ಕನ್ನಡಿಗರೇ ಎಚ್ಚೆತ್ತುಕೊಳ್ಳಿ ಕರ್ನಾಟಕದಲ್ಲಿ ಕನ್ನಡಿಗರು ನಶಿಸುತ್ತಿದ್ದಾರೆಯೇ…?

0
694

ಕಾಸರಗೋಡು ಕೇರಳಕ್ಕೆ ಸೇರಿಹೋಯ್ತು.

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು
ಕೋಲಾರ ಚೆನ್ನೈಗೆ.. ರಾಯಚೂರು ಆಂಧ್ರಕ್ಕೆ

ಉದಯ ಟಿವಿ ಮದ್ರಾಸ್‌ನವರದ್ದು,
ಸುವರ್ಣ ಟಿವಿ ಕೇರಳರವರದ್ದು,
ಕಲರ್ಸ್ ಟಿವಿ ಬಾಂಬೆ,
ಈಟಿವಿ ಆಂಧ್ರದವರದ್ದು,
ಜೀಟಿವಿ ಉತ್ತರ ಭಾರತರವರದ್ದು,
ತಲಕಾವೇರಿಯಲಿ ಹುಟ್ಟುವ ಕಾವೇರಿ ತಮಿಳುನಾಡಿಗೆ

ಐಎಎಸ್‌ ಆಫೀಸರ್‌ಗಳೆಲ್ಲಾ ಉತ್ತರಭಾರತದವರು,
ಐಪಿಎಸ್‌ ಆಫೀಸರ್‌ಗಳೆಲ್ಲ ಪರರಾಜ್ಯದವರು,
ಡ್ರೆೃವರ್‌ಗಳು, ಅಟೆಂಡರ್‌ಗಳು, ಸ್ವೀಪರ್‌ಗಳೆಲ್ಲ ಕನ್ನಡದವರು

ಸದಾಶಿವನಗರ ಸಿಂಧಿಗಳದ್ದು,
ಬಳೇಪೇಟೆ, ಚಿಕ್ಕಪೇಟೆ ಮಾರ್ವಾಡಿಗಳದ್ದು,

ಮಾವಳ್ಳಿ, ಗುಟ್ಟಹಳ್ಳಿ, ಸುಂಕನಹಳ್ಳಿಗಳೆಲ್ಲಾ ಕನ್ನಡಿಗರದ್ದು

ಹಿರೋಯಿನ್‌ಗಳು ಮುಂಬೈನವರು,

ಡೈರೆಕ್ಟರ್‌ಗಳು ಆಂಧ್ರ -ತಮಿಳುನಾಡಿನವರು,

ಲೈಟ್‌ಬಾಯ್ಸ್‌, ಪ್ರೊಡೆಕ್ಷನ್‌ ಬಾಯ್ಸ್‌, ಸೆಟ್‌ ಬಾಯ್ಸ್‌ಗಳೆಲ್ಲಾ
ಕನ್ನಡದವರು

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ,ತುಳುನಾಡು ಪ್ರತ್ಯೇಕ ರಾಜ್ಯ,
ಬೆಂಗಳೂರು ಕೇಂದ್ರಾಡಳಿತ ಪ್ರದೇಶ

ಕನ್ನಡಿಗರೇ, ಸ್ವಾಭಿಮಾನಿಗಳಾಗಿ,ಗುಲಾಮ ಸಂಸ್ಕೃತಿ,ಹಿಂದಿ ಹೇರಿಕೆ,
ಉತ್ತರ ಭಾರತೀಯರ ಕುತಂತ್ರ.
ವಲಸಿಗರ ಪುಂಡಾಟಕ್ಕೆ ಉತ್ತರ… ಪ್ರಾದೇಶಿಕತೆ, ರಾಯಣ್ಣ,ಅಬ್ಬಕ್ಕ,ಕುವೆಂಪು,ಬಸವಣ್ಣ,ಪುಲಿಕೇಶಿ ಕನ್ನಡಿಗರ ಗುರುತಾಗಲಿ….

ಕರ್ನಾಟಕ, ಕನ್ನಡದ ಬಗ್ಗೆ ನಮಗೇ ಅಭಿಮಾನವಿಲ್ಲದಿದ್ದಲ್ಲಿ ಮುಂದೊಂದು ದಿನ
ಕರ್ನಾಟಕವನ್ನು ಉತ್ತರ ಭಾರತದವರಿಗೆ ಮತ್ತು ವಲಸಿಗರಿಗೇ ಮಾರಿ, ಕನ್ನಡಿಗರು ಭಿಕ್ಷೆ ಬೇಡುವ ಪರಿಸ್ಥಿತಿ ಆಗೋದು ಪಕ್ಕ .

ಕನ್ನಡಿಗರೇ ಎಚ್ಚೆತ್ತುಕೊಳ್ಳಿ ಕರ್ನಾಟಕ ಮತ್ತು ಕನ್ನಡವನ್ನು ಕಾಪಾಡಿಕೊಳ್ಳಿ…

ನಾಲ್ಕು ಇಂಗ್ಲಿಷ್ ಅಕ್ಷರ ಬರೆದೊಡನೆ
ನಾಲ್ಕು ಹಿಂದಿ ಪದ ಮಾತಾಡಿದೊಡನೇ
ನೀವೇನೋ ದೊಡ್ಡ ಸಾಧನೆ ಮಾಡಿದಂತಾಗುವುದಿಲ್ಲ.

ಕನ್ನಡ ಬಳಸಿ ಕೊನೆಪಕ್ಷ ಮುಂದಿನ ನಮ್ಮ ತಲೆಮಾರಿಗೆ ನಮ್ಮ ಮಾತೃಭಾಷೆಯನ್ನು ಉಳಿಸಿಕೊಟ್ಟ ಬೆಳಸಿಕೊಟ್ಟ ಆತ್ಮತೃಪ್ತಿಯಾದರೂ ದೊರೆಯುತ್ತದೆ.
ಸಂಗ್ರಹ ಮಾಹಿತಿ