ಇದು ದಿನಗೂಲಿ ನೌಕರ 250 ಕೋಟಿ ಆಸ್ತಿ ಮಾಡಿದ ಕಥೆ! ಇದನ್ನು ಭ್ರಷ್ಟಾಚಾರದಿಂದ ಸಂಪಾದಿಸಿದ್ದು ಅನ್ನೋದು ಶಾಕಿಂಗ್ ವಿಚಾರ!!

0
472

ತಿಂಗಳಿಗೆ 700 ರೂ ಸಂಬಳ ಪಡೆಯುತ್ತಿದ ಹಾಸ್ಟೆಲ್ ದಿನಗೂಲಿ ನೌಕರ ಇಂದು 250 ಕೋಟಿ ಆಸ್ತಿಯ ಒಡೆಯನಾದ ಅಸಲಿ ಕಥೆ ಇಲ್ಲಿದೆ ನೋಡಿ..

ದೇಶದಲ್ಲಿ ಭ್ರಷ್ಟಾಚಾರ ಹೋಗಲಾಡಿಸಲು ಎಷ್ಟೊಂದು ಹರಸಾಹಸ ಮಾಡುತ್ತಿದ್ದಾರೆ. ಆದರು ಕೂಡ ಲಂಚ, ಮೋಸ, ವಂಚನೆಗಳು ನಡಿತ್ತಾನೆ ಇವೆ. ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದು ಸರ್ಕಾರಿ ಕಛೇರಿಗಳಲ್ಲಿ. ಅದೇರೀತಿ ಹಲವಾರು ಪ್ರಕರಣಗಳು ಬಯಲಿಗೆ ಬಂದಿವೆ. ಇದೆಕಾರಣಕ್ಕೆ ಅನ್ಸುತ್ತೆ ಜನರು ಸರ್ಕಾರಿ ಕೆಲಸಕ್ಕೆ ಹಂಬಲಿಸೋದು.

ಹೌದು ಬರಿ ನೂರು ರುಪಾಯಿ ಸಂಬಳಕ್ಕೆ ಸರ್ಕಾರಿ ನೌಕರಿ ಮಾಡಿದರೆ ನೂರಾರು ಕೋಟಿ ಆಸ್ತಿಯ ಒಡೆಯರಾಗುತ್ತಾರ? ಅದು ಹೇಗೆ ಅಂತ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಬೇರೊಂದು ಕೆಲಸಗಳಲ್ಲಿ ದಿನದ 80 ರಷ್ಟು ಸಮಯ ದುಡಿದರು ಸರಿಯಾಗಿ ಜೀವನ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಆದರೆ ಅದೇನೋ ಗೊತ್ತಿಲ್ಲ ಸರ್ಕಾರಿ ಕೆಲಸದಲ್ಲಿ ಯಾಕೆ ಇಷ್ಟೊಂದು ಹಣ ಸಿಗುತ್ತದೆ. ಒಬ್ಬ ಗುಮಾಸ್ತನಿಗೆ ತಿಂಗಳಿಗೆ ಬಲು ಮಾಡಿ ಬರುವ ಸಂಬಳ 5 ರಿಂದ 10 ಸಾವಿರ ಇರಬಹುದು, ಆದರು ಕೂಡ ಹೇಗೆ ನೂರಾರು ಕೋಟಿ ಒಡೆಯರಾಗುತ್ತಾರೆ ಅಂತ, ಎಲ್ಲರ ತಲೆಯಲ್ಲಿ ಪ್ರಶ್ನೆ ಮೂಡುವುದು ಸರಳವಾಗಿದೆ.

ಇದೆಲ್ಲ ಹೇಳುತ್ತಿರುವುದು ಯಾಕೆ ಅಂದ್ರೆ ಇಲ್ಲೊಬ್ಬ ಭೂಪ ತಿಂಗಳಿಗೆ 700 ರೂ ಗೆ ಹಾಸ್ಟೆಲ್-ಗಳಲ್ಲಿ ದಿನಗೂಲಿ ಕೆಲಸಕ್ಕೆ ಸೇರಿಕೊಂಡು ಈಗ ಬರೋಬರಿ 250 ಕೋಟಿ ಆಸ್ತಿ ಗಳಿಸಿದ್ದಾನೆ ಇದು ನಂಬಲು ಸಾಧ್ಯವಾಗದಿದ್ದರು ಅಸಲಿಗೆ ಸತ್ಯವಾಗಿದೆ.

ಏನಿದು ಪ್ರಕರಣ?

ಕನಕಪುರ ತಾಲೂಕಿನ ಹುಣಸನಹಳ್ಳಿ ಸರ್ಕಾರಿ ಹಾಸ್ಟೆಲ್ ವಾರ್ಡನ್ ಬಿ.ನಟರಾಜ್‍ನನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಆಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ನಟರಾಜ್ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದ ಎಂಬ ಈ ಸುದ್ದಿ ಹರಿದಾಡಿದ ಬಳಿಕ ಎಚ್ಚೆತ್ತ ಇಲಾಖೆ ಲಂಚಗೊರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ವಾರ್ಡನ್ ಬಿ.ನಟರಾಜ್‍ 1995 ರಲ್ಲಿ ಚನ್ನಪಟ್ಟಣ ತಾಲೂಕಿನ ವಿದ್ಯಾರ್ಥಿ ನಿಲಯದಲ್ಲಿ ದಿನಗೂಲಿ ನೌಕರನಾಗಿ ಕೆಲಸಕ್ಕೆ ಸೇರಿಕೊಂಡಿದ್ದಾಗ ಈತನಿಗೆ ಮಾಸಿಕ ವೇತನ 700 ರೂ. ಇತ್ತು. ಪಿತ್ರಾರ್ಜಿತವಾಗಿ ಕನಕಪುರ ತಾಲೂಕಿನ ಏರಂಗೆರೆ ಗ್ರಾಮದಲ್ಲಿ ಸರ್ವೇ ನಂಬರ್ 80 ರಲ್ಲಿ 4 ಎಕರೆ ಜಮೀನಿತ್ತು. ಇದೀಗ 250 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿದ್ದಾನೆ.

ಅಕ್ರಮ ಆಸ್ತಿಯ ವಿವರ:

ಕನಕಪುರ ತಾಲೂಕಿನ ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾದ ಎಡಮಡು ಗ್ರಾಮದ ವಿವಿದ ಸರ್ವೇ ನಂಬರ್‍ನಲ್ಲಿ 18 ಎಕರೆ, ಕನಕಪುರ ತಾಲೂಕಿನ ಏರಂಗೆರೆಯ ವಿವಿಧ ಸರ್ವೆ ನಂಬರ್ -ಗಳಲ್ಲಿ 28 ಎಕರೆ ಜಮೀನು, ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಹನೂರು ಬಳಿಯ ಮಣಹಳ್ಳಿ 15.5 ಎಕರೆ, ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾದ ಏಡುಮಡುನಲ್ಲಿ ಇಟ್ಟಿಗೆ ಫ್ಯಾಕ್ಟರಿ, ಜ್ಯೂಸ್ ಫ್ಯಾಕ್ಟರಿ, ಜೆ.ಪಿ ನಗರ 17ನೇ ಅಡ್ಡರಸ್ತೆಯಲ್ಲಿನ ಬಿಲ್ಡಿಂಗ್, ಬೆಂಗಳೂರಿನ ಜೆಪಿ ನಗರದ 6ನೇ ಹಂತದಲ್ಲಿ ಮೂರು ಅಂತಸ್ಥಿನ ಮನೆ, ಕನಕಪುರ ನಗರದ ಬೃಂದಾವನ ನಗರದಲ್ಲಿ ಮಹಡಿ ಮನೆ, ಸ್ಕಾರ್ಪಿಯೋ, ಟಾಟಾ ಸುಮೋ ಕಾರು, ಎರಡು ಬೈಕ್ ಹೊಂದಿದು ಒಟ್ಟಾರೆಯಾಗಿ 250 ಕೋಟಿ ಆಸ್ತಿ ಎಂದು ಅಂದಾಜಿಸಲಾಗಿದೆ.

ಈ ಎಲ್ಲ ಅನುಮಾನಗಳ ಹಿನ್ನೆಲೆಯಲ್ಲಿ ಕನಕಪುರ ಸಿವಿಲ್ ನ್ಯಾಯಾಲಯ ರಾಮನಗರ ಎಸಿಬಿಗೆ ತನಿಖೆ ನಡೆಸುವಂತೆ ಸೂಚಿಸಿದೆ. ನಂತರ ರಾಮನಗರ ಎಸಿಬಿ ಯಿಂದ ನಟರಾಜ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಇದರ ವಿರುದ್ದ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ವಿಕಾಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಎಸಿಬಿಯಿಂದ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ವಾರ್ಡನ್ ಬಿ.ನಟರಾಜ್‍ನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

Also read: ಭಾರತೀಯ ಅಂಚೆ ಇಲಾಖೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ; SSLC ಪಾಸಾದವರಿಗೂ ಸಿಗಲಿದೆ ಉದ್ಯೋಗ..