ಕಂಚಿ ಕಾಮಕೋಟಿ ಮಠದ ಪೀಠಾಧ್ಯಕ್ಷರಾಗಿದ್ದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ.

0
466

Kannada News | Karnataka News

ತಮಿಳುನಾಡಿನ ಖ್ಯಾತ ಕಂಚಿ ಕಾಮಕೋಟಿ ಮಠದ ಪೀಠಾಧ್ಯಕ್ಷರಾಗಿದ್ದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಶ್ರೀ ವಿಧಿವಶರಾಗಿದ್ದಾರೆ. ಅವರಿಗೆ 82 ವಯಸ್ಸಾಗಿತ್ತು. ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳನ್ನು ಚೆನ್ನೈನ ಶಂಕರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಕಾಂಚಿ ಕಾಮಕೋಟಿ ಪೀಠವು ತಮಿಳುನಾಡಿನ ಕಾಂಚೀಪುರಂನಲ್ಲಿರುವ ಒಂದು ಪ್ರಸಿದ್ಧ ಹಿಂದೂ ಸಂಸ್ಥೆಯಾಗಿದ್ದು. ಈ ಸಂಸ್ಥೆ ಐದು ಪಂಚ-ಭೂತಗಳ ಸ್ಥಳಗಳಲ್ಲಿ ಒಂದಾಗಿದೆ. 1935 ರ ಜುಲೈ 18 ರಂದು ಜನಿಸಿದ ಶ್ರೀ ಸುಬ್ರಮಣ್ಯಂ, ಜಯೇಂದ್ರ ಸರಸ್ವತಿ ಅವರು ಕಂಚಿ ಮಠದ ಮುಖ್ಯಸ್ಥರಾಗಿದ್ದರು.

ಅವರು ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಲ್ ನಂತರ ಮಠದ ಉತ್ತರಾಧಿಕಾರಿಯಾಗಿದ್ದರು. ಮಾರ್ಚ್ 22, 1954 ರಂದು ಶ್ರೀ ಜಯೇಂದ್ರ ಸರಸ್ವತಿ ಅವರಿಗೆ ಮಠದ ಉಸ್ತುವಾರಿ ವಯಸಲಾಗಿತ್ತು. ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಶ್ರೀ ಕಂಚಿ ಮಠದ 69 ನೇ ಪೀಠಾಧ್ಯಕ್ಷರಾಗಿದ್ದರು.

8 ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಸ್ಥಾಪಿಸಿದ ಹಿಂದೂ ಧಾರ್ಮಿಕ ಆರಾಧನಾ ಮಂದಿರ ಇದಾಗಿದೆ. ಅಲ್ಲದೆ ಈ ಮಠ ದಕ್ಷಿಣ ಭಾರತದಲ್ಲಿ ಬೃಹತ್ ಭಕ್ತಾದಿಗಳನ್ನು ಹೊಂದಿದೆ. ಮಠವು ಹಲವಾರು ಶಾಲೆಗಳು, ಕಣ್ಣಿನ ಚಿಕಿತ್ಸಾಲಯಗಳು ಮತ್ತು ಆಸ್ಪತ್ರೆಗಳನ್ನು ನಡೆಸುತ್ತಿದೆ.

ಜಯೇಂದ್ರ ಸರಸ್ವತಿ ಶ್ರೀಗಳ ನಿಧನ ವಾರ್ತೆ ಕೇಳಿ ಅವರ ಭಕ್ತರು ಅತ್ಯಂತ ದುಃಖ ವ್ಯಕ್ತಪಡಿಸಿದ್ದಾರೆ. ಶ್ರೀಗಳ ನಿಧನಕ್ಕೆ ಪ್ರಧಾನಿ ನರೇದ್ರ ಮೋದಿ, ಮಿತ್ತ ಸಚಿವ ಅರುಣ್ ಜೈಟ್ಲಿ, ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಸಂತಾಪ ಸೂಚಿಸಿದ್ದಾರೆ.

Also Read: ಪಿಸ್ತಾ ತಿನ್ನುವುದರಿಂದ ಯಶಸ್ಸು ನಿಮ್ಮದಾಗುತ್ತದೆ