ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಲಿರುವ ಚಿತ್ರ ‘ನಟ ಸಾರ್ವಭೌಮ’; ಕೆಲವೇ ಕ್ಷಣಗಳಲ್ಲಿ ಟಿಕೆಟ್ ಸೋಲ್ಡ್ ಔಟ್..

0
535

ಪವರ್ ಸ್ಟಾರ್ ಸಿನಿಮಾ ಎಂದರೆ ಅದೇನೋ ಗೊತ್ತಿಲ್ಲ ಜನರು ಕುಟುಂಬ ಸಮೇತವಾಗಿ ನೋಡುತ್ತಾರೆ. ಅದರಲ್ಲಿ ಪುನಿತ್ ಅವರ ಚಿತ್ರಗಳು ಬಹುತೇಕವಾಗಿ ಫ್ಯಾಮಿಲಿ ಜೊತೆಗೆ ಕುಳಿತು ನೋಡುವ ಸಿನಿಮಾ ಆಗಿರುತ್ತೇವೆ, ಇಂತಹ ಸಿನಿಮಾಗಳು ವರ್ಷಕ್ಕೆ ಒಂದೇ ಬಂದರು ಹವಾ ಎಬ್ಬಿಸಿ ಹೋಗುತ್ತೇವೆ. ಅದರಂತೆಯೇ ಸುದ್ದಿಯಲ್ಲಿರುವ ನಟಸಾರ್ವಭೌಮ ಸಿನಿಮಾದ ಟ್ರೈಲರ್ ಕೂಡ ಇತಿಹಾಸವನ್ನು ಸೃಷ್ಟಿಸಿದೆ. ಇನ್ನೂ ಪುನಿತ್ ಸಿನಿಮಾ ಅಂದ್ರೆ ಬಾಕ್ಸ್ ಆಫೀಸ್ ನಲ್ಲಿ ಕನ್ನಡ ಸಿನಿಮಾದ ಮತ್ತೊಂದು ಹವಾ ಅಂತಾನೆ ತಿಳಿಯುತ್ತೆ. ಅದರಲ್ಲಿ ಹೇಳಿ ಕೇಳಿ ಈ ‘ನಟ ಸಾರ್ವಭೌಮ’ ಪವನ್ ಒಡೆಯರ್ ನಿರ್ದೇಶನದ ಚಿತ್ರವಾಗಿದ್ದು ಬಹುತೇಕ ಥಿಯೇಟರ್ನಲ್ಲಿ ಈಗಾಗಲೇ ಟಿಕೆಟ್ ಸೋಲ್ಡ್ಔಟ್ ಆಗಿವೆ.

ಹೌದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೇನೇ ಹಾಗೆ ವಿಭಿನ್ನ ನಟನೆ, ಕಾಮಿಡಿ, ಸಂಬಂಧಗಳ ಬೆಲೆ ಇರುವ ಸಿನಿಮಾ ಆಗಿರುತ್ತೇವೆ. ಅದೆ ಕಾರಣಕ್ಕೆ ಬಾಕ್ಸ್ ಆಫೀಸ್ ಅಲುಗಾಡುತ್ತೆ. ಅಭಿಮಾನಿಗಳ ಎದೆಬಡಿತ ಜೋರಾಗುತ್ತೆ. ಇಡಿ ಮನೆ ಮಂದಿಯ ಕಾತುರ ಹೆಚ್ಚುತ್ತೆ. ಇನ್ನೂ ಈ ಸಿನಿಮಾ ಬಗ್ಗೆ ತಿಳಿದಿರುವಂತೆ ಹಾರರ್ ಫೀಲ್ ಹೊಂದಿರುವ ‘ನಟ ಸಾರ್ವಭೌಮ’ ಫೆಬ್ರುವರಿ 7 ರಂದು ಬಿಡುಗಡೆಯಾಗಲಿದೆ. ಬೆಳಗ್ಗೆ 4 ಗಂಟೆ ಶೋ ಶುರುವಾಗಲಿದ್ದು ಟಿಕೆಟ್ ಬುಕಿಂಗ್ ಓಪನ್ ಆದ ಕೆಲವೇ ಕ್ಷಣದಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದ್ದು ಸಿನಿಮಾ ಪ್ರಿಯರಿಗೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಪ್ರಮುಖ್ಯ ಥಿಯೇಟರ್-ಗಳಲ್ಲಿ ‘ನಟ ಸಾರ್ವಭೌಮ’ ಮಿಸ್?

ಹೌದು ಪುನಿತ್ ಸಿನಿಮಾದ ಬಿಡುಗಡೆಯ ದಿನಾಂಕ ತಿಳಿದಂತೆ ರಾಜ್ಯದ ತುಂಬೆಲ್ಲ ಪೋಸ್ಟರ್ ಗಳ ಹವಾ ಹೆಚ್ಚುತ್ತೆ ಅಪ್ಪು ಅಭಿಮಾನಿಗಳಿಗೆ ಅದೊಂದು ಅಭ್ಯಾಸವಾಗಿ ಹೋಗಿದೆ. ಯಾವ್ಯಾವ ಜಾಗದಲ್ಲಿ ನಮ್ಮ ಅಪ್ಪು ಬಾಸ್ ಪೋಸ್ಟರ್ ಹಾಕಬೇಕು… ತಮ್ಮ ಅಭಿಮಾನದ ಬ್ಯಾನರ್​ಗಳು ಎಲ್ಲೆಲ್ಲಿ ರಾರಾಜಿಸಬೇಕು… ಅಂತ ಕೆ.ಜಿ ರಸ್ತೆಯಲ್ಲಿರೋ ಸಂತೋಷ್- ನರ್ತಕಿ ಚಿತ್ರಮಂದಿರದ ಜಾಗವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಬಿಡುತ್ತಿದ್ದರು. ಪವರ್​ ಸ್ಟಾರ್​ ಪಕ್ಕಾ ಅಭಿಮಾನಿಗಳಿಗಂತೂ ಒಂದು ವಾರ ಈ ಚಿತ್ರಮಂದಿರವೇ ಮನೆಯಾಗಿಬಿಡುತ್ತಿತ್ತು. ಸಂತೋಷ್ ಚಿತ್ರಮಂದಿರವೇ ಪುನೀತ್ ಅಭಿಮಾನಿಗಳ ಸಂತೋಷ ಸಂಭ್ರಮದ ಸ್ಥಳವಾಗುತ್ತಿತ್ತು.

ಆದರೆ ‘ನಟಸಾರ್ವಭೌಮ’ ಚಿತ್ರಕ್ಕೆ ಸಂತೋಷ್ ಮತ್ತು ನರ್ತಕಿ ಯಾವುದೂ ಸಿಕ್ಕಿಲ್ಲ. ಹಾಗೆಯೇ ತ್ರಿವೇಣಿ ಚಿತ್ರಮಂದಿರಕ್ಕೆ ಶಿಫ್ಟ್ ಆಗಿದೆ. ಪುನೀತ್ ಸಿನಿಮಾ ಅಂದರೆ ಎಷ್ಟೋ ಅಭಿಮಾನಿಗಳು ಥಿಯೇಟರ್ ಯಾವುದು ಅಂತ ಕೂಡ ನೋಡುತ್ತಿರಲಿಲ್ಲ. ಸಂತೋಷ್ ಇರುತ್ತೆ ಇಲ್ಲದಿದ್ದರೆ ನರ್ತಕಿ ಅಂತ ಫಿಕ್ಸಾಗಿ, ಇರುತ್ತಿತು ಆದರೆ ಈ ಎರಡು ಕಡೆ ಸಿನಿಮಾ ಮಿಸ್ ಆಗಿದ್ದು ಅಭಿಮಾನಿಗಳಿಗೆ ಶಾಕ್ ಜೊತೆಗೆ ಬೇಸರ ತಂದಿದೆ.

ಪುನಿತ್ ಸಿನಿಮಾ ಹಿಟ್ ಆಗಲು ಇದೆ ಕಾರಣವಂತೆ!

ಬೇರೆ ಹೀರೋಗಳ ಹಾಗೆ ಪವರ್ ಸ್ಟಾರ್​ ಪುನೀತ್​​ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ವ್ಯಕ್ತಿಯೇ ಅಲ್ಲ. ಸಿನಿಮಾ ಸೋತಾಗಲೂ ಗೆದ್ದಾಗಲೂ ಮುಖದಲ್ಲಿನ ನಗು ಮಾಯವಾಗಲ್ಲ. ಆದರೆ ‘ನಟಸಾರ್ವಭೌಮ’ ರಿಲೀಸ್ ವಿಚಾರದಲ್ಲಿ ಮಾತ್ರ ಅಪ್ಪುಗೆ ಸಣ್ಣ ಶಾಕ್ ಆಗಿದೆ. ಅದೇನ್ ಅಂದರೆ ಕೆಲವೊಂದು ಮುಖ್ಯ ಚಿತ್ರ ಮಂದಿರಗಳಲ್ಲಿ ಸಿನಿಮಾ ಮಿಸ್ ಆಗಿರೋದು ಪುನಿತ್ ಅವರಿಗೆ ಶಾಕ್ ಆಗಿದೆ. ಇನ್ನೂ ಸಿನಿಮಾದ ನಾಯಕಿಯಾಗಿ ರಚಿತಾ ರಾಮ್ ಮತ್ತು ಪುನಿತ್ ಅವರ ಜೋಡಿ ಇಡಿ ಚಿತ್ರವನ್ನೇ ತಂಪುಗೊಳಿಸಿದೆ. ಇನ್ನೂಈ ಸಿನಿಮಾ ಕೆಜಿಎಫ್ ರೀತಿಯಲ್ಲಿ ಹಣ ಗಳಿಸುವ ನಿರೀಕ್ಷೆಯಿದೆ. ಈಗಾಗಲೇ ಬುಕ್ ಆಗಿರುವ ಟಿಕೆಟ್-ಗಳ ಅಬ್ಬರ ಎಲ್ಲ ನಿರೀಕ್ಷೆಯನ್ನು ಮಿರಲಿದೆ ಎಂದು ಕನ್ನಡ ಚಿತ್ರರಂಗ ತಿಳಿಸಿದೆ.

Also read: ನಮ್ಮ ಅಪ್ಪು, ತೆರೆಯ ಮೇಲಷ್ಟೇ ಅಲ್ಲ ನಿಜ ಜೀವನದಲ್ಲಿಯೂ ಬಂಗಾರದ ರಾಜಕುಮಾರ!!!