ಬಿಗ್ ಬಾಸ್-ಗೆ ಸಾಮಾನ್ಯರಂತೆ ಎಂಟ್ರಿ ಕೊಟ್ಟಿದ್ದ ದಿವಾಕರ್ ಬಿಗ್ಗ್ ಬಾಸ್-ಗೆ ಎಂತಹ ಆಫರ್ ಕೊಟ್ಟಿದ್ದಾರೆ ಗೊತ್ತಾ?

0
1216

ಕಾಮನ್ ಮ್ಯಾನ್ ಕಂಟೆಸ್ಟೆಂಟ್ ಆಗಿ ‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಟ ದಿವಾಕರ್ ಈ ಹಿಂದೆ ಅನೇಕ ರಾದ್ಧಾಂತಗಳಿಗೆ ಸಾಕ್ಷಿ ಆಗಿದ್ದಾರೆ. ಫೈನಲ್ ತಲುಪಿರುವ ಟಾಪ್ 5 ಸ್ಪರ್ಧಿಗಳ ಪೈಕಿ ದಿವಾಕರ್ ಕೂಡ ಒಬ್ಬರು. ದಿವಾಕರ್ ದಿನದಿಂದ ದಿನಕ್ಕೆ ಬದಲಾಗಿದ್ದಾರೆ ಅನ್ನೋ ವಿಷಯ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಂದ ಹಿಡಿದು ವೀಕ್ಷಕರಿಗೂ ಅನ್ನಿಸಿದ್ದುಂಟು. ”ನಾಮಿನೇಟ್ ಆದಾಗಲೇ, ಜನರಿಗೆ ನಮ್ಮ ಪರಿಚಯ ಆಗುವುದು” ಎಂಬ ಸಿದ್ಧಾಂತ ಇಟ್ಟುಕೊಂಡು ಆಟ ಆಡುತ್ತಿದ್ದ ದಿವಾಕರ್ ಈಗ ಬಿಗ್‌ಬಾಸ್‌ ಜೊತೆಗೆ ಪಾರ್ಟಿ ಮಾಡಲು ಮುಂದಾಗಿದ್ದಾರೆ.

ಹೌದು, ನಿಮಗೆಲ್ಲ ತಿಳಿದುರೋ ಹಾಗೆ ಬಿಗ್‌ಬಾಸ್‌ ಮನೆಯಲ್ಲಿ ಕೇಳಿ ಬರುವ ಧ್ವನಿ ಯಾರದ್ದು ಎಂದು ಯಾರಿಗೂ ಗೊತ್ತಿಲ್ಲ. ಆದರೆ, ಈ ಧ್ವನಿ ನೀಡುವರನ್ನು ಪಾರ್ಟಿಗೆ ಕರೆದಿದ್ದಾರೆ ದಿವಾಕರ್‌. ಮೊನ್ನೆ ಕ್ಯಾಮರಾ ಎದುರು ಬಿಗ್‌ಬಾಸ್ ಶೋ ಮುಗಿದ ಮೇಲೆ ನೀವು ನನ್ನ ಜತೆ ಬನ್ನಿ ಪಾರ್ಟಿ ಮಾಡೋಣ. ಇದರ ಬಗ್ಗೆ ಯಾರಿಗೂ ಸುಳಿವು ನೀಡುವುದಿಲ್ಲ. ನಿಮ್ಮ ಜತೆ ಪಾರ್ಟಿ ಮಾಡೋದರ ಜತೆ ನಿಮ್ಮನ್ನು ನೋಡಿದ ಹಾಗೆ ಆಗುತ್ತೆ ಎಂದು ಬಿಗ್‌ಬಾಸ್‌ ಗೆ ಆಹ್ವಾನ ನೀಡಿ ಸುದ್ದಿಯಾಗಿದ್ದಾರೆ. ಈ ಹಿಂದೆ ನ್ಯೂ ಇಯರ್‌ ದಿನದಂದು ವೈನ್‌ ಕಳುಹಿಸಿ ಎನ್ನುವುದರ ಮೂಲಕ ಸುದ್ದಿಯಾಗಿದ್ದರು ದಿವಾಕರ್‌. ಸದ್ಯ ಇದೇ ವಿಚಾರಕ್ಕೆ ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾರೆ ಈ ಸ್ಪರ್ಧಿ.

ದಿವಾಕರ್ ಅವರ ನೇರ ನುಡಿಯ ವ್ಯಕ್ತಿತ್ವ ಎಲ್ಲರಿಗೂ ಇಷ್ಟ. ‘ಬಿಗ್ ಬಾಸ್’ ಕಾರ್ಯಕ್ರಮದ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ದಿವಾಕರ್ ಈ ಬಾರಿ ವಿಜೇತರಾಗುವರೆ ಎಂದು ಕಾದು ನೋಡಬೇಕಿದೆ…