ಮೈಸೂರು ಪಾಕ್ ವಿವಾದಕ್ಕೆ ಸ್ಪಷ್ಟತೆ ಇಲ್ಲದೆ ತಮಿಳುನಾಡು ಮೈಸೂರು ಪಾಕ್ ಜಿಐ ಟ್ಯಾಗ್ ಪಡೆದಿದೆ ಎಂದು ಸುಳ್ಳು ವಿಷಯವನ್ನು ಸುದ್ದಿ ಮಾಡಿದ ಕನ್ನಡ ಚಾನೆಲ್ಸ್.!

0
161

ತಮಿಳುನಾಡಿನ ಅಂಕಣಗಾರ, ಲೇಖಕ ಆನಂದ್‌ ರಂಗನಾಥನ್‌, ”ತಮಿಳುನಾಡಿಗೆ ‘ಮೈಸೂರು ಪಾಕ್‌’ ಭೌಗೋಳಿಕ (ಜಿಐ ಟ್ಯಾಗ್) ಸೂಚ್ಯಂಕ ಸಿಕ್ಕಿರುವುದಕ್ಕೆ ಏಕಸದಸ್ಯ ಸಮಿತಿ ಪರವಾಗಿ ಅಭಿನಂದನೆ ಸ್ವೀಕರಿಸಲು ಖುಷಿಯಾಗುತ್ತಿದೆ,” ಎಂದು ಟ್ವೀಟಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಜತೆಗಿದ್ದ ಫೋಟೋ ಶೇರ್‌ ಮಾಡಿದ್ದರು. ಇದು ವೈರಲ್‌ ಆಗುತ್ತಿದ್ದಂತೆ ಕರ್ನಾಟಕದ ಮಾಧ್ಯಮಗಳಲ್ಲಿದೊಡ್ಡಮಟ್ಟದ ಚರ್ಚೆ ಆರಂಭವಾಗಿತ್ತು. ಮಾಧ್ಯಮದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿಲೇಖಕ ಆನಂದ್‌ ರಂಗನಾಥನ್‌ ಅವರ ಟ್ವಿಟರ್‌ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ತಮ್ಮ ಪೋಸ್ಟ್‌ ಡಿಲೀಟ್‌ ಮಾಡಿದ ಆನಂದ್‌, ”ತಮಾಷೆಗೆ ಹಾಕಿದ ಈ ಟ್ವೀಟ್‌ ಅನ್ನು ಕನ್ನಡದ ವಾಹಿನಿಗಳು, ಟಿವಿಗಳು ಚರ್ಚೆಗೆ ಬಳಸಿಕೊಂಡಿವೆ,” ಏನು ಉಲ್ಟಾ ಹೊಡೆದಿದ್ದು. ಭಾರಿ ಆಕ್ರೋಶ ವ್ಯಕ್ತವಾಯಿತು. ಆನಂದ್‌ ರಂಗನಾಥನ್‌ ಟ್ವೀಟ್ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯದೇ ಕನ್ನಡ ನ್ಯೂಸ್ ಚಾನೆಲ್-ಗಳು ಜೋಕ್ ಅನ್ನು ಸುದ್ದಿಯಾಗಿ ಪ್ರಸಾರ ಮಾಡಿ ಕೇಂದ್ರ ಸರ್ಕಾರವು ಮೈಸೂರು ಪಾಕ್‌ಗಾಗಿ ಭೌಗೋಳಿಕ ಗುರುತಿನ (ಜಿಐ) ಟ್ಯಾಗ್ ಅನ್ನು ತಮಿಳುನಾಡಿಗೆ ನೀಡಿದೆ ಎಂದು ಆರೋಪಿಸಿದರು.

ಇದೇ ಕುರಿತು ವರದಿಯನ್ನು ಪ್ರಕಟಿಸಿದ ಟಿವಿ 9, ಇದು ಮೈಸೂರು ಪಾಕ್ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ ಎಂದು ಹೇಳಿದೆ. ಪಾಕ್ ನ ದೃಶ್ಯಗಳನ್ನು ಪ್ರಸಾರ ಮಾಡಿತ್ತು. ಅದರಂತೆ ಮತ್ತೊಂದು ಸುದ್ದಿ ಚಾನೆಲ್ – ಟಿವಿ 5 ಕನ್ನಡ – ತಮಿಳುನಾಡು ಮೈಸೂರು ಪಾಕ್ ಮೂಲದ ಬಗ್ಗೆ ಹೋರಾಟ ನಡೆಸಲು ಪ್ರಯತ್ನಿಸುತ್ತಿದೆ ಎಂದು ವರದಿ ಮಾಡಿದರೆ, ನ್ಯೂಸ್ 18 ಕನ್ನಡವು ತಮಿಳುನಾಡಿಗೆ ಜಿಐ ಟ್ಯಾಗ್ ನೀಡುವ ನಿರ್ಧಾರಕ್ಕಾಗಿ ಕರ್ನಾಟಕದ ಜನರಲ್ಲಿ ಆಕ್ರೋಶವಿದೆ ಎಂದು ಸೂಚಿಸಿತು.

ಅಷ್ಟೇ ಅಲ್ಲದೆ ಡಿಗ್ವಿಜಯ್, ಸುವರ್ಣ ನ್ಯೂಸ್ ಸೇರಿದಂತೆ ಹಲವಾರು ಸುದ್ದಿ ವಾಹಿನಿಗಳು ಇದೇ ರೀತಿಯ ವರದಿಗಳನ್ನು ಪ್ರಸಾರ ಮಾಡಿದರು. ಈ ನಕಲಿ ಸುದ್ದಿ ಹರಡುತ್ತಿದಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅಕ್ರೋಶಗೊಂಡು ಸುದ್ದಿಗಾರರೊಂದಿಗೆ ಮಾತನಾಡಿ ತಮಿಳುನಾಡು ಕಾವೇರಿ ಮತ್ತು ಮೆಕೆಡಾಟು ಸಮಸ್ಯೆಗಳ ನಂತರ, ಅವರು ಈಗ ನಮ್ಮ ಸಿಹಿತಿಂಡಿಗಾಗಿ ಬಂದಿದ್ದಾರೆ. ಅವರಿಗೆ ಯಾವುದೇ ಬಸ್, ಟ್ರೈನ್, ಏರೋಪ್ಲೇನ್ ಸೇವೆಯನ್ನು ಕೊಡುವುದಿಲ್ಲ, ಮೈಸೂರು ಪಾಕ್ ಕಳುಹಿಸುವುದಿಲ್ಲ, ಸ್ಟಾಲಿನ್ ಆಗಿರಲಿ. ಅಥವಾ ಬೇರೆ ಯಾರಾದರೂ, ಆಗಿರಲಿ ನಾನು ಮೈಸೂರು ಪಾಕ್ ಬಿಟ್ಟು ಕೊಡುವುದಿಲ್ಲ, ಇಡೀ ಜಗತ್ತಿನಲ್ಲಿ, ಇದು ಮೈಸೂರು ಪಾಕ್ ಎಂದು ಅಕ್ರೋಶ ಹೊರಹಕಿದ್ದಾರು.

ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಸರ್ಕಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಬಳಿ ಆನಂದ್ ಅವರು ಯಾವ ಉದ್ದೇಶದಿಂದ ಹೋಗಿದ್ದರೋ ಗೊತ್ತಿಲ್ಲ. ಆದರೆ ಕೇಂದ್ರ ಸರ್ಕಾರ ತಮಿಳುನಾಡಿಗೆ ಮೈಸೂರು ಪಾಕ್ ಕೊಟ್ಟಿಲ್ಲ, ಅದು ಶುದ್ದ ಸುಳ್ಳು ಸುದ್ದಿ. ಅವರು ಸಚಿವೆಯ ಜೊತೆ ಫೋಟೋ ಹಾಕಿಕೊಂಡು ಅದಕ್ಕೆ ಏನೋ ಕ್ಯಾಪ್ಷನ್ ಬರೆದುಕೊಂಡರೆ ಅದಕ್ಕೆ ನಾವು ಹೊಣೆಯಲ್ಲ. ಅದು ಅವರವರ ಹೊಣೆಗೇಡಿತನವನ್ನು ತೋರಿಸಿಕೊಡುತ್ತದೆ. ಇಂತಹ ಸುಳ್ಳು ಸುದ್ದಿಯನ್ನು ನಂಬಬೇಡಿ, ಕೇಂದ್ರ ಸರ್ಕಾರ ಮೈಸೂರು ಪಾಕ್ ಜಿಐ ಟ್ಯಾಗ್ ತಮಿಳುನಾಡಿಗೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Also read: ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್; ಪೆಟ್ರೋಲ್​, ಡಿಸೇಲ್ ಬೆಲೆಯಲ್ಲಿ 5 ರಿಂದ 6 ರೂ ಏರಿಕೆ ಸಾಧ್ಯತೆ, ಬೆಲೆ ಏರಿಕೆಗೆ ಕಾರಣವೇನು??