ಕೇಂದ್ರದ ಅಧೀನ ಸಂಸ್ಥೆ ‘ಅಂಚೆ ಬ್ಯಾಂಕ್-ಗಳಲ್ಲಿ ವ್ಯಾವಹಾರಿಕ ಭಾಷೆಯಾಗಿ ಇಂಗ್ಲಿಷ್ – ಹಿಂದಿ ಮಾತ್ರ ಹಾಗಾದ್ರೆ ಕನ್ನಡಕ್ಕೆ ಇಲ್ವಾ ಮರ್ಯಾದೆ??

0
332

ಈ ಇಂಗ್ಲಿಷ್ ಹಿಂದಿಯಿಂದ ಕನ್ನಡದಲ್ಲಿ ವ್ಯವಹಾರ ನಿಲ್ಲುತಿವೆ, ಇಂದರಿಂದ ಕನ್ನಡ ಭಾಷೆಗೆ ಮಣೆ ಇಲ್ಲದಾಗಿದೆ. ಅದಕ್ಕಾಗಿ ಬ್ಯಾಂಕಿಂಗ್ ಪರೀಕ್ಷೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದು ಎಲ್ಲಡೆ ಹೋರಾಟ ನಡೆಯುತ್ತಿದ್ದರೆ ಅಂಚೆ ಬ್ಯಾಂಕ್-ಗಳಲ್ಲಿ ಕನ್ನಡಕ್ಕೆ ಮರ್ಯಾದೆ ಇಲ್ಲದಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಯಾವುದೇ ನಾಡಿನ ಏಳಿಗೆಯಲ್ಲಿ ಅಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುವುದರಿಂದ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಜನರಿಗೆ ಬ್ಯಾಂಕಿಂಗ್ ಸೇವೆಗಳು ದೊರೆಯುವಂತಾಗುವುದು ಬಹಳ ಮುಖ್ಯವಾದ ಹೆಜ್ಜೆಯೆಂದೇ ಪರಿಗಣಿತವಾಗಿದೆ.

Also read: ಇನ್ಮುಂದೆ ATMನಲ್ಲಿ ಹಣ ತೆಗೆಯುವಾಗ ಖಾತೆಯಿಂದ ಡೆಬಿಟ್​ ಆಗಿ ಹಣ ಸಿಗದೆ ಇದ್ದರೇ ಗ್ರಾಹಕರಿಗೆ ದಿನಕ್ಕೆ ಸಿಗಲಿದೆ 100 ರೂ. ಪರಿಹಾರ.!

ಭಾರತದಂತಹ ವಿಪರೀತ ಆರ್ಥಿಕ ತಾರತಮ್ಯವಿರುವ ದೇಶದಲ್ಲಿ ಇನ್ನು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಬ್ಯಾಂಕಿಂಗ್ ವ್ಯವಸ್ಥೆಯ ಹೊರಗೇ ಉಳಿದಿದ್ದಾರೆ. ಇವರನ್ನು ಬ್ಯಾಂಕಿನತ್ತ ಸೇಳೆಯಲು ಸ್ಥಳೀಯ ಭಾಷೆಯ ಅವಶಕ್ತೆ ಇದೆ. ಹಣಕಾಸು ಸಂಸ್ಥೆಗಳು ವ್ಯವಹಾರ ಭಾಷೆಯಾಗಿ ಇಂಗ್ಲಿಷ್ , ಹಿಂದಿ ಜತೆಗೇ ಪ್ರಾದೇಶಿಕ ಭಾಷೆಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ ( ಆರ್‌ಬಿಐ ) ಗ್ರಾಹಕ ಸೇವೆಗೆ ಸಂಬಂಧಿಸಿದ ‘ ಮಾಸ್ಟರ್ ಸರ್ಕ್ಯೂಲೆಷನ್ – 2014 ರಲ್ಲಿ ತಿಳಿಸಿದೆ . ಅದರಂತೆ , ಮಾಹಿತಿ ಫಲಕಗಳು , ಚಲನ್ , ಖಾತೆ ತೆರೆಯುವ ಅರ್ಜಿ , ಪಾಸ್‌ಬುಕ್‌ ಇತ್ಯಾದಿ ಕನ್ನಡದಲ್ಲಿರಬೇಕು . ಆದರೆ , ಗ್ರಾಮೀಣ ಭಾಗದಲ್ಲೇ ಹೆಚ್ಚು ಕಾರ್ಯಜಾಲ ಹೊಂದಿರುವ ಅಂಚೆ ಬ್ಯಾಂಕ್‌ಗಳು ಗ್ರಾಹಕರಿಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಅರ್ಜಿ ನಮೂನೆಗಳನ್ನು ನೀಡುತ್ತಿವೆ.

Also read: 25 ಸಂಸದರನ್ನು ಆರಿಸಿ ಲೋಕಸಭೆಗೆ ಕಳುಹಿಸಿಕೊಟ್ಟ ರಾಜ್ಯಕ್ಕೆ ಮೋದಿಯಿಂದ ಸಿಕ್ಕಿದ್ದೇನು? ಪರಿಹಾರಕ್ಕಾಗಿ ಮೋದಿ ವಿರುದ್ಧ ಹೋರಾಟಕ್ಕೆ ಇಳಿದ ನೆರೆ ಸಂತ್ರಸ್ತರು.!

ಇದು ಇದರಿಂದ ಹಳ್ಳಿಗರಿಗೆ ಸಾಕಷ್ಟು ತೊಂದರೆಯಾಗಿದೆ ಈ ಮೊದಲು ಅಂಚೆ ಬ್ಯಾಂಕ್‌ಗಳ ಅರ್ಜಿ ನಮೂನೆಗಳು ಕನ್ನಡದಲ್ಲಿ ಇರುತ್ತಿದ್ದವು . ಇತ್ತೀಚಿನ ಕೆಲ ವರ್ಷಗಳಿಂದ ಕನ್ನಡದಲ್ಲಿ ಮುದ್ರಣಗೊಂಡಿಲ್ಲ . ಸದ್ಯ ರಾಜ್ಯದಲ್ಲಿ ಬಳಸುತ್ತಿರುವ ಅರ್ಜಿ ನಮೂನೆಗಳು 2011ರಲ್ಲಿ ಮುದ್ರಣಗೊಂಡವು . ಇವುಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಇವೆ . ಒಂದು ವೇಳೆ ಗ್ರಾಹಕರಿಗೆ ಕನ್ನಡದ ಅರ್ಜಿ ನಮೂನೆಗಳನ್ನು ನೀಡ ಬೇಕಿದ್ದರೆ ಹೊಸದಾಗಿ ಮುದ್ರಿಸಬೇಕು , ‘ ಎಂದು ಅಂಚೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು . ಈ ಬಗ್ಗೆ ಪ್ರತಿಕ್ರಿಯಿಸಿರುವ ಅಂಚೆ ಇಲಾಖೆ ಕರ್ನಾಟಕ ವೃಂದದ ಉಪ ನಿರ್ದೇಶಕ ವೆಂಕಟಾಚಲ ಭಟ್ ‘ ನಾವು ಕನ್ನಡದ ವಿರೋಧಿಗಳಲ್ಲ . ಅಂಚೆ ಇಲಾಖೆಯಲ್ಲಿ ಕನ್ನಡವನ್ನು ಆದ್ಯತೆ ಮೇಲೆ ಪಾಲಿಸಲಾಗುತ್ತಿದೆ . ಇನ್ನು ಬ್ಯಾಂಕಿಂಗ್ ಸೇವೆಯ ಅರ್ಜಿ ನಮೂನೆಗಳಲ್ಲಿ ಕನ್ನಡ ಬಳಸುವ ವಿಚಾರದಲ್ಲಿ ಅಲ್ಲಲ್ಲಿ ಸಮಸ್ಯೆಯಾಗಿರಬಹುದು . ಅರ್ಜಿಗಳನ್ನು ಕೆಲವೊಮ್ಮೆ ಸ್ಥಳೀಯವಾಗಿ ಅಗತ್ಯಕ್ಕೆ ತಕ್ಕಂತೆ ಮುದ್ರಿಸಿಕೊಂಡಿರಬಹುದು’ ಎಂದು ತಿಳಿಸಿದ್ದಾರೆ.

ಮುದ್ರಣ ಗೋದಾಮುಗಳ ವಿಳಂಭ?

Also read: ಪರಿಸರ ಕಾಳಜಿಯಿಂದ 10 ಕಿ.ಮೀ ನಡೆದು ಹೋಗಿ ತರಕಾರಿ ತರುವ ಈ ಐಎಎಸ್ ಅಧಿಕಾರಿ ಪ್ರತಿಯೊಬ್ಬರಿಗೂ ಮಾದರಿ.!

ಅದರಂತೆ ರಾಜ್ಯದ ಅಂಚೆ ಕಚೇರಿಗಳಿಗೆ ಅರ್ಜಿ ನಮೂನೆಗಳು ಪೂರೈಕೆಯಾಗುವುದು ಅರಸೀಕೆರೆ ಮತ್ತು ಹುಬ್ಬಳ್ಳಿಯ ಮುದ್ರಣ ಗೋದಾಮುಗಳಿಂದ. ಬರುತ್ತೆ ಯಾವುದೇ ಸಮಯದಲ್ಲಿ ಅರ್ಜಿ ನಮೂನೆಗಳು ಈ ಗೋದಾಮುಗಳೇ ಪೂರೈಸಬೇಕು. ಎಷ್ಟೇ ಕೊರೆತೆ ಇದ್ದರು ಸ್ಥಳೀಯವಾಗಿ ಮುದ್ರಿಸಿಕೊಳ್ಳಲು ಅವಕಾಶವಿಲ್ಲ ಎಂದು ಅಂಚೆ ಇಲಾಖೆ ನೌಕರರೊಬ್ಬರು ಹೇಳಿದರು . ಅದರಂತೆ ಅಂಚೆ ಇಲಾಖೆ ಬ್ಯಾಂಕ್‌ಗಳ ಅರ್ಜಿ ನಮೂನೆಗಳಲ್ಲಿ ಇಂಗ್ಲಿಷ್ , ಹಿಂದಿ ಮಾತ್ರ ಇದೆ. ಕನ್ನಡ ಯಾಕೆ ಇಲ್ಲ ಎಂದು ಪ್ರಶ್ನೆ ಮಾಡಿ ಕರ್ನಾಟಕ ಪೋಸ್ಟ್ ಮಾಸ್ಟರ್ ಜನರಲ್ ಅವರಿಗೆ ಪತ್ರ ಬರೆಯಲಾಗಿದೆ . ಈ ವರೆಗೆ ಅವರಿಂದ ಉತ್ತರವಿಲ್ಲ ‘ ಎಂದು ವಕೀಲ ರಮೇಶ್ ಕುಮಾರ್ ಹೇಳಿದ್ದಾರೆ. ಅದರಂತೆ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರದ ಅಧೀನ ಸಂಸ್ಥೆಯ ಅರ್ಜಿ ನಮೂನೆಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸಿಸುವುದು ಎಷ್ಟೊಂದು ಸರಿ ಎಂದು ಅಕ್ರೋಶ ವ್ಯಕ್ತವಾಗಿದೆ.