ಗ್ಯಾಸ್ ಟ್ರಬಲ್ ನಿವಾರಿಸುವ ಕರಿಬೇವು ಪುಡಿ

0
8986

ಬೇಕಾಗುವ ಪದಾರ್ಥಗಳು :

ಕರಿಬೇವು ಒಂದು ಬಟ್ಟಲು
ಜೀರಿಗೆ ಅರ್ಧ ಮುಟಿಗೆಯಷ್ಟು
ಮೆಣಸಿನ ಕಾಳು ಏಳೆಂಟು ಹತ್ತು
ರುಚಿಗೆ ಉಪ್ಪು.

ತಯಾರಿಸುವ ವಿಧಾನ:

ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಇಷ್ಟೇ. ಆದರೆ, ಅದು ಆರೋಗ್ಯದ ಮೇಲೆ ಮಾಡುವ ಪರಿಣಾಮ ಮಾತ್ರ ಅಗಾಧ. ಸೋ, ಮೊದಲು ಕರಿಬೇವನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಗರಿಗರಿಯಾದ ನಂತರ ಅದಕ್ಕೆ ಹುರಿದ ಜೀರಿಗೆ ಮತ್ತು ಮೆಣಸಿನ ಕಾಳುಗಳನ್ನು ಉಪ್ಪಿನೊಂದಿಗೆ ಬೆರೆಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಚಟ್ನಿಪುಡಿಗಿಂದ ಸ್ವಲ್ಪ ನುಣ್ಣಗಾಗಿರಲಿ. ಇದೇ ಕರಿಬೇವು ಪುಡಿ.

ಕರಿಬೇವು ಪುಡಿಯನ್ನು ಬಿಸಿಬಿಸಿ ಅನ್ನ ಮತ್ತು ತುಪ್ಪದೊಡನೆ ಸೇರಿಸಿ ಸವಿಯಬಹುದು. ಗ್ಯಾಸ್ ಟ್ರಬಲ್ ನಿಂದ ಬಳಲುತ್ತಿರುವವರು ಜೆಲ್ಯುಸಿಲ್ ಅಥವಾ ಇನ್ನಾವುದೇ ಆಂಟ್ಯಾಸಿಡ್ ಔಷಧಿಯನ್ನು ಸೇವಿಸುವ ಬದಲು ಅನ್ನದ ಜೊತೆ ಕರಿಬೇವು ಪುಡಿಯನ್ನು ತಿನ್ನಬಹುದು. ಇದನ್ನು ಚಟ್ನಿಪುಡಿಯಂತೆ ಕೂಡ ಮೊಸರಿನೊಂದಿಗೆ ಕಲಿಸಿ ಚಪಾತಿ ಜೊತೆ ಮೆಲ್ಲಬಹುದು.