ಕುದುರೆ ರೇಸಿಂಗ್ ಗೆ ಇಲ್ಲದ ನಿರ್ಬಂಧ ಕಂಬಳಕ್ಕೆ ಯಾಕೆ ??

0
974

ಕಂಬಳ ನಡೆಸುವುದನ್ನು ಪ್ರಶ್ನಿಸಿ ‘ಪೇಟಾ’ ಕೋರ್ಟ್ ಗೆ 

ಕಂಬಳ ನಡೆಸುವುದನ್ನು ಪ್ರಶ್ನಿಸಿ ಪ್ರಾಣಿ ದಯಾ ಸಂಘ ‘ಪೇಟಾ’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮನಧಿವಿ ಆಲಿಸಿದ ಹೈಕೋರ್ಟ್‌,ಕಳೆದ ನ.22ರಂದು, ಸುಪ್ರೀಂಕೋರ್ಟ್‌ ಇತ್ತೀಚೆಗೆ ಜಲ್ಲಿಕಟ್ಟು ಸಂಬಂಧ ನೀಡಿರುವ ತೀರ್ಪು ಆಧರಿಸಿ ಈ ಪಿಐಎಲ್‌ ಇತ್ಯರ್ಥವಾಗುವವರೆಗೆ ಆಯೋಜಕರು ಯಾವುದೇ ರೀತಿಯಲ್ಲೂ ಕಂಬಳ ನಡೆಸುವಂತಿಲ್ಲ. ನಾಲ್ಕು ವಾರಗಳಲ್ಲಿ ಎಲ್ಲ ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಬೇಕೆಂದು ಆದೇಶ ನೀಡಿತ್ತು.

‘ಸುಪ್ರೀಂಕೋರ್ಟ್‌ ಆದೇಶದ ನಂತರ ಕೇಂದ್ರ ಸರಕಾರ ಜಲ್ಲಿಕಟ್ಟುಗೆ ನಿರ್ಬಂಧ ವಿಧಿಸುವ ಮುನ್ನ ನಿಜವಾಗಿಯೂ ಪ್ರಾಣಿಗಳಿಗೆ ಹಿಂಸೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿ ರಚನೆ ಮಾಡಿತ್ತು. ಅದರಂತೆ ರಾಜ್ಯ ಸರಕಾರ ಕೂಡ ಕಂಬಳ ಕ್ರೀಡೆಯಲ್ಲಿ ಕೋಣಗಳನ್ನು ಹಿಂಸಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಪಶುಸಂಗೋಪನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಆರು ಮಂದಿಯ ತಜ್ಞರ ಸಮಿತಿ ರಚಿಸಿದೆ. ಈ ಹಿನ್ನೆಲೆಯಲ್ಲಿ ಕಂಬಳಕ್ಕೆ ವಿಧಿಸಿರುವ ನಿರ್ಬಂಧ ತೆರವುಗೊಳಿಸಬೇಕು,’ ಎಂದು ಕೋರಲಾಗಿದೆ.

‘ಕಂಬಳ ಕ್ರೀಡೆಗೆ ಬಳಸುವ ಕೋಣಗಳು, ರೇಸಿಂಗ್‌ಗೆ ಮೀಸಲಾದವುಗಳಲ್ಲ. ಹಾಗಾಗಿ ಅವುಗಳನ್ನು ಕಂಬಳ ಕ್ರೀಡೆಗೆ ಬಳಸಲು ಕಾಯಿದೆಯಿಂದ ವಿನಾಯಿತಿ ನೀಡಲಾಗದು. ಸುಪ್ರೀಂಕೋರ್ಟ್‌ ಅನಿಮಲ್‌ ವೆಲ್‌ಫೇರ್‌ ಬೋರ್ಡ್‌ ಆಫ್‌ ಇಂಡಿಯಾ ಮತ್ತು ಎ.ನಾಗರಾಜ ನಡುವಿನ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಅನ್ವಯ ಕಂಬಳ ಕ್ರೀಡೆಗೆ ಅನುಮತಿ ನೀಡಲಾಗದು, ‘ಎಂದು ನ್ಯಾಯಪೀಠ ಹೇಳಿತ್ತು.

ಕರಾವಳಿ ಭಾಗದ ಜನಪ್ರಿಯ ಕ್ರೀಡೆ ಕಂಬಳ ಆಯೋಜಿಸದಂತೆ ವಿಧಿಸಿರುವ ನಿರ್ಬಂಧ ತೆರವು ಕೋರಿ ಉಡುಪಿ ಜಿಲ್ಲಾ ಕಂಬಳ ಸಮಿತಿ ಸಲ್ಲಿಸಿದ್ದ ಮಧ್ಯಾಂತರ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.