ಅಲ್ಪಸಂಖ್ಯಾತರ ಓಲೈಕೆಗೆ ‘ಕನ್ನಡ’ ಮರೆತು ‘ಉರ್ದು’ ಭಾಷೆಯಲ್ಲಿ ಭಾಷಣ ಮಾಡಿದ ಸಚಿವ ರಮೇಶ್ ಕುಮಾರ್

0
793

ಅತ್ತ ರಾಯಚೂರಿನಲ್ಲಿ ವಕ್ಫ್, ಅಲ್ಪಸಂಖ್ಯಾತ ಮತ್ತು ಶಿಕ್ಷಣ ಸಚಿವರಾದಂತ ತನ್ವೀರ್ ಸೇಠ್ ಸಾಹೇಬ್ರು ವೇದಿಕೆಯಲ್ಲೇ ‘ವಯಸ್ಕರ ಚಿತ್ರ’ ನೋಡುತ್ತಿದ್ದರೆ ಇತ್ತ ಕೋಲಾರದಲ್ಲಿ ಆರೋಗ್ಯ ಸಚಿವರಾದಂತ ಶ್ರೀ ರಮೇಶ್ ಕುಮಾರ್-ರವರು ಸಭೆಯನ್ನುದ್ದೇಶಿಸಿ ಕನ್ನಡದಲ್ಲೇ ಭಾಷಣ ಪ್ರಾರಂಭಿಸಿದರೂ; ಅದನ್ನು ಮೊಟಕುಗೊಳಿಸಿ ಉರ್ದು ಭಾಷೆಯಲ್ಲಿ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿದ್ದಾರೆ.

ತಮ್ಮ ಜನ-ಪರ ನಿಲುವಿಗೆ ಮತ್ತು ಬಡವರ ಏಳಿಗೆಗೆ, ಕ್ಷೇತ್ರದ ಅಭಿವೃದ್ಧಿಗೆ ಸತತವಾಗಿ ಆಯ್ಕೆಯಾಗುತ್ತಿರುವ ‘ಸೋಲಿಲ್ಲದ ಸರದಾರ’ ಸನ್ಮಾನ್ಯ ರಮೇಶ್ ಕುಮಾರರು ಆಡಳಿತಾತ್ಮಕ ಭಾಷೆಯಾದ ಕನ್ನಡವನ್ನು ಬಿಟ್ಟು ಉರ್ದು ಭಾಷೆಯಲ್ಲಿ ಮಾತನಾಡಿರುವುದು ಕನ್ನಡ ಪ್ರೇಮಿಗಳಿಗೆ ಬೇಸರ ತಂದಿದೆ.

ಹಜ್ರತ್ ಟಿಪ್ಪು ಸುಲ್ತಾನನ ಜಯಂತಿ ಆಚರಣೆ ವೇಳೆ ಆಯೋಜಕರು ಸನ್ಮಾನ್ಯ ಸಚಿವರನ್ನು ಕರೆದು ಭಾಷಣ ಮಾಡಲು ಕೇಳಿಕೊಂಡಾಗ ಅಲ್ಲಿದ್ದ ಬಹುತೇಕ ಮುಸಲ್ಮಾನ ಬಾಂಧವರನ್ನು ಮೆಚ್ಚಿಸಲು ಕುಮಾರರು ತಮ್ಮ ಉರ್ದು ಪ್ರಾವೀಣ್ಯತೆಯನ್ನು ಪ್ರದರ್ಶಿಸಿದರು.

ಈ ಸಮಾರಂಭದಲ್ಲಿ ಹಾಜರಿದ್ದ ಹಿರಿಯ ಶಿಕ್ಷಕರೊಬ್ಬರು “ಸರ್ಕಾರದ ಸಮಾರಂಭಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬಳಸತಕ್ಕದ್ದು. ಆದರೆ, ಈ ದಿನ ನಮ್ಮ ಸಚಿವರು ಉರ್ದು ಭಾಷೆಯಲ್ಲಿ ಮಾತನಾಡಿದ್ದು ನನಗೆ ಬೇಸರ ತಂದಿದೆ”. “ಕೋಲಾರಿನ ಮುಸಲ್ಮಾನರಿಗೆ ಕನ್ನಡ ಬರುತ್ತೆ; ಸಚಿವರು, ಕನ್ನಡಲ್ಲೇ ಭಾಷಣ ಮಾಡಿ ಆ ಮೂಲಕ ಭಾಷಾ ಜಾಗೃತಿ ಮತ್ತು ಮೇಲ್ಪಂಕ್ತಿಯನ್ನು ಅನುಸರಿಸಬೇಕಾಗಿತ್ತು. ಆದರೆ, ಕೇವಲ ೫ ನಿಮಿಷಕ್ಕೆ ಕನ್ನಡ ಬಳಸಿ; ನಂತರ ಉರ್ದು ಭಾಷೆಯಲ್ಲಿ ಮಾತನಾಡಿರುವುದು ‘ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ’.

ರಮೇಶ್ ಕುಮಾರ್ ರಂತ ಪ್ರಜ್ಞಾವಂತ ರಾಜಕಾರಣಿಗಳೇ ಈ ರೀತಿ ನಡವಳಿಕೆ ತೋರಿದರೆ; ಜನರಿಗೆ ಯಾವ ಸಂದೇಶ ರವಾನೆಯಾಗುತ್ತಿದೆ ಎಂದು ಹಲವಾರು ಅಭಿಪ್ರಾಯ ಪಟ್ಟಿದ್ದಾರೆ. ಅದರಲ್ಲೂ, ತೆರಿಗೆದಾರನ ದುಡ್ಡಲ್ಲಿ ಆಯೋಜಿಸಲ್ಪಟ್ಟ ಸಮಾರಂಭದಲ್ಲಿ ಕನ್ನಡವನ್ನು ಮರೆತು ತಮ್ಮ ಉಳಿವಿಗಾಗಿ ಮತ್ತು ಮುಂಬರುವ ಚುನಾವಣೆಗೆ ‘ಪೂರ್ವಭಾವಿ ತಯಾರಿಗಾಗಿ’ ರಾಜ್ಯದ ಅಧಿಕೃತ ಭಾಷೆಯನ್ನು ಮರೆತು ಉರ್ದು ಮಾತನಾಡಿರುವುದು ಖಂಡನಾರ್ಹ !