ಕನ್ನಡಿಗರನ್ನು ಕೆಣಕಿದ ಗೋ ಏರ್ವೇಸ್, ಕನ್ನಡ ಮಾತಾಡಿದಕ್ಕೆ ಅವಮಾನಿಸಿದ ಸಿಬ್ಬಂದಿ..!!

0
767

ಇತ್ತೀಚೆಗೆ ಕನ್ನಡಿಗರ ಮೇಲೆ ಹೊರರಾಜ್ಯದವರ ದಬ್ಬಾಳಿಕೆ ಹೆಚ್ಚಾಗುತ್ತಿದ್ದು. ಕರ್ನಾಟಕದಲ್ಲಿ ಕನ್ನಡ ಮಾತನಾಡುವುದೇ ಅಪರಾಧ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಗೋ ಏರ್ ವಿಮಾನಯಾನ ಸಂಸ್ಥೆಯ ಅಧಿಕಾರಿಯೊಬ್ಬರು ಕನ್ನಡ ಮಾತನಾಡಿದ ಕಾರಣಕ್ಕಾಗಿ ಪ್ರಯಾಣಿಕರೊಬ್ಬರ ಟಿಕೆಟ್ ನೀಡದೆ ಅವಮಾನಿಸಿದ ಘಟನೆ ಬುಧವಾರ ಬೆಳೆಗ್ಗೆ ನೆಡೆದಿದೆ.

ಖಾಸಗಿ ಕಂಪನಿಯ ಉದ್ಯೋಗಿ ಬಾಲಾಜಿ ನಾರಾಯಣ ಮೂರ್ತಿ ಅವಮಾನಕ್ಕೆ ಈಡಾದ ವ್ಯಕ್ತಿ. ಇನ್ನೂ ಈ ಬಗ್ಗೆ ಬಾಲಾಜಿ ನಾರಾಯಣ ಮೂರ್ತಿ ಅವರು ತಮ್ಮ ಫೇಸ್ಬುಕ್ ನಲ್ಲಿ ಗೋ ಏರ್ ವಿಮಾನಯಾನ ಸಂಸ್ಥೆಯು ಭಾಷಾ ತಾರತಮ್ಯ ಮಾಡಿದೆ ಎಂದು ಆರೋಪಿಸಿ ಪೋಸ್ಟ್ ವೊಂದನ್ನ ಹಾಕಿದ್ದಾರೆ.

ಆಫೀಸ್ ಕೆಲಸದ ಮೇಲೆ ಮುಂಬೈಗೆ ಹೋಗಬೇಕೆಂದು ವಿಮಾನ ನಿಲ್ದಾಣಕ್ಕೆ ಹೋದೆ 15 ನಿಮಿಷ ತಡವಾಗಿ ಹೋಗಿದ್ದರಿಂದ 9 ಗಂಟೆಗೆ ಹೊರಡುವ ವಿಮಾನಕ್ಕೆ ನನಗೆ ಟಿಕೆಟ್ ಕೊಡಲು ನಿರಾಕರಿಸದರು. ಹಾಗಾಗಿ 9.45 ಕ್ಕೆ ಹೊರಡುವ ವಿಮಾನಕ್ಕೆ ಟಿಕೆಟ್ ಕೊಡಿ ಎಂದು ಕೇಳಿದೆ ಆಗ ಗೋ ಏರ್ ನ ಸಿಬ್ಬಂದಿ ಸಂದೀಪ್ ಎಂಬುವವನು ಟಿಕೀಟ್ ಕೊಡೋದಿಲ್ಲ ಎಂದು ಏರು ಧ್ವನಿಯಲ್ಲಿ ನನಗೆ ಬೈದಿದ್ದಾನೆ. ನಾನು ಯಾಕೆ ಟಿಕೆಟ್ ಕೊಡೋದಿಲ್ಲ ಎಂದು ಕೇಳಿದಕ್ಕೆ ನೀವು ವಿಮಾನ ನಿಲ್ದಾಣದ ಆವರಣದಲ್ಲಿ ಕನ್ನಡದಲ್ಲಿ ಮಾತನಾಡಿದ್ದೀರಿ ಇಲ್ಲಿ ಹಿಂದಿ ಅಥವಾ ಇಂಗ್ಲಿಷ್ ಭಾಷೆಯನ್ನೇ ಮಾತನಾಡಬೇಕು ಎಂದು ನನಗೆ ಅವಮಾನ ಮಾಡಿದ, ನಾನು ಕನ್ನಡ ಸ್ಥಳೀಯ ಭಾಷೆಯಲ್ಲವೇ ಎಂದು ಕೇಳಿದಕ್ಕೆ ಟಿಕೆಟ್ ಕೊಡೋದಿಲ್ಲ ಎಂದು ಅವಮಾನಿಸಿದ್ದಾರೆ. ” ಎಂದು ಬಾಲಾಜಿ ನಾರಾಯಣ ಮೂರ್ತಿ ಘಟನೆಯ ವಿವರಣೆಯನ್ನು ತಮ್ಮ ಫೇಸ್ಬುಕ್ ನಲ್ಲಿ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.

ಗೋ ಏರ್ ನಲ್ಲಿ ಪ್ರಯಾಣ ಮಾಡಲು ಟಿಕೆಟ್ ಕೊಡಲು ನಿರಾಕರಿಸಿದ ಕಾರಣ ನಾನು ಅನಿವಾರ್ಯವಾಗಿ ಏರ್ ಜೆಟ್ ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಮುಂಬೈಗೆ ತೆರಳಬೇಕಾಯಿತು ಎಂದು ನಾರಾಯಣಮೂರ್ತಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಕೇವಲ ಕನ್ನಡ ಮಾತನಾಡಿದ್ದಕ್ಕೆ ಈ ರೀತಿಯಾದಂತಹ ಅಪಮಾನಗಳಿಗೆ ಕನ್ನಡಿಗರು ಗುರಿಯಾಗುತ್ತಿರುವುದು ಶೋಚನೀಯ ವಿಷಯ.