ನಟನಾಗಿ ಮಾತ್ರವಲ್ಲದೇ ಕೃಷಿಯಲ್ಲಿಯೂ ಅನೇಕ ಸಾಧನೆ ಮಾಡುತ್ತಿರುವ ಕಿಶೋರ್ ಅನೇಕ ಯುವಕರಿಗೆ ಮಾದರಿಯಾಗಿದ್ದರೆ..

0
1898

ಇವರು ಒಳ್ಳೆಯ ನಟ ಎನ್ನುವುದಕ್ಕಿಂತ ಕಲಾವಿದ ಎಂದರೆ ಸೂಕ್ತ. ಯಾಕೇಂದ್ರೆ ನಾಯಕ, ಖಳನಾಯಕ, ವಿಶೇಷಪಾತ್ರ, ಪೋಷಕ ಪಾತ್ರ ಹೀಗೆ ನೀವು ಯಾವ ಪಾತ್ರವನ್ನೇ ಹೇಳಿ ಇವರ ನಟನೆಯ ಬಗ್ಗೆ ದೂಸರಾ ಮಾತೇ ಇಲ್ಲ. ತನ್ನ ಅದ್ಭುತ ನಟನೆಯಿಂದ ಗಮನ ಸೆಳೆಯುವ ಕಿಶೋರ್‌ ರವರು ಚಿತ್ರೀಕರಣ ಇಲ್ಲದ ಸಮಯದಲ್ಲಿ ಐಷಾರಾಮಿ ಜೀವನವನ್ನು ಬಿಟ್ಟು ಒಬ್ಬ ಅದ್ಭುತ ರೈತನಂತೆ ದುಡಿಯುತ್ತಿದ್ದಾರೆ.

ಹೌದು, ಕನ್ನಡ, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿದ ಬಹು ಬೇಡಿಕೆಯ ಖಳನಟರಲ್ಲಿ ಒಬ್ಬರಾದ ಕಿಶೋರ್‌ ಅವರು ಕೃಷಿಯಿಂದ ಸಂಪಾದನೆ ಇಲ್ಲವೆಂದು ಪಟ್ಟಣಕ್ಕೆ ಬರುತ್ತಿರುವ ಜನಗಳ ಮಧ್ಯೆ ಈ ಸ್ಟಾರ್‌ ಫ್ಯಾಮಿಲಿ ಕಿಶೋರ್‌ ರವರು ಬಿಡುವಿನ ವೇಳೆಯಲ್ಲಿ ಕಿಶೋರ್‌ ತಮ್ಮ ತೋಟದಲ್ಲಿರುತ್ತಾರೆ. ಚೆಡ್ಡಿ ಬನೀನು ಹಾಕಿಕೊಂಡು ರೈತನಂತೆ ದುಡಿಯುತ್ತಾರೆ.

ಮೊದಲು ಕಿಶೋರ್ ಕುಮಾರ್ ನಗರದ ಶಾರದಾ ಕಾಲೇಜಿನಲ್ಲಿ ಕನ್ನಡ ಸಾಹಿತ್ಯವನ್ನು ಕಲಿಸುತ್ತಿದ್ದರು ಮತ್ತು ಅವರ ಪತ್ನಿ ಶ್ರೀಮತಿ ವಿಶಾಲಾಕ್ಷಿ ಪದ್ಮನಾಭನ್ ಚಾರ್ಲ್ಸ್ಡ್ ಅಕೌಂಟೆಂಟ್ ಆಗಿ ಪ್ರಮುಖ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈಗ ಕೃಷಿ ಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರಿಗೆ ಇಬ್ಬರು ಗಂಡುಮಕ್ಕಳು. ಒಳ್ಳೆಯ ಕೆಲಸದಲ್ಲಿ ಇದ್ದವರಾದರೂ ಕಿಶೋರ್ ಅದನ್ನು ಬಿಟ್ಟು ಇಷ್ಟಪಟ್ಟು ಕೃಷಿ ಮಾಡುತ್ತಿದ್ದಾರೆ.

ಕಳೆದ ಆರೇಳು ವರ್ಷಗಳಿಂದ ಬೆಂಗಳೂರಿನಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿ ಬನ್ನೇರುಘಟ್ಟ ಕಾಡಿನಾಚೆಯಲ್ಲಿ ಸುಮಾರು 8 ಎಕರೆ ಪ್ರದೇಶದಲ್ಲಿ ಕಿಶೋರ್ ಅಪ್ಪಟ ಕೃಷಿಕನಾಗಿದ್ದಾರೆ. ಮೊದಮೊದಲು ತುಂಬಾ ಕಷ್ಟ ಪಟ್ಟರು. ಕೃಷಿ ಮಾಡಬೇಕು ಅಂತ ಶುರುಮಾಡಿದ ವೇಳೆ ಕಷ್ಟಗಳು ಒಂದಾದಮೇಲೊಂದಂತೆ ಬಂದವು. ಆಗ ಬನ್ನೇರುಘಟ್ಟದಲ್ಲಿ ​​ಬರಗಾಲ, ಸಮುದಾಯದ ಅಡಚಣೆಗಳು, ಆಗಾಗ್ಗೆ ಬನ್ನೇರುಘಟ್ಟದ ಆನೆಗಳ ದಾಳಿಗಳಿಂದ ಕಂಗಾಲಾಗಿದ್ದ ಕುಟುಂಬ ಛಲಬಿಡದೆ ಮೂರು ವರ್ಷಗಳ ಕಾಲ ಅವರು ಕೃಷಿಯ ಬಗ್ಗೆ ಸಂಪೂರ್ಣ ಅರಿವಿಲ್ಲದೆ ಹೆಣಗಾಡಿದರು.

ನಂತರ ಭಾರತದಾದ್ಯಂತ ಪ್ರಯಾಣಿಸಿ ಸಾಧ್ಯವಿರುವ ಎಲ್ಲಾ ರಾಜ್ಯಗಳಿಂದ ರೈತರನ್ನು ಭೇಟಿ ಮಾಡಿ ಅವರಿಂದ ಕೃಷಿ ಬಗೆಗಿನ ಜ್ಞಾನವನ್ನು ಅರಿಯುತ್ತಾ ಬಂದರು. ನಂತರ ಯಾವುದೇ ಕೃಷಿಯ ನಿಯಮಗಳನ್ನು ಪಾಲಿಸದೇ ಸಹಜವಾಗಿ ಪ್ರಕೃತಿಗೆ ಪೂರಕವಾಗಿ ಅಗತ್ಯ ಆಹಾರವನ್ನು ಬೆಳೆಯುವ ಪದ್ಧತಿಯನ್ನು ಕಿಶೋರ್ ಇಲ್ಲಿ ಪ್ರಯೋಗ ಮಾಡುತ್ತ ಬಂದರು. “ನಾವು ಬೇಡದ್ದನ್ನು ತಿಂದು, ಬೇಕಾದ್ದನ್ನು ಬಿಟ್ಟು, ನೆಲವನ್ನೆಲ್ಲಾ ಗಬ್ಬೆಬ್ಬಿಸಿ ಭೂಮಿಗೆ ಭಾರವಾಗಿದ್ದೇವೆ. ಮನುಷ್ಯ ತಾನೂ ಒಂದು ಪ್ರಾಣಿ ಎಂದು ತಿಳಿದು ಬದುಕಬೇಕು ಎನಿಸ್ತು.

ನಗರ ಜೀವನಕ್ಕಿಂತ ಪ್ರಕೃತಿ ಎಂದಿಗೂ ಅಪಾಯಮಾನ. ಹಾಗಾಗಿ ಪ್ರಕೃತಿಗೆ ಮತ್ತಷ್ಟು ಹತ್ತಿರವಾಗುವ ಪ್ರಯತ್ನದಲ್ಲಿ ನಾನಿದನ್ನು ಮಾಡುತ್ತಿದ್ದೇನೆ” ಎಂದು ನಂಬಿ ಎಂದರು. ಸಹಜಕೃಷಿ ಮಾಡೋಕೆ ಮುಂದಾದರು. ಕಿಶೋರ್ ಮಾಡುತ್ತಿರುವ ಸಹಜಕೃಷಿಯಲ್ಲಿ ಅವರ ಧರ್ಮಪತ್ನಿಯವರ ಪಾತ್ರ ಬಹಳ ದೊಡ್ಡದು. ಅವರ ಅನುಪಸ್ಥಿತಿಯಲ್ಲಿ ಸಹಜಕೃಷಿಯ ಕುರಿತು ಬಗ್ಗೆ ಹೆಚ್ಚಿನ ಮಾಹಿತಿ, ತಿಳುವಳಿಕೆ, ಮಾರ್ಗಗಳನ್ನು ತಿಳಿದುಕೊಂಡು ಸಹಜಕೃಷಿ ಒಳ್ಳೆಯ ರೀತಿಯಲ್ಲಿ ಬೆಳವಣಿಗೆ ಮಾಡಿದ್ದರಂತೆ.

ಮಕ್ಕಳಿಗೆ ಮಾಮೂಲಿ ಶಾಲೆಯ ಶಿಕ್ಷಣಕ್ಕಿಂತ ಹಳ್ಳಿ ಜೀವನ, ಪರಿಸರ ಮತ್ತು ಮನೆ ಪಾಠಗಳಿಂದ ಹೆಚ್ಚು ಕಳಿಸಬಹುದು ಅಂದುಕೊಂಡರು. ಹಾಗಂತ ಶಾಲೆ, ಗೆಳೆಯರನ್ನೆಲ್ಲಾ ಬಿಟ್ಟು ಅವರನ್ನು ತೋಟಕ್ಕೆ ಕರೆದುಕೊಂಡು ಹೋಗಿ ನೆಲೆಸೋಕೆ ಸಾಧ್ಯವಿಲ್ಲ ಹಾಗಾಗಿ ಮಕ್ಕಳಿಬ್ಬರೂ ನಗರದಲ್ಲೇ ಓದುತ್ತಿದ್ದಾರೆ. ಇಷ್ಟರ ಮದ್ಯೆ ಕಿಶೋರ್ ಅವರ ಪತ್ನಿ ಇಲ್ಲಿಯ ಮನೆ ಮತ್ತು ತೋಟದ ಮನೆ ಎರಡೂ ಕಡೆ ಸಮಯವನ್ನು ಸರಿದೂಗಿಸಿಕೊಂಡು ಹೋಗುತ್ತಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಅಷ್ಟೇ ಅಲ್ಲ ಕಿಶೋರ್ ಪತ್ನಿ ವಿಶಾಲಾಕ್ಷಿ “ಬಫೆಲೊ ಬ್ಯಾಕ್” ಎನ್ನುವ ವಿಶಿಷ್ಟ ಸಾವಯವ ಮತ್ತು ದೇಶಿ ಕೃಷಿ ಉತ್ಪನ್ನಗಳ ಮಾರಾಟ ಮಳಿಗೆಯನ್ನೂ ನಡೆಸುತ್ತಾರೆ. ಹಾಗಾಗಿ ಕೃಷಿಯ ಈ ಆಸಕ್ತಿಗೆ ಮತ್ತಷ್ಟು ಬೆಂಬಲ ಮನೆಯಲ್ಲೇ ಸಿಕ್ಕಿದೆ ಎನ್ನುತ್ತಾರೆ ಕಿಶೋರ್. ಅಷ್ಟೇ ಅಲ್ಲದೆ ಹಳೆಯ ರಾಗಿ, ಅಕ್ಕಿ ಮಾಡುವ ಯಂತ್ರಗಳಿಗೆ ಮರು ಜೀವ ಕೊಟ್ಟರು. ಹಳೆಯ ಕಾಲದಲ್ಲಿ ಬಳಸುತ್ತಿದ್ದ ನವಣೆ, ಧಾನ್ಯಗಳಿಗೆ ಮರು ಸೃಷ್ಟಿ ನೀಡಿದರು, ಕಡಿಮೆ ನೀರಿನಲ್ಲೂ ಬೆಳೆಯುವ ಬೆಳೆಗಳನ್ನು ಮತ್ತೆ ಬೆಳೆದು ತಮ್ಮ ಮಳಿಗೆಯ ಗ್ರಾಹಕರಿಗೆ ಪರಿಚಯ ಮಾಡಿಕೊಟ್ಟರು.

ಕಪ್ಪಕ್ಕಿ, ನವಣೆ, ನುಚ್ಚಕ್ಕಿ, ಮಲ್ಲಿಗೆ ಅಕ್ಕಿ, ದೊಡ್ಡವಲಕ್ಕಿ ಹೀಗೆ ಅನೇಕ ಉತ್ಪನ್ನಗಳು ಮತ್ತೆ ಜೀವ ಪಡೆದುಕೊಂಡವು. ತಾವಷ್ಟೇ ಬೆಳೆಯದೆ ತಮ್ಮ ಸುತ್ತ ಮುತ್ತಲಿನ ಸಮುದಾಯಕ್ಕೂ ಸಹಾಯ ಮಾಡುತ್ತಿರುವ ಕಿಶೋರ್ ಅವರು ಕೃಷಿಯಲ್ಲಿ ಆಸಕ್ತಿ ಇರುವ ಒಂದಷ್ಟು ಯುವಕರಿಗೆ ತಮ್ಮದೇ ತೋಟದಲ್ಲಿ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲೂ ಇವರು ಕಾರ್ಯಗತರಾಗಿದ್ದಾರೆ. ಇದರ ಜೊತೆಗೆ ಎಲ್ಲೆಡೆ ವ್ಯಾಪಕವಾಗಿರುವ ಮಾರ್ಪಾಡಾದ ತಳಿಗಳು ಅಥವಾ genetically modified cropsಗಳ ವಿರುದ್ಧವಾಗಿ ನಮ್ಮದೇ ದೇಶಿ, ನಾಟಿ ತಳಿಗಳನ್ನು ಉಳಿಸೋ ಪ್ರಯತ್ನಕ್ಕೂ ಕಿಶೋರ್ ನಿರ್ಧರಿಸಿದ್ದಾರೆ.