ಇಂದು 18ನೇ ಕಾರ್ಗಿಲ್​ ವಿಜಯೋತ್ಸವ ಗೆದ್ದ ದಿನದ ಖುಷಿ ಮತ್ತು ನಮ್ಮ ಯೋಧರನ್ನು ಕಳೆದುಕೊಂಡ ನೋವಿನ ದಿನವೂ ಹೌದು..!

0
736

ಯುದ್ಧಕ್ಕೆ ಬಂದ ಪಾಕಿಸ್ಥಾನವನ್ನು ನಮ್ಮ ಭಾರತೀಯ ಸೇನೆ ಅಟ್ಟಾಡಿಸಿ ಹೊರ ನೂಕಿದ ದಿನದ ನೆನಪು ಇದು.

ದೈರ್ಯದಿಂದ ಎದೆತಟ್ಟಿ ನಮ್ಮ ಸಾಮರ್ಥ್ಯ ಇಡೀ ಜಗತ್ತಿಗೆ ತೋರಿಸಿದ ದಿನದ ನೆನಪು ಇದು

ನಮ್ಮ ಭಾರತಾಂಬೆಯ ರಕ್ಷಣೆ ಮಾಡಿ ನೂರಾರು ಯೋಧರು ಬಲಿಯಾದ ದಿನವೇ ಕಾರ್ಗಿಲ್‌ ‘ವಿಜಯ್‌ ದಿವಸ್‌’

ಪಾಕಿಸ್ತಾನದ ವಿರುದ್ಧ ೧೯೯೯ ರಲ್ಲಿ ಭಾರತ ಜಯಗಳಿಸಿದ ಐತಿಹಾಸಿಕ ದಿನವಾಗಿದೆ.ಕಾರ್ಗಿಲ್ ಯುದ್ಧ ನಡೆದು ಇಂದಿಗೆ ೧೮
ವರ್ಷವಾಗಿದೆ.

kargil vijay diwas-4
source:blogspot.com

ಹಿಮಾಲಯದ ಕೊರೆಯುವ ಚಳಿಯಲ್ಲಿ ೧೯೯೯ ರ ಮೇಯಿಂದ ಜು.೨೬ ರವರೆಗೆ ನಡೆದಿದ್ದ ಈ ಕದನದಲ್ಲಿ ಕರ್ನಾಟಕದ ೧೬ ಯೋಧರೂ ಸೇರಿ ಭಾರತೀಯ ಸೈನ್ಯದ ಸುಮಾರು ೫೨೭ ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ.

ಈ ಕಾರ್ಗಿಲ್ ಯುದ್ಧ ನೆಡದಿದ್ದು ನಮ್ಮ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಯುದ್ಧ ನೆಡೆದು ನಮ್ಮ ಯೋಧರು ವೀರ ಮರಣ ಹೊಂದಿದ್ದರು.

ಜಮ್ಮು-ಕಾಶ್ಮೀರದ ಉತ್ತರ ಗಡಿ ಭಾಗದಲ್ಲಿರುವ ಕಾರ್ಗಿಲ್ ಬೆಟ್ಟವನ್ನು ಯಾರಿಗೂ ಸುಳಿವು ಕೊಡದ ರೀತಿಯಲ್ಲಿ ಪಾಕಿಸ್ತಾನ ಸೇನಾಪಡೆ ವಶಪಡಿಸಿಕೊಂಡಿತು. ಬೆಟ್ಟದ ತುದಿಯಲ್ಲಿ ಬಂಕರ್ ನಿರ್ಮಿಸಿಕೊಂಡು ದೇಶದ ಸಾವಭೌಮತ್ವಕ್ಕೇ ಪ್ರಶ್ನೆ ಮಾಡಿತ್ತು.

kargil vijay diwas-5
source:The Better India

ದೇಶ ರಕ್ಷಣೆ ವಿಚಾರ ಬಂದಾಗ ಸದಾ ಒಂದು ಹೆಜ್ಜೆ ಮುಂದೆ ಇರುವ ಕರ್ನಾಟಕದ ಹದಿನಾರು ಮಂದಿ ಯೋಧರು ಈ ಯುದ್ಧದಲ್ಲಿ ವೀರಸ್ವರ್ಗವನ್ನು ಅಪ್ಪಿದರು.

ಬೆಳಗಾವಿಯ ದೋಂಡಿಭಾಯ್ ದೇಸಾಯಿ, ಕೊಪ್ಪಳದ ಶಿವಬಸವಯ್ಯ, ಮಡಿಕೇರಿಯ ಎಸ್.ಕೆ.ಮೇದಪ್ಪ, ಕೊಪ್ಪಳದ ಸಿ.ಎಂ.ಮಲ್ಲಯ್ಯ, ಮಡಿಕೇರಿಯ ಪಿ.ಡಿ.ಕಾವೇರಪ್ಪ, ಬೆಳಗಾವಿಯ ಯಶವಂತ ಡಿ.ಕೋಳ್ಕರ್, ಬಾಗಲಕೋಟೆಯ ದಿಲೀಪ್ ಪಿ.ಪೂತರಾಜ್, ಬೆಳಗಾವಿಯ ಭರತ್ ಮಸ್ಕಿ, ಬಸಪ್ಪ ಚೌಗಲೆ, ಬಾಗಲಕೋಟೆಯ ಶಂಕರಪ್ಪ ಕೋಟಿ,

ಬೆಳಗಾವಿಯ ಬಾಹುಬಲಿ ಬರಮಪ್ಪ, ಮಂಡ್ಯದ ಬಿ.ಕೆ.ಸುಧೀರ್, ಬಾಗಲಕೋಟೆಯ ಅಶೋಕ ಭೀಮಪ್ಪ ಜಾದವ್, ಬೆಂಗಳೂರಿನ ಅಜಿತ್ ಭಂಡಾರ್ಕರ್, ಬಿಜಾಪುರದ ದಾವಲ್ಲಾ, ಮಡಿಕೇರಿಯ ಎಚ್.ವಿ.ವೆಂಕಟ ಸೇರಿದಂತೆ ಹದಿನಾರು ಮಂದಿ ಯೋಧರು 16 ಸಾವಿರ ಅಡಿ ಎತ್ತರದ ಶಿಖರವನ್ನು ಕಾಪಾಡಿಕೊಳ್ಳುವುದಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ.

ಶಶಿ ಭೂಷಣ್ ಘಿಲ್ಡಿಯಲ್:
ರವರ ಒಂದು ಕಾಲು ಸಂಪೂರ್ಣವಾಗಿ ಗಾಯಗೊಂಡು ಮುಂದೆ ಹೋಗಲು ಸಾಧ್ಯವಾಗದೆ ಇರುವ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ೫ ಮಂದಿ ಸೈನಿಕರನ್ನು ಕೊಂದಿದ್ದರು.

kargil vijay diwas-1
source:Indiatimes.com

ವಿಕ್ರಮ್ ಬಾತ್ರಾ:
ಗಾಯಗೊಂಡ ಅಧಿಕಾರಿಯನ್ನು ಪಕ್ಕಕ್ಕೆ ತಳ್ಳಿ, “ನಿಮಗೆ ಮಕ್ಕಳು ಮತ್ತು ಹೆಂಡತಿ ಇದರೆ ನೀವು ಪಕ್ಕಕೆ ಸರಿದುಕೊಳ್ಳಿ ಎಂದು ಹೇಳಿ ಶತ್ರುಗಳ ಗುಂಡಿಗೆ ತನ್ನ ಎದೆಯನ್ನು ಕೊಟ್ಟ ವೀರ ಯೋಧ. ಕೇವಲ 24 ವರ್ಷ ವಯಸ್ಸಿನವನಾಗಿದ್ದಾಗ ಮೃತಪಟ್ಟರು.

kargil vijay diwas-2
source:Indiatimes.com

ಕ್ಯಾಪ್ಟನ್ ಅಮೋಲ್ ಕಾಲಿಯಾ:
ಅಮೋಲ್ ಕಾಲಿಯಾ ಮೇಲೆ ಶತ್ರುಗಳು ಗುಂಡಿನ ದಾಳಿ ನೆಡಸಿದಾಗ ನೆಲದ ಮೇಲೆ ಬಿದ್ದ ಕಾಲಿಯಾ ನೆಲದಮೇ ತೆವಳುತ್ತಾ ತನ್ನ ಬಂದೂಕಿನಿಂದ ಶತ್ರುಗಳ ಮೇಲೆ ಗುಂಡು ಹಾರಿಸಿ. ೨೦ ಶತ್ರುಗಳನ್ನು ಜೀವ ತೆಗೆದು ತನ್ನ ಜೀವ ಬಿಟ್ಟ ಅಮೋಲ್ ಕಾಲಿಯಾ.
ಇಂತಹ ವೀರ ಯೋಧರಿಗೆ ನಮ್ಮ ಕಡೆಯಿಂದ ಒಂದು ಸಲಾಂ ಕಣ್ರೀ…

ಇವರನ್ನು ಹೆತ್ತ ಮಾತೆಯರಿಗೆ ಮತ್ತು ಕುಟುಂಬಗಳಿಗೆ ಸಾವಿರ ಸಾವಿರ ಪ್ರಣಾಮಗಳು ಇಂತಹ ಸಾವಿರಾರು ಯೋಧರು ಇಂದಿಗೂ ನಮ್ಮ ರಕ್ಷಣೆಗಾಗಿ ಗಡಿ ಕಾಯುತ್ತಿದ್ದಾರೆ ಅವರಿಗೆ ಗೌರವ ಸಲ್ಲಿಸೋಣ.

kargil vijay diwas-3
source:Honourpoint – Faujipoint