ಖಾಸಗಿ ಕಂಪೆನಿಯಲ್ಲಿ ಕನ್ನಡಿಗರಿಗೆ ಮೀಸಲಾತಿ, ಆದರೆ ಇದು ಐಟಿ-ಬಿಟಿಗೆ ಅನ್ವಯ ಅಗೋಲ್ವಂತೆ, ಇದು ಕೇವಲ ಎಲೆಕ್ಷನ್ ಗಿಮ್ಮಿಕ್?

0
272

ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮಿಸಲಾತಿ ನೀಡಬೇಕು ಎಂದು ಬಹುದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಮಹತ್ವದ ತಿರುವು ಸಿಕ್ಕುದು ಖಾಸಗಿ ಕಂಪನಿ​ಗಳು ಇನ್ನು ಮುಂದೆ ಸಿ ಹಾಗೂ ಡಿ ದರ್ಜೆ ಉದ್ಯೋಗಗಳಲ್ಲಿ ಶೇ. 100ರಷ್ಟುಮೀಸ​ಲಾ​ತಿ​ಯನ್ನು ಕನ್ನ​ಡಿ​ಗ​ರಿಗೆ ನೀಡು​ವು​ದನ್ನು ಕಡ್ಡಾ​ಯ​ಗೊ​ಳಿ​ಸಲು ರಾಜ್ಯ ಸರ್ಕಾರ ನಿರ್ಧ​ರಿ​ಸಿ​ದೆ. ಈ ಹಿನ್ನೆಯಲ್ಲಿ ಡಾ. ಸರೋಜಿನಿ ಮಹಿಷಿ ವರದಿ ಶಿಫಾರಸು ಆಧಾರದ ಮೇಲೆ ಖಾಸಗಿ ಕಂಪೆನಿಗಳಲ್ಲೂ ಕನ್ನಡಿಗರಿಗೆ ಕಡ್ಡಾಯವಾಗಿ ಆದ್ಯತೆ ನೀಡಲು ‘ಕರ್ನಾಟಕ ಔದ್ಯೋಗಿಕ ಕೈಗಾರಿಕಾ ಉದ್ಯೋಗಗಳ ನಿಯಮಾವಳಿ-1961’ಗೆ ತಿದ್ದುಪಡಿ ತರಲು ತನ್ನ ಒಪ್ಪಿಗೆ ನೀಡಿದ್ದು. ಸಚಿವ ಸಂಪುಟ ಸಭೆ​ಯಲ್ಲಿ ಈ ಮಹ​ತ್ವದ ನಿರ್ಧಾರ ಕೈಗೊ​ಳ್ಳ​ಲಾ​ಗಿದೆ.

Also read: ಸ್ಪರ್ಧಾತ್ಮಕ ಕಾಲದಲ್ಲಿ 9 ಸರ್ಕಾರಿ ಹುದ್ದೆಗಳನ್ನು ಪಡೆದು ಅವುಗಳನ್ನು ತ್ಯೆಜಿಸಿದ ಯುವತಿ ತನ್ನ ಗುರಿಯತ್ತೆ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾಳೆ..

h2>ಯಾವ ಕಂಪನಿಗಳಲ್ಲಿ ಮಿಸಲಾತಿ?

ಸಚಿವ ಸಂಪುಟ ಸಭೆ​ಯ ನಿರ್ಧಾರದಂತೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹಧನ, ಭೂಮಿ, ಭೂ ಕಂದಾಯ ವಿನಾಯಿತಿ, ಇಂಧನ ಶುಲ್ಕ ರಿಯಾಯಿತಿ ಸೇರಿದಂತೆ ಯಾವುದೇ ಪರೋಕ್ಷ ಹಾಗೂ ಪ್ರತ್ಯಕ್ಷ ಸಹಾಯ ಪಡೆದ ಕಂಪೆನಿಗಳು ಹುದ್ದೆಗಳ ಲಭ್ಯತೆ ಆಧಾರದ ಮೇಲೆ ಕನ್ನಡಿಗರಿಗೆ ಕಡ್ಡಾಯ ಆದ್ಯತೆ ನೀಡಬೇಕು. ಆದರೆ, ಈ ಕಾಯ್ದೆ ಅಡಿ ಬರದ ಖಾಸಗಿ ಸಂಸ್ಥೆ​ಗಳಿಗೆ (ಐ​ಟಿ-ಬಿಟಿ ಸಂಸ್ಥೆ​ಗ​ಳು) ಈ ಕಡ್ಡಾಯ ನೀತಿ ಅನ್ವಯ ವಾಗು​ವು​ದಿ​ಲ್ಲ. ಉಳಿ​ದಂತೆ ಈ ಕಾಯ್ದೆ ಅಡಿ ಬರುವ ಎಲ್ಲಾ ಖಾಸಗಿ ಸಂಸ್ಥೆ​ಗಳು ಕಡ್ಡಾ​ಯ​ವಾಗಿ ಈ ನೀತಿ ಪಾಲಿ​ಸ​ಬೇಕು ಎಂದು ಸಂಪುಟ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

Also read: ಈ ಸ್ಮಾರ್ಟ್ ಫೋನ್-ಗಳು ಅತೀ ಹೆಚ್ಚು ಅಪಾಯಕಾರಿ ರೇಡಿಯೇಶನ್ ಹೋರಹಮ್ಮುತ್ತವೆ, ನಿಮ್ಮ ಸ್ಮಾರ್ಟ್ ಫೋನ್ ಈ ಪಟ್ಟಿಯಲ್ಲಿ ಇದೆಯೇ ತಿಳಿದುಕೊಳ್ಳಿ…

ಕಳೆದ ಎರಡು ವರ್ಷಗಳ ಹಿಂದೆ ಕನ್ನಡಿಗರಿಗೆ ಖಾಸಗಿ ಉದ್ಯೋಗದಲ್ಲೂ ಮೀಸಲಾತಿ ಕಲ್ಪಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ, ಇದಕ್ಕೆ ಕಾನೂನಿನಲ್ಲಿ ಹಲವು ತೊಡಕುಗಳು ಉಂಟಾಗಿತ್ತು. ಹೀಗಾಗಿ ‘ಕರ್ನಾಟಕ ಔದ್ಯೋಗಿಕ ಕೈಗಾರಿಕಾ ಉದ್ಯೋಗಗಳ ನಿಯಮಾವಳಿ’ ಅಡಿ ಬರುವ ಕಂಪೆನಿಗಳು ಸರ್ಕಾರದಿಂದ ರಿಯಾಯಿತಿ ಅಥವಾ ಸವಲತ್ತುಗಳನ್ನು ಪಡೆಯುತ್ತಿದ್ದರೆ ಅಂತಹ ಕಂಪೆನಿಗಳಿಗೆ ಇದನ್ನು ಕಡ್ಡಾಯ ಮಾಡಿ ನಿಯಮಾವಳಿಗೆ ತಿದ್ದುಪಡಿ ತಂದಿದ್ದೇವೆ. ಮುಂದಿನ ಹಂತದಲ್ಲಿ ಇವುಗಳಿಗೆ ಮತ್ತಷ್ಟುಸಮರ್ಪಕ ನಿಯಮಾವಳಿ ರೂಪಿಸಲಾಗುವದು ಎಂದು ಹೇಳಿದರು.

ನಿಯಮಕ್ಕೆ ವಿರುದ್ದವಾಗಿ ನಡೆದರೆ ಕ್ರಮ:

ರಾಜ್ಯ ಸರ್ಕಾ​ರ​ದಿಂದ ಸವ​ಲತ್ತು ಪಡೆದ ಎಲ್ಲ ಖಾಸಗಿ ಕಂಪನಿ​ಗಳು ಇನ್ನು ಮುಂದೆ ‘ಸಿ’ ಹಾಗೂ ‘ಡಿ’ ದರ್ಜೆ ಉದ್ಯೋಗಗಳಲ್ಲಿ ಶೇ. 100ರಷ್ಟುಮೀಸ​ಲಾ​ತಿ​ಯನ್ನು ಕನ್ನ​ಡಿ​ಗ​ರಿಗೆ
ನೀಡು​ವು​ದನ್ನು ಕಡ್ಡಾ​ಯ​ಗೊ​ಳಿ​ಸಲು ರಾಜ್ಯ ಸರ್ಕಾರ ನಿರ್ಧ​ರಿ​ಸಿ​ದೆ. ಈ ನೀತಿ ಉಲ್ಲಂಘಿಸಿದ ಕಂಪೆನಿಗಳ ವಿರುದ್ಧ ದೂರು ನೀಡಲು ‘ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ’ ರಚಸಲಾ​ಗು​ವುದು. ದೂರುದಾರರು ಸಂಸ್ಥೆ​ಯಲ್ಲಿ ಅವಕಾಶವಿದ್ದರೂ ತಮಗೆ ಉದ್ಯೋಗ ನೀಡಿಲ್ಲ ಎಂದು ದೂರು ನೀಡಿದರೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಕಂಪೆನಿಗೆ ಉದ್ಯೋಗ ನೀಡುವಂತೆ ಸೂಚಿಸುತ್ತಾರೆ. ಒಂದು ವೇಳೆ ಸೂಚನೆಯನ್ನು ಉಲ್ಲಂಘಿಸಿದರೆ ಸರ್ಕಾರದಿಂದ ಕಂಪೆನಿಗೆ ನೀಡುತ್ತಿರುವ ಸವಲತ್ತುಗಳನ್ನು ತಡೆ ಹಿಡಿಯಲು ಈ ಕಾಯ್ದೆ ಅಡಿ ಅವ​ಕಾಶ ಕಲ್ಪಿ​ಸ​ಲಾ​ಗಿದೆ ಎಂದು ತಿಳಿ​ಸಿ​ದ​ರು.

ಕನ್ನಡಿಗರು ಎಂದರೆ ಯಾರು?

Also read: ಟಿವಿ ಪ್ರಿಯರೆ ಎಚ್ಚರ; ಹೆಚ್ಚು ಹೊತ್ತು ಟಿವಿ ನೋಡಿದರೆ ಬರಿ ಕಣ್ಣಿಗೆ ಅಪಾಯವಲ್ಲ ಕ್ಯಾನ್ಸರ್ ಕೂಡ ಬರುತ್ತೆ..

ಕನ್ನಡಿಗರು ಎಂದು ಕರೆಸಿಕೊಳ್ಳಲು ರಾಜ್ಯದಲ್ಲಿ ಕಡ್ಡಾಯವಾಗಿ ಹದಿನೈದು ವರ್ಷ ವಾಸವಿರಬೇಕು. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಉದ್ಯೋಗ ಬೇಡುವ ಕನಿಷ್ಠ ವಿದ್ಯಾರ್ಹತೆ ಪಡೆದಿರಬೇಕು. ಉದ್ಯೋಗ ಲಭ್ಯವಿದ್ದು ತಮಗೆ ಉದ್ದೇಶಪೂರ್ವಕವಾಗಿ ಆದ್ಯತೆ ನೀಡದಿದ್ದರೆ ಅವರು ದೂರು ಸಲ್ಲಿಸಬಹುದು. ಈವರೆಗೆ ಡಾ. ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಾನೂನು ಬಲ ಇರಲಿಲ್ಲ. ಹೀಗಾಗಿ ಕಾನೂನು ಬಲ ತುಂಬುವ ಸಲುವಾಗಿ ಈ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಆದರೆ, ಖಾಸಗಿ ಕಂಪೆನಿಗಳ ಸಿ ಹಾಗೂ ಡಿ ಹುದ್ದೆಗಳಲ್ಲಿ ಶೇ.100 ರಷ್ಟುಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂಬುದನ್ನು ಈವರೆಗೂ ಅನುಷ್ಠಾನಗೊಳಿಸಿರಲಿಲ್ಲ. ವರದಿ ಮಂಡನೆಯಾದ 33 ವರ್ಷಗಳ ಬಳಿಕ ಸಚಿವ ಸಂಪುಟದಲ್ಲಿ ಈ ಬಗ್ಗೆ ಒಪ್ಪಿಗೆ ಪಡೆಯಲಾಗಿದೆ.