85 ರ ಹರೆಯದಲ್ಲೂ ಯಾವುದೇ ಸಹಾಯವಿಲ್ಲದೆ 412 ಮೆಟ್ಟಿಲು ಹತ್ತಿ ಬಾಹುಬಲಿಯ ದರ್ಶನ ಪಡೆದ ದೇವೇಗೌಡರು…!!

0
570

Kannada News | Karnataka News

ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಜನಸಾಗರವೇ ಹರಿದು ಬರುತ್ತಿದೆ. ದೇಶದ ಮೂಲ-ಮೂಲೆಗಳಿಂದ ಜನ 12 ವರ್ಷಕ್ಕೊಮ್ಮೆ ನಡೆಯುವ ಈ ಐತಿಹಾಸಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಲಲು ಶ್ರಾವಣಬೆಳಗೋಳಕ್ಕೆ ಆಗಮಿಸುತ್ತಿದ್ದಾರೆ. ಇತ್ತೀಚಿಗೆ ದೇವೇಗೌಡರು ಇಲ್ಲಿ ಭೇಟಿ ನೀಡಿರುವುದು ವಿಶೇಷವಾಗಿತ್ತು, ಅದರಲ್ಲೇನಿದೆ ವಿಶೇಷ ಅಂತೀರಾ ಮುಂದೆ ಓದಿ.

ಶ್ರವಣಬೆಳಗೊಳಕ್ಕೆ ಎಲ್ಲ ವಯೋಮಾನದ ಜನರು ಆಗಮಿಸುತ್ತಾರೆ ಮತ್ತು ವಿಶೇಷವಾಗಿ ವೃದ್ದರಿಗಿ ಮತ್ತು ಬೆಟ್ಟ ಹತ್ತಲು ಸಾದ್ಯವಾಗದಿರುವವರಿಗೆಂದು ಅಲ್ಲಿ ಡೋಲಿಯ ವ್ಯವಸ್ಥೆ ಮಾಡಲಾಗಿದೆ. ಆದರೆ, ಮಾಜಿ ಪ್ರಧಾನಿ ಹಾಗು ಜಿಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷರಾದ ಎಚ್.ಡಿ.ದೇವೇಗೌಡರು 85 ರ ಇಳೀ ವಸ್ಸಿನಲ್ಲೂ ನಡೆದು ಬೆಟ್ಟ ಹತ್ತಿದ್ದಾರೆ.

ಹೌದು, ಗೊಮ್ಮಟೇಶ್ವರನ 88 ನೇಯ ಮಹಾಮಸ್ತಕಾಭಿಷೇಕ ಉತ್ಸವದಲ್ಲಿ ಪಾಲ್ಗೊಳ್ಲಲು ಬಂದಿದ್ದ ಎಚ್.ಡಿ.ದೇವೇಗೌಡರು 85 ರ ಇಳೀ ವಸ್ಸಲಿನಲ್ಲಿಯೂ 412 ಮೆಟ್ಟಿಲುಗಳಿರುವ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟವನ್ನು ಹತ್ತಿದ್ದಾರೆ. ಡೋಲಿಯ ಸಹಾಯ ಪಡೆಯಲು ದೇವೇಗೌಡರು ಸರಾಸರಿ ನಿರಾಕರಿಸಿದ್ದಾರೆ.

ಇದಕ್ಕೂ ಮುನ್ನ ಬಾಹುಬಲಿಯ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಡೋಲಿಯ ಸಹಾಯವಿಲ್ಲದೆ 412 ಮೆಟ್ಟಿಲುಗಳಿರುವ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟವನ್ನು ಹತ್ತಿದ್ದರು. ಆದರೆ, ದೇವೇಗೌಡರು ಎಲ್ಲರನ್ನು ಮೀರಿಸುವಂತೆ ಬೆಟ್ಟಹತ್ತಿರುವುದು ವಿಶೇಷವಾಗಿತ್ತು.

ಯಾವುದೇ ಡೋಲಿಯ ಸಹಾಯವಿಲ್ಲದೆ ದೇವೇಗೌಡರು ತಮ್ಮ ಆಪ್ತ ಸಹಾಯಕರ ನೆರವಿನೊಂದಿಗೆ ಬೆಟ್ಟ ಹತ್ತಿ ಗೊಮ್ಮಟೇಶ್ವರನ ದರ್ಶನ ಪಡೆದಿದ್ದರೆ. ಅಂದಹಾಗೆ 13 ದಿನಗಳ ಕಾಲ ವಿಜೃಂಭಣೆಯಿಂದ ನಡೆದ ಈ ಕಾರ್ಯಕ್ರಮಕ್ಕೆ ಇದೆ 26 ರಂದು ತೆರೆ ಬೀಳಲಿದೆ.

Also Read: ಗೊಮ್ಮಟಮೂರ್ತಿ ಹಾಗೂ ಪರಿಸರದ ಪೌಳಿಯಲ್ಲಿನ ಮೂರ್ತಿಗಳ ಭೌತಿಕ ವಿವರಗಳು