ಇಂಗ್ಲೆಂಡ್ ತಂಡದ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್

0
708

ಇಂಗ್ಲೆಂಡ್ ತಂಡದ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ್ದಾರೆ. ರಾಹುಲ್ 311 ಎಸೆತಗಳಲ್ಲಿ 16 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 199 ರನ್ ಗಳಿಸಿದ್ದಾಗ ರಶೀದ್ ಎಸೆತದಲ್ಲಿ ಬಟ್ಲರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಕೇವಲ ಒಂದು ರನ್ ನಿಂದ ದ್ವಿಶತಕ ತಪ್ಪಿಸಿಕೊಂಡಿದ್ದಾರೆ.

ಕನ್ನಡಿಗ ಕೆಎಲ್ ರಾಹುಲ್ ಶತಕ ಸಿಡಿಸಿದ್ದು ಈ ವೇಳೆ ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತನ್ನದೇ ಶತಕದಂತೆ ಸಂಭ್ರಮಿಸಿದ್ದಾರೆ. ಐದನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ ನಲ್ಲಿ 477 ರನ್ ಗಳಿಸಿ ಆಲೌಟ್ ಆಗಿದೆ. ನಂತರ ಇನ್ನಿಂಗ್ಸ್ ಪ್ರಾರಂಭಿಸಿದ್ದ ಟೀಂ ಇಂಡಿಯಾ 391 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಇನ್ನೂ 6 ವಿಕೆಟ್ ಉಳಿಸಿಕೊಂಡಿರುವ ಭಾರತ ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಗಳಿಸಬೇಕಾದರೆ 86 ರನ್ ಗಳಿಸಬೇಕಾಗಿದೆ.

ಪಾರ್ಥಿವ್ ಪಟೇಲ್ (71) ಅರ್ಧಶತಕ ಬಾರಿಸಿ ಔಟಾದ ನಂತರ ಬಂದ ಚೇತೇಶ್ವರ ಪೂಜಾರ (16) ಮತ್ತು ನಾಯಕ ವಿರಾಟ್ ಕೊಹ್ಲಿ (15) ವಿಫಲರಾದಾಗ ತಂಡದಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಕರ್ನಾಟಕದ ಬ್ಯಾಟ್ಸ್ ಮನ್ ಗಳಾದ ರಾಹುಲ್ ಮತ್ತು ಕರುಣ್ ನಾಯರ್ 4ನೇ ವಿಕೆಟ್ ಗೆ 161 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಮುನ್ನೆಡೆಸಿದ್ದಾರೆ.