆ. ಇಂತಹ ಚಿಂತೆ ಇರುವವರು, ಇನ್ಮುಂದೆ ಚಿಂತೆ ಬೀಡಿ ಮೊದಲು ಈ ಮಾಹಿತಿ ನೋಡಿ.

Also read: ಕಂಕಣ ಭಾಗ್ಯ ಕೂಡಿ ಬರಲು.. ಮಕ್ಕಳಾಗಲು.. ಮೇಲುಕೋಟೆಯ ನರಸಿಂಹ ಸ್ವಾಮಿಯನ್ನೊಮ್ಮೆ ದರ್ಶನ ಮಾಡಿ ಬನ್ನಿ

ಈ ದೇವಾಲಯಕ್ಕೆ ಹೋದರೆ ಕಂಕಣ ಭಾಗ್ಯ?

ಹೌದು ನಿಮಗೆ 30 ವರ್ಷವಾದರೂ ಕಂಕಣ ಭಾಗ್ಯ ಕೂಡಿಬಂದಿಲ್ಲ ಕೊರಗುವ ಯುವಕ, ಯುವತಿಯರಿಗೆ ವಿವಾಹ ಭಾಗ್ಯ ಒದಗಬೇಕಾದರೆ ನೀವು ತಂಜಾವೂರಿನಲ್ಲಿರುವ ಈ ಮೂರು ದೇವಾಲಯಗಳಿಗೆ ಭೇಟಿ ನೀಡಿದ್ದರೆ 90 ದಿನಗಳಲ್ಲಿ ವಿವಾಹ ಭಾಗ್ಯ ಕೂಡಿ ಬರುತ್ತದೆ ಅಂತೆ, ಆದಕಾರಣ ಪ್ರತಿನಿತ್ಯವೂ ನೂರಾರು ಸಂಖ್ಯೆಯಲ್ಲಿ ತಮಿಳುನಾಡಿನ ತಂಜಾವೂರಿನಲ್ಲಿರುವ ಈ ಮೂರೂ ದೇವಾಲಯಗಳಿಗೆ ಭೇಟಿ ನೀಡುತ್ತಾರೆ, ಹಾಗಾದ್ರೆ ಅಲ್ಲಿಗೆ ಹೋಗುವುದು ಹೇಗೆ ಅಂತ ಇಲ್ಲಿದೆ ನೋಡಿ.

ತಿರುವೆಲ್ವಿ ಕುಡಿ;

ವೇಲ್ವಿ ಅಂದರೆ ಹೋಮ, ಕುಡಿ ಅಂದರೆ ಗುಡಿ ಎಂದರ್ಥ. ಶಿವ ಪಾರ್ವತಿಯರು ಮದುವೆಯಾದ ಸಂದರ್ಭ ಹೋಮ ನಡೆಸಿದ್ದು ಇದೇ ಸ್ಥಳದಲ್ಲಂತೆ. ಹಾಗಾಗಿ ಈ ದೇವಸ್ಥಾನಕ್ಕೆ ತಿರುವೆಲ್ವಿ ಕುಡಿ ಎಂಬ ಹೆಸರು ಬಂದಿದೆ.

ಕಲ್ಯಾಣ ಸುಂದರೇಶ್ವರ;

ಮದುವೆ ವಿಳಂಬವಾಗುತ್ತಿರುವವರು, ಇನ್ನೂ ಮದುವೆಯಾಗದವರು ಈ ದೇವಸ್ಥಾನಕ್ಕೆ ಹೋದರೆ 1 ವರ್ಷದೊಳಗಾಗಿ ವಿವಾಹ ಭಾಗ್ಯ ಕೂಡಿ ಬರುತ್ತದಂತೆ. ಇಲ್ಲಿನ ದೇವರನ್ನು ಕಲ್ಯಾಣ ಸುಂದರೇಶ್ವರ ಎನ್ನುತ್ತಾರೆ. ಹಾಗೆಯೇ ಮನವಾಲೇಶ್ವರ ಎಂದೂ ಕರೆಯುತ್ತಾರೆ.

ಸ್ವಯಂಭೂ ಶಿವಲಿಂಗ;

ಈ ದೇವಾಲಯದಲ್ಲಿ ಕಾಣಬಹುದಾದ ಶಿವನ ಮೂರ್ತಿಯು ಸ್ವತಃ ತಾನೇ ಪ್ರಕಟವಾಗಿದ್ದು ಎಂದು ಹೇಳಲಾಗುತ್ತದೆ, ಆದ್ದರಿಂದ ಇದನ್ನು ಸ್ವಯಂಭೂ ಎಂದು ಕರೆಯಲಾಗುತ್ತದೆ. ಪೂರ್ವಾಭೀಮುಖವಾಗಿರುವ ಈ ವಿಗ್ರಹವನ್ನು ಪೂಜಿಸಲು ಭಕ್ತರು ದೇಶದ ಮೂಲೆಮೂಲೆಗಳಿಂದ ಬರುತ್ತಾರೆ. ಈ ದೇವಸ್ಥಾನದ ವಿಶೇಷತೆ ಎಂದರೆ ವಿವಾಹವಾಗದೇ ಇರುವ ಹುಡುಗ ಅಥವಾ ಹುಡುಗಿ ತನ್ನ ಹೆತ್ತವರ ಜೊತೆ ಬಂದು ಈ ದೇವಸ್ಥಾನದಲ್ಲಿ ಪ್ರಾರ್ಥಿಸಬೇಕು. ಹೀಗೆ ಕ್ರಮೇಣ ಮಾಡುವುದರಿಂದ ಶೀಘ್ರವೇ ವಿವಾಹವಾಗುತ್ತದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಪೂಜೆ ಸಲ್ಲಿಸುವ ಪದ್ಧತಿ:

Also read: ಮದುವೆಯಾಗಲು ನಾನಾ ಸಂಕಷ್ಟ ಬರುತ್ತಿದ್ದರೆ, ಈ ದೇವಾಲಯಕ್ಕೆ ಭೇಟಿ ಕೊಡಿ, ನಿಮಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ..

ಇಲ್ಲಿನ ವಿಶೇಷತೆ ಎಂದರೆ ವಿವಾಹವಾಗದಿರುವ ಮಹಿಳೆಯರು ಗಾಜಿನ ಬಳೆಗಳ ಮಾಲೆಯನ್ನು ಮಾಡಿ ದೇವಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಕಂಕಣ ಭಾಗ್ಯ ಕೂಡಿ ಬರುತ್ತದೆ ಎನ್ನಲಾಗುತ್ತದೆ.

ಭೇಟಿಯ ಸಮಯ:

ಈ ದೇವಸ್ಥಾನವು ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 7 ಗಂಟೆಯ ವರೆಗೆ ಭಕ್ತರಿಗಾಗಿ ತೆರೆದಿರುತ್ತದೆ.

ವಿಳಾಸ:

ಮೇಂಬಲಂ ಆರ್ಡಿ,
ಬಾಲಗಾನಪತಿ ನಗರ,
ತಂಜಾವೂರು, ತಮಿಳುನಾಡು 613007
(Membalam Rd, Balaganapathy Nagar, Thanjavur, Tamil Nadu 613007).