ಕೆಎಪಿಎಲ್‌ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ; ನವೆಂಬರ್ 19 ಕ್ಕೆ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು..

0
391

ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಕ್ಯುಟಿಕಲ್ಸ್ ಲಿಮಿಟೆಡ್ (ಕೆಎಪಿಎಲ್‌) ನಲ್ಲಿ ಖಾಲಿ ಇರುವ 28 ಆಗ್ರೋವೆಟ್ ಸೇವಾ ಪ್ರತಿನಿಧಿ ಹುದ್ದೆಗಳನ್ನು ಭರ್ತಿ ಮಾಡಲು ನವೆಂಬರ್ 19ರಂದು ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಬಹುದು. ಕೇಳಲಾಗಿರುವ ಅರ್ಹತೆಯುಳ್ಳ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು.

Also read: ನಾವಲ್ ಶಿಪ್ ರಿಪೇರಿ ಯಾರ್ಡ್‌ನಲ್ಲಿ 145 ಅಪ್ರೆಂಟಿಸ್ ಹುದ್ದೆಗಳಿಗೆ ಪುರುಷ್ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ಅಗ್ರೋವೆಟ್ ಸೇವಾ ಪ್ರತಿನಿಧಿ ಹುದ್ದೆಗಳ ನೇಮಕಾತಿ

ಸಂಸ್ಥೆ (Organisation): ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಕ್ಯುಟಿಕಲ್ಸ್ ಲಿಮಿಟೆಡ್

ಉದ್ಯೋಗ ಸ್ಥಳ (Job Location): ಭಾರತದೆಲ್ಲೆಡೆ

ವಿದ್ಯಾರ್ಹತೆ (Educational Qualification): ಗ್ರಾಜುಯೇಶನ್ (ವಿಜ್ಞಾನ/ವಾಣಿಜ್ಯ/ಕಲಾ)

ವಯೋಮಿತಿ: ಗರಿಷ್ಟ 26 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಲು ಅರ್ಹರು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಸಂದರ್ಶನ ನಡೆಯುವ ದಿನಾಂಕ ಮತ್ತು ಸಮಯ: ನವೆಂಬರ್ 19,2019ರಂದು ಬೆಳಿಗ್ಗೆ 9 ಘಂಟೆಗೆ

ಸಂದರ್ಶನ ನಡೆಯುವ ಸ್ಥಳ: ನಿರ್ಮನ್ ಭವನ, ಓರಿಯನ್ ಮಾಲ್ ಎದುರು, ಡಾ. ರಾಜ್‌ಕುಮಾರ್ ರಸ್ತೆ, 1 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು – 560010

ಅಧಿಕೃತ ವೆಬ್‌ಸೈಟ್‌: https://www.kaplindia.com/

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ.