ದಿನ ಭವಿಷ್ಯ: 26, ಜನವರಿ 2018

0
1986
ದಿನ ಭವಿಷ್ಯ

ಮೇಷ:

ಆದಾಯದಷ್ಟೆ ಖರ್ಚು ಇದೆ. ಪ್ರಯಾಣಕ್ಕಾಗಿ ಅಧಿಕ ಹಣ ಖರ್ಚು ಮಾಡುವಿರಿ. ಚಿನ್ನಾಭರಣ ಖರೀದಿಸುವ ಯೋಜನೆ ಉಳ್ಳವರು ಧೈರ್ಯದಿಂದ ಖರೀದಿಸಬಹುದು. ಆಸ್ತಿ ಗಳಿಕೆ ವಿಚಾರದಲ್ಲಿ ನಿರ್ಧಾರ ಮುಂದೂಡಲು ಸರಿಯಾದ ಸಮಯ. ಆರೋಗ್ಯದ ಕಡೆ ಗಮನ ನೀಡಿ.

ವೃಷಭ:

ಕುಟುಂಬ ಸಮೇತರಾಗಿ ಶುಭ ಕಾರ್ಯಕ್ಕೆ ಪ್ರಯಾಣ ಬೆಳೆಸುವಿರಿ. ಅನಿರೀಕ್ಷಿತ ಮೂಲಗಳಿಂದ ಹಣ ಬರುವುದು. ಮೊಮ್ಮಕ್ಕಳ ಕಲರವದಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು. ಸಂಗಾತಿಯ ಜೊತೆ ಉತ್ತಮ ಸಮಯ ನಿಮ್ಮದಾಗಲಿದೆ.

ಮಿಥುನ:

ವೃತ್ತಿ ಸಂಬಂಧವಾಗಿ ದಿಢೀರ್‌ ಪ್ರಯಾಣ ಕೈಗೊಳ್ಳುವ ಸಾಧ್ಯತೆ. ನಿಮ್ಮ ಚಾಣಾಕ್ಷ ಬುದ್ಧಿಯಿಂದ ಕಂಪನಿಗೆ ಅಧಿಕ ಲಾಭವಾಗುವುದು. ಇದರಿಂದ ಮೇಲಧಿಕಾರಿಗಳು ನಿಮ್ಮನ್ನು ಕೊಂಡಾಡುವರು. ಸಹಜವಾಗಿಯೇ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

ಕಟಕ:

ಸಾಮಾಜಿಕ ಜೀವನದಲ್ಲಿ ಸಕ್ರಿಯವಾಗಿ ದುಡಿಯುವಿರಿ. ನಿಮಗೆ ಸವಾಲೊಡ್ಡುವ ರೀತಿಯಲ್ಲಿ ಅನೇಕ ಬೆಳವಣಿಗೆಗಳು ಉಂಟಾಗುವವು. ಆದಾಗ್ಯೂ ನಿಮ್ಮ ಏಕನಿಷ್ಠೆಯಿಂದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಜಯಶೀಲರಾಗುವಿರಿ. ಹಣಕಾಸು ಉತ್ತಮ ಪ್ರಗತಿಯಲ್ಲಿದೆ.

ಸಿಂಹ:

ಹಣ ಖರ್ಚು ಮಾಡುವ ವಿಷಯದಲ್ಲಿ ಬಿಗಿ ಹಿಡಿತ ನಿಮ್ಮದು. ಆದರೆ ಒಳಗಿನಿಂದ ಒಳಗೆ ಹಣ ಶೇಖರಿಸುವಿರಿ. ಆತ್ಮೀಯ ಸ್ನೇಹಿತ ಅಷ್ಟೆ ಏಕೆ ಸ್ವಂತ ಮಡದಿಯೇ ರೊಕ್ಕ ಕೇಳಿದರೂ ಇಲ್ಲ ಎನ್ನುವಿರಿ. ನಿಮ್ಮ ದೂರದೃಷ್ಟಿಯನ್ನು ಮೆಚ್ಚಿಕೊಳ್ಳಲೇಬೇಕು.

ಕನ್ಯಾ:

ಈದಿನ ಹಣ ಎಲ್ಲಿ ಹೋಗುತ್ತಿದೆ ಎಂದೇ ಗೊತ್ತಾಗುವುದಿಲ್ಲ. ಅಧಿಕ ಖರ್ಚು ಈದಿನ ನಿಮ್ಮ ಪಾಲಿಗೆ. ಪ್ರಯಾಣದ ಆಯಾಸ. ಬಂಧುಮಿತ್ರರೊಡನೆ ಅನಿವಾರ್ಯವಾಗಿ ನಗುವಿನ ಮುಖವಾಡ ಹಾಕಿಕೊಳ್ಳಬೇಕಾಗುವುದು. ಆರೋಗ್ಯ ಉತ್ತಮ.

ತುಲಾ:

ಕೆಲಸ ಕಾರ್ಯಗಳಲ್ಲಿ ನಿಮ್ಮಷ್ಟು ಪ್ರಾಮಾಣಿಕರು ಮತ್ತೊಬ್ಬರಿಲ್ಲ. ಎಲ್ಲವನ್ನು ಸರಿದೂಗಿಸುವ ಸಾಮರ್ಥ್ಯ‌ ನಿಮಗೆ ಮಾತ್ರ ಇರುವುದು ಎಂಬುದು ನಿಮ್ಮ ಮೇಲಧಿಕಾರಿಗೂ ತಿಳಿದಿದೆ. ಇದರಿಂದ ಸಹೋದ್ಯೋಗಿಗಳು ನಿಮ್ಮನ್ನು ಅಸೂಯೆಯಿಂದ ನೋಡುವರು.

ವೃಶ್ಚಿಕ:

ಹಣ ಖರ್ಚು ಮಾಡುವುದೇ ದೊಡ್ಡಸ್ತಿಕೆ ಎಂದು ಭಾವಿಸಿಕೊಳ್ಳಬೇಡಿ. ಬೇರೆಯವರ ಎದುರು ಪ್ರತಿಷ್ಠೆ ತೋರಿಸಿಕೊಳ್ಳುವ ಬದಲು ನಿಮ್ಮ ಹಾಸಿಗೆ ಇದ್ದಷ್ಟು ಕಾಲು ಚಾಚಿರಿ. ಪತ್ನಿ ಕಡೆಯಿಂದ ದ್ರವ್ಯಲಾಭವಾಗಲಿದೆ.

ಧನಸ್ಸು:

ಈದಿನ ನಿಮ್ಮ ಮಕ್ಕಳಿಗೆ ಉತ್ತಮ ಶಾಲೆಯಲ್ಲಿ ಸೀಟು ದೊರೆಯುವುದು. ಕೌಟುಂಬಿಕ ವಿಚಾರಗಳನ್ನು ಇತ್ಯರ್ಥ ಪಡಿಸುವ ಹೊಣೆಗಾರಿಕೆಯೂ ನಿಮ್ಮ ಮೇಲೆ ಬರುವುದು. ಸಂಗಾತಿಯನ್ನು ಖುಷಿ ಪಡಿಸುವತ್ತ ಗಮನ ಕೊಡಿರಿ.

ಮಕರ:

ನಿಮ್ಮ ಕಾರ್ಯಕ್ಷೇತ್ರದಲ್ಲಿ ಮುಂಬಡ್ತಿ ಪಡೆಯುವ ಸಾಧ್ಯತೆ. ಆದರೆ ದೈವದ ಅವಕೃಪೆಯಿಂದ ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತೆ ಆಗುವುದು. ಸಂಬಂಧಪಟ್ಟ ಅಧಿಕಾರಿಗಳಿಗೆ ಲಂಚದ ರೂಪದಲ್ಲಿ ಹಣ ಕೊಡಬೇಕಾಗುವುದು.

ಕುಂಭ:

ಹಳೆಯ ಸಂಸ್ಥೆಯಲ್ಲಿನ ಕಾರ್ಯಗಳನ್ನು ಮುಗಿಸುವ ಧಾವಂತ. ನೂತನ ಕಚೇರಿಯಲ್ಲಿನ ಸವಲತ್ತುಗಳ ಬಗೆಗೆ ಕನಸು ಕಾಣುವಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಅನವಶ್ಯಕ ದುಂದುವೆಚ್ಚಗಳಿಂದ ದೂರವಿರಿ.

ಮೀನ:

Meena1

ಕೆಲವರ ಬಣ್ಣದ ಮಾತುಗಳಿಗೆ ಮರುಳಾಗದಿರಿ. ಬಣ್ಣದ ಮಾತುಗಳಿಗೆ ಮರುಳಾದರೆ ನಷ್ಟ ಕಟ್ಟಿಟ್ಟದ್ದು. ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ಕೈಗೊಳ್ಳದಿರುವುದೇ ವಾಸಿ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಂಭವವಿರುತ್ತದೆ.