ಕನ್ನಡದವರಿಗೆ ರಾಷ್ಟ್ರಗೀತೆ ಹಾಡಲು ಬರಲ್ಲ ಎಂದ ಶಿವಸೇನೆ ಮುಖಂಡ ಯಾರು ಅಂತೀರಾ ಇಲ್ಲಿ ನೋಡಿ..!

0
557

ಹೌದು ಕರ್ನಾಟಕದವರಿಗೆ ರಾಷ್ಟ್ರಗೀತೆ ಹಾಡಲು ಬರಲ್ಲ ಎಂದ ಶಿವಸೇನೆಯ ಮುಖಂಡ ಯಾರು ಗೊತ್ತಾ. ಶಿವಸೇನೆಯ ಗೋವಾ ಘಟಕದ ಅಧ್ಯಕ್ಷ ಶಿವಪ್ರಸಾದ್ ಜೋಶಿ ಶನಿವಾರ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ, ಸುದ್ದಿಯಾಗಿದ್ದಾರೆ.

Image result for shivaprasad joshi

ಕರ್ನಾಟಕದಲ್ಲಿ ಹಲವರು ರಾಷ್ಟ್ರಗೀತೆಯನ್ನು ಹಾಡಲಾರರು ಎನ್ನುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ. “ಗೋವಾದಲ್ಲಿರುವ ಜನರು ದೇಶಭಕ್ತರು. ನನಗೆ ಗೊತ್ತು, ಹಲವು ವಿದ್ಯಾರ್ಥಿಗಳು ವಂದೇ ಮಾತರಂನ ಪೂರ್ತಿಯಾಗಿ ಹಾಡಬಲ್ಲರು. ಕರ್ನಾಟಕದಲ್ಲಿ ಹಲವರಿಗೆ ನಮ್ಮ ರಾಷ್ಟ್ರಗೀತೆಯನ್ನು ಹೇಗೆ ಹಾಡಬೇಕೆಂದು ಕೂಡ ಗೊತ್ತಿಲ್ಲ. ಅವರಿಗೆ ನಮ್ಮ ರಾಷ್ಟ್ರಪಿತ ಯಾರು ಅಂತ ಸಹ ಗೊತ್ತಿಲ್ಲ” ಎಂದು ಮಾಧ್ಯಮದವರಿಗೆ ಜೋಶಿ ಹೇಳಿದ್ದಾರೆ.Image result for shivaprasad joshi

ಪಬ್ ಸಂಸ್ಕೃತಿ ನಿಷೇಧಕ್ಕೆ ಶಿವ ಸೇನೆ ಒತ್ತಾಯಿಸದಿರಬಹುದು. ಆದರೆ ತಡ ರಾತ್ರಿ ನಡೆಯುವ ಇಂಥ ಕೆಲಸಗಳಿಗೆ ನಮ್ಮ ವಿರೋಧವಿದೆ ಎಂದಿದ್ದಾರೆ. ನೀವು ರಾತ್ರಿ ಹನ್ನೆರಡಕ್ಕೆ ಹೋಗಿ ಪಬ್ ನಲ್ಲಿ ನೋಡಿ, ಹುಡುಗ-ಹುಡುಗಿಯರು ಹೊರಗೆ ಕೂತು ಕುಡಿಯುತ್ತಾ ಇರುತ್ತಾರೆ. ಪ್ರವಾಸಿಗರು ಏನು ಮಾಡಿದರೂ ನಾವು ತಲೆ ಕೆಡಿಸಿಕೊಳ್ಳಲ್ಲ. ಆದರೆ ಸ್ಥಳೀಯ ಹುಡುಗ-ಹುಡುಗಿಯರಿಗೆ ಬುದ್ಧಿ ಹೇಳಬೇಕಾದ್ದು ನಮ್ಮ ಜವಾಬ್ದಾರಿ ಎಂದು ಜೋಶಿ ಹೇಳಿದ್ದಾರೆ.