ಎಚ್ಚರಿಕೆ !!! ಕನ್ನಡ ಧ್ವಜ ಸುಟ್ಟರೆ ಪೋಲೀಸರ ಅತಿಥಿಯಾಗುತ್ತೀರಿ !

0
1144

ಕನ್ನಡ ಧ್ವಜವನ್ನು ಹರಿದು, ಸುಟ್ಟು ಹಾಕಿ, ಅಪವಿತ್ರ [desecrate] ಗೊಳಿಸುತಿದ್ದ ಕನ್ನಡ ದ್ರೋಹಿಗಳಿಗೆ ರಾಜ್ಯ ಸರ್ಕಾರ ಚಾಟಿ ಬೀಸಿದೆ. ಮಂಗಳವಾರ, ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಮಂತ್ರಿ ಶ್ರೀ ಸಿದ್ದರಾಮಯ್ಯ ನವರು ” ರಾಷ್ಟ್ರೀಯ ಬಾವುಟದ ರೀತಿಯಲ್ಲಿ ರಾಜ್ಯ ಬಾವುಟಕ್ಕೂ ಸಂಹಿತೆ ಜಾರಿಗೊಳಿಸಲು ನಿಯಮಾವಳಿ ರೂಪಿಸಲಾಗುವುದೆಂದು ಹೇಳಿದ್ದಾರೆ”

ತನ್ಮೂಲಕ ರಾಷ್ಟ್ರೀಯ ಬಾವುಟಕ್ಕೆ ಸಲ್ಲಬೇಕಾದ ಗೌರವವನ್ನು ರಾಜ್ಯ ಬಾವುಟಕ್ಕೂ ಸಲ್ಲುವಂತೆ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ರಾಜ್ಯ ಬಾವುಟ ಸುಡುವುದು, ಅಪವಿತ್ರಗೊಳಿಸವುದು, ಕಿತ್ತುಹಾಕುವುದು, ಮಸಿಹಾಕಿದ್ದಲ್ಲಿ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯೋದು ಖಂಡಿತ.

ಏಕೀಕರಣದ ವಜ್ರ ಮಹೋತ್ಸವ ಆಚರಣೆ ಸಂದರ್ಭದಲ್ಲೇ ಈ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿರುವುದು ಸ್ವಾಗತಾರ್ಹ. ಎಂ.ಇ.ಎಸ್, ಗಡಿಯಲ್ಲಿರುವ ಕೆಲ ತಮಿಳು ಭಾಷಿಕರು ಕನ್ನಡ ಬಾವುಟಕ್ಕೆ ತೋರುತ್ತಿದ್ದ ಅಗೌರವಕ್ಕೆ ಈ ನಿರ್ಧಾರದಿಂದ ಬ್ರೇಕ್ ಬೀಳಲಿದೆ.

ಸಂಹಿತೆ ಜಾರಿಗೊಳಿಸಿ ರಾಜ್ಯಧ್ವಜಕ್ಕೆ ಅಗೌರವ ತೋರುವ ಪುಂಡರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವದಾಗಿ ಸರ್ಕಾರ ಕೈಗೊಂಡಿರುವ ಕ್ರಮವನ್ನು ಅನೇಕ ಕನ್ನಡ ಪರ ಸಂಘಟನೆಗಳು ಸ್ವಾಗತಿಸಿವೆ.