ಕರ್ನಾಟಕಕ್ಕೆ ತಾತ್ಕಾಲಿಕ ಪರಿಹಾರ

0
819

ಕರ್ನಾಟಕಕ್ಕೆ ತಾತ್ಕಾಲಿಕ ಪರಿಹಾರ; ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಸಾಧ್ಯವೆಂದು ಪ್ರಮಾಣಪತ್ರ ಸಲ್ಲಿಸಿದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ.

ಮಂಡಳಿ ರಚಿಸುವಂತೆ ಆದೇಶ ನೀಡುವ ಅಧಿಕಾರ ಸುಪ್ರೀಂ ಕೋರ್ಟ್ಗೆ ಇರುವುದಿಲ್ಲ. ಇದನ್ನು ಸಂಸದ್ ನಲ್ಲಿ ಕಾನೂನು ಮಂಡಿಸುವ ಮೂಲಕ ಮಾತ್ರ ಮಂಡಳಿ ರಚನೆ ಮಾಡಬಹುದು. ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಈ ರೀತಿ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ನಾಳೆ ಮಧ್ಯಾಹ್ನ 2 ಘಂಟೆಗೆ ಅರ್ಜಿ ವಿಚಾರಣೆಗೆ ಬರುತ್ತದೆ.

ಸೆಕ್ಷನ್ 6 A Interstate water disputes act ನ ಅನ್ವಯ ಸಂಸದ್ನಲ್ಲಷ್ಟೇ ಮಂಡಳಿ ನಿರ್ಣಯ ಮಾಡುವ ಅಧಿಕಾರವಿದೆ, ಹೊರತು ಸುಪ್ರೀಂ ಕೋರ್ಟ್ಗಿಲ್ಲ. ಅಷ್ಟೇ ಅಲ್ಲದೆ, ವಾಟರ್ ಮ್ಯಾನೇಜ್ಮೆಂಟ್ ಬೋರ್ಡ್ ನ ಕುರಿತಾಗಿ ಸುಪ್ರೀಂ ಕೋರ್ಟ್ ನಲ್ಲಿ 3 ಅರ್ಜಿಗಳು ಇತ್ಯರ್ಥವಾಗಬೇಕಾಗಿದೆ; ಈಗ ದ್ವಿಸದಸ್ಯ ಪೀಠ ಮತ್ತೊಮ್ಮೆ ಆದೇಶ ನೀಡುವುದು ಎಷ್ಟು ಸರಿ ಎಂದು ಅಟಾರ್ನಿ ಜನರಲ್ ಲಲಿತ್ ಮತ್ತು ಮಿಶ್ರ ರವರ ಪೀಠಕ್ಕೆ ಗಮನಕ್ಕೆ ತಂದಿದ್ದಾರೆ.

ಕೊನೆಗೂ ಸ್ಪಂದಿಸಿದ ಕೇಂದ್ರ ಸರ್ಕಾರ

ಕಾವೇರಿ ವಿಷಯದಲ್ಲಿ ಪ್ರಧಾನಿ ಮಧ್ಯಸ್ಥಿಕೆಯನ್ನು ವಹಿಸಬೇಕೆಂದು ಮಾಜಿ ಪ್ರಧಾನಿ ಮತ್ತು ಸಂಸದರಾದ ದೇವೆ ಗೌಡರು, ಮಾಜಿ ಮುಖ್ಯ ಮಂತ್ರಿಗಳಾದ ಸದಾನಂದ ಗೌಡರು, ಕೇಂದ್ರ ಸಚಿವರಾದ ಅನಂತ ಕುಮಾರ್ ರವರ ನಿರಂತರ ಒತ್ತಡ ಈಗ ಫಲಿಸಿದೆ. ಕಾವೇರಿ ನಿರ್ವಹಣಾ ಮಂಡಳಿ [Kaveri Water Management Board] ರಚಿಸಲು ಆದೇಶ ನೀಡಲು ಸುಪ್ರೀಂ ಕೋರ್ಟ್ ಗೆ ಅಧಿಕಾರವಿಲ್ಲವೆಂದು ಮಾರ್ಪಾಡು ಅರ್ಜಿ ಸಲ್ಲಿಸುವ ಮೂಲಕ ಕೇಂದ್ರ ಸರ್ಕಾರ, ಕರ್ನಾಟಕ ರಾಜ್ಯದ ಹಿತಾಸಕ್ತಿಗಳನ್ನು ಕಾಯುವುದೆಂಬ ಅಭಯ ನೀಡಿದೆ.