ಕರಾವಳಿಯ ಸಂಪ್ರದಾಯ ಕ್ರೀಡೆ ಕಂಬಳಕ್ಕೆ ಹೈಕೋರ್ಟ್ ನಿಷೇಧವೇರಿದೆ.

0
757

ಬೆಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಾಂಪ್ರದಾಯಿಕ ಅಚರಣೆಯಾದ ಕಂಬಳ ಕ್ರೀಡೆಗೆ ಹೈಕೋರ್ಟ್ ನಿಷೇಧ ಹೇರಿ ಮಂಗಳವಾರ ಆದೇಶ ನೀಡಿದೆ.

ಕಂಬಳ ಕ್ರೀಡೆಗೆ ಮೇಲೆ ಹೇರಲಾಗಿರುವ ನಿರ್ಬಂಧವನ್ನು ಖಂಡಿಸಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಂಬಳ ಸಮಿತಿಯು ಈ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು, ಸಂಸತ್ನಲ್ಲಿ ನಿಯಮ ತಿದ್ದುಪಡಿಗೆ ಒತ್ತಾಯ ಹೇರಲು ಹಾಗೂ ಜಿಲ್ಲೆಯಲ್ಲಿ ಬೃಹತ್ ಜನಾಂದೋಲನ ಪ್ರತಿಭಟನೆ ನಡೆಸಿದ್ದರು ಆದರೆ ಯಾವುದೇ ಪ್ರಯೋಜನವಾಗಿಲ್ಲ. ಪ್ರಾಣಿ ಹಿಂಸೆ ಕಾರಣದಿಂದಾಗಿ ಕರಾವಳಿಯ ಸಂಪ್ರದಾಯ  ಕ್ರೀಡೆ ಕಂಬಳಕ್ಕೆ ಹೈಕೋರ್ಟ್ ನಿಷೇಧವೇರಿದೆ.

ಕಂಬಳ ನಿಷೇಧ ಕುರಿತಂತೆ ಪೀಪಲ್‌ ಫಾರ್‌ ಎಥಿಕಲ್ ಟ್ರೀಟ್‌ಮೆಂಟ್‌ ಆಫ್ ಅನಿಮಲ್ಸ್‌ (ಪೆಟಾ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಕಂಬಳ ಓಟ ಪ್ರಾಣಿಗಳ ಮೇಲೆ ಎಸಗುವ ಹಿಂಸೆ. ಕೋಣಗಳನ್ನು ಕೃಷಿ ಚಟುವಟಿಕೆಗೆ ಹೊರತುಪಡಿಸಿ ಕಂಬಳ ಓಟದ ಉದ್ದೇಶಕ್ಕೆ ಬಳಸುವುದನ್ನು ಒಪ್ಪಲು ಸಾಧ್ಯವಿಲ್ಲ. ಇದರಿಂದ ಅವು ಹಿಂಸೆಗೆ ಒಳಗಾಗುತ್ತವೆ.  ಪ್ರಾಣಿಗಳ ಮೇಲಿನ ಹಿಂಸೆ ತಡೆ ಕಾಯ್ದೆ–1960ರ ಅನುಸಾರ ಕಂಬಳ ಆಯೋಜನೆಗೆ ತಡೆ ನೀಡಲಾಗುತ್ತಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಕಂಬಳ ಓಟವು ಕರಾವಳಿ ತೀರದ ಸಾಂಪ್ರದಾಯಿಕ ಆಚರಣೆಯಾಗಿದ್ದು ಇಲ್ಲಿನ ಜನರ ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಇದಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ. ಕಂಬಳ ಕ್ರೀಡೆಯಲ್ಲಿ ಓಡಲು ಕೋಣಗಳು ದೈಹಿಕ ಸಾಮರ್ಥ್ಯ ಹೊಂದಿವೆ. ಇದಕ್ಕೆ ಹಲವು ದಾಖಲೆಗಳಿವೆ  ಎಂದು ಕಂಬಳ ಕ್ರೀಡೆ ಆಯೋಜಕರ ಪರ ಹಾಜರಿದ್ದ ಹಿರಿಯ ವಕೀಲ ಬಿ.ವಿ.ಆಚಾರ್ಯ ನ್ಯಾಯಾಧೀಶರಿಗೆ ತಿಳಿಸಿದರು.

ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ ಎಂ.ಆರ್.ನಾಯಕ್ ಅವರು, ‘ರಾಜ್ಯ ಸರ್ಕಾರ 2015ರ ಡಿ.17 ರಂದು ಕಂಬಳ ಕ್ರೀಡೆ ಆಯೋಜಿಸಲು ಷರತ್ತುಬದ್ಧ  ಅನುಮತಿ ನೀಡಿತ್ತು. ನಂತರ ಈ ಆದೇಶ ಹಿಂಪಡೆಯಲಾಗಿದೆ’ ಎಂದು ತಿಳಿಸಿದರು. ಪ್ರತಿವಾದಿಗಳು ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿತ್ತು. ನಂತರ ವಿಚಾರಣೆ ಮುಂದು ವರೆದ ನಂತೆರ  ಹೈ ಕೋರ್ಟ್ ಕಂಬಳ ಕ್ರೀಡೆಗೆ ನಿಷೇಧ ನೀಡಿದೆ.