ಉಪೇಂದ್ರರವರ ಹೊಸ ಪಕ್ಷ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ರಾಜ್ಯೋತ್ಸವದ ದಿನದಂದೇ ಲೋಕಾರ್ಪಣೆ, ಉಪೇಂದ್ರರ ಮೇಲೆ ನಿಮಗೆ ನಂಬಿಕೆ ಇದೆಯೇ??

0
580

ತಮ್ಮ ವಿಭಿನ್ನ ಅಭಿನಯ ಹಾಗೂ ಡೈಲಾಗ್​ ಡಿಲೇವರಿಯಿಂದಲೇ ಜನಮಾನಸದಲ್ಲಿ ತಮ್ಮ ಛಾಪು ಮೂಡಿಸಿದ ನಟ ಉಪೇಂದ್ರ. ರಿಯಲ್​ ಸ್ಟಾರ್​ ಉಪೇಂದ್ರ ಏನೇ ಮಾಡಿದ್ರೂ ಅದು ಡಿಫ್ರೆಂಟ್​ ಆಗಿರುತ್ತೇ. ಕನ್ನಡದ ಚಿತ್ರೋದ್ಯಮದ ದಿಕ್ಕನ್ನೆ ಬದಲಿಸಿದ ನಾಯಕ ಉಪೇಂದ್ರ. ಈಗ ಇವರು ರಾಜಕೀಯಕ್ಕೆ ಬರಲು ಸಿದ್ಧತೆ ನಡೆಸಿದ್ದಾರೆ. ಅಂದಹಾಗೆ ಹಲವು ದಿನಗಳಿಂದ ಇದ್ದ ಸುದ್ದಿಯಂತೆ ಇತ್ತೀಚೀಗೆ, ಉಪೇಂದ್ರ ಬೆಂಗಳೂರಿನಲ್ಲಿ ತಮ್ಮ ಪಕ್ಷದ ಹೆಸರು ಹಾಗೂ ಧೇಯಗಳನ್ನು ಜನರ ಮುಂದೆ ಇಟ್ಟಿದ್ದಾರೆ. ಅಂದಹಾಗೆ ಉಪೇಂದ್ರರ ಪಕ್ಷರ ಹೆಸರು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(KPJP).


ನಮಗೆ ಜನ ನಾಯಕನೂ ಬೇಡ, ಜನ ಸೇವಕನೂ ಬೇಡ. ಕರ್ನಾಟಕದ ಜನರು ಅಶಕ್ತರಲ್ಲ. ಇಲ್ಲಿಗೆ ಕಾರ್ಮಿಕರು ಬೇಕು, ಕೆಲಸ ಮಾಡುವವರು ಬೇಕು ಎಂದು ಉಪೇಂದ್ರ ಈ ಮೊದಲೇ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ರಾಜಕಾರಣ ಮಾಡಿದರೆ ಶತ್ರುಗಳು ಹುಟ್ಟುಕೊಳ್ಳುತ್ತಾರೆ. ನಮ್ಮದು ಪ್ರಜಾಕೀಯ, ಎಲ್ಲರೂ ಒಟ್ಟಿಗೆ ಮುಂದುವರಿಯುವುದು. ಪಾರದರ್ಶಕ ಆಡಳಿತಕ್ಕೆ ಮುಂದಾಗುವುದೇ ಪಕ್ಷದ ಸಿದ್ಧಾಂತ’ ಎಂದು ಉಪೇಂದ್ರ ಹೇಳಿದರು.

KPJP ಪಕ್ಷ, ಪ್ರಜಾಕೀಯ ಎಂಬ ಆ್ಯಪ್ ಹಾಗೂ ವೆಬ್ ಸೈಟ್ ಸಿದ್ಧವಾಗ್ತಿದೆ. ನವೆಂಬರ್ 10ರಂದು ಎಲ್ಲ ಸಾರ್ವಜನಿಕರಿಗೆ ಇದು ಸಿಗಲಿದೆ. ಅದು ನಿಮ್ಮ ಬಳಿ ಇದ್ದರೆ ನೀವು ನಮ್ಮ ಬಳಿ ಇದ್ದಂತೆ. ಇಲ್ಲಿ ಎಲ್ಲ ಜನರೂ ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು. ನಮ್ಮ ಜೊತೆ ಕೆಲಸ ಮಾಡುವವರಿಗೆ ಕನಸಿರಬೇಕು. ಕನಸು ಹೊತ್ತ ನಾಯಕರು ಕಾರ್ಮಿಕರಾಗಿ ಕೆಲಸ ಮಾಡಬೇಕು ಎಂದಿದ್ದಾರೆ ಉಪೇಂದ್ರ.

ಉಪೇಂದ್ರ ಅವರು ತಮ್ಮ ಚಿತ್ರಗಳಲ್ಲಿ ರಾಜಕೀಯ ವಿಮರ್ಷೆಗಳನ್ನು ಮಾಡುತ್ತಿದ್ರು. ಅಲ್ಲದೆ ಚಿತ್ರಗಳಲ್ಲಿ ಹಲವು ರಾಜಕಾರಣಿಗಳ ಕಾಲು ಎಳೆಯುತ್ತಿದ್ರು.