ವಿದೇಶಿಯರು ಕಂಡಂತೆ ಕರ್ನಾಟಕ

0
679

ಹಲವಾರು ವಿದೇಶಿ ಪ್ರವಾಸಿಗರು, ವಿದ್ವಾಂಸರ ಬರವಣಿಗೆಗಳಲ್ಲಿ ಕರ್ನಾಟಕದ ಕುರಿತಾದ ಉಲ್ಲೇಖಗಳು ಸಿಗುತ್ತದೆ. ಅವುಗಳ ಕುರಿತು ಸಂಕ್ಷಿಪ್ತ ನೋಟ ಇಲ್ಲಿದೆ. ಭಾರತಕ್ಕೆ ಭೇಟಿ ನೀಡಿದ ಹಲವು ವಿದೇಶಿ ವಿದ್ವಾಂಸರು, ವರ್ತಕರು, ರಾಯಭಾರಿಗಳು ಕರ್ನಾಟಕದ ಕುರಿತು ತಮ್ಮ ಗ್ರಂಥ/ಬರಹಗಳಲ್ಲಿ ಉಲ್ಲೇಖಿಸಿದ್ದಾರೆ.

ಭೂಗೋಳ ವಿಜ್ಞಾನದಲ್ಲಿ ಟಾಲೆಮಿ ಬಹುದೊಡ್ಡ ಹೆಸರು. ಈತ ಕ್ರಿ.ಶ. 130ರ ಸುಮಾರಿಗೆ ಕರ್ನಾಟಕದ ಬನವಾಸಿ, ಬಾದಮಿ, ಪಟ್ಟದಕಲ್ಲು ಮತ್ತು ಪುನ್ನಾಟಗಳ ಕುರಿತು ತನ್ನ ‘ಜಿಯೊಗ್ರಫಿಕಲ್ ಔಟ್ ಲೈನ್’ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಗ್ರೀಸ್ ದೇಶಕ್ಕೆ ಸೇರಿದ ಇನ್ನೊಂದು ಅನಾಮದೇಯಾ ಕೃತಿ ‘ದಿ ಪೆರಿಪ್ಲಸ್ ದಿ ಎರಿತ್ರಿಯನ್ ಸೀ’ದಕ್ಷಿಣ ಭಾರತದ ತೀರಪ್ರದೇಶ ಮತ್ತು ವಿದೇಶಗಳೊಡನೆ ಕರ್ನಾಟಕ ಜನರು ಹೊಂದಿದ್ದ ವ್ಯಾಪಾರ ಸಂಪರ್ಕದ ಕುರಿತು ಹೇಳುತ್ತದೆ, ‘ದಕ್ಷಿಣ ಭಾರತ, ಗ್ರೀಸ್, ಈಜಿಪ್ಟ್ ಮತ್ತು ರೋಮನ್ ದೇಶಗಳೊಡನೆ ಕರ್ನಾಟಕ ಉತ್ತರ ವ್ಯಾಪಾರ ಸಂಬಂಧ ಹೊಂದಿತ್ತು. ಇದರಿಂದ ರೋಮನ್ನರ ಜ್ಞಾನ ಭಂಡಾರ ವೃದ್ಧಿಸಿತು’ ಎಂದು ಗ್ರೀಕ್ ನ ತತ್ತ್ವ ಜ್ಞಾನಿ, ಇತಿಹಾಸತಜ್ಞ ಸ್ಟ್ರಾಬೋ ಕೂಡ ಹೇಳುತ್ತಾನೆ. ಇದಕ್ಕೆ ಬೆಂಗಳೂರಿನ ಬಳಿ ಈ ಹಿಂದೆ ದೊರೆತ ರೋಮನ್ ನಾಣ್ಯಗಳೇ ಸಾಕ್ಷಿಯಾಗಿವೆ.

ಚೀನೀ ಕೊಡುಗೆ: ಚೀನಾ ಮತ್ತು ಭಾರತದ ನಡುವೆ ಬಹುಹಿಂದಿನಿಂದಲೂ ಸಂಪರ್ಕವಿತ್ತು. ದಕ್ಷಿಣ ಭಾರತದ ಅದರಲ್ಲಿಯೂ ಕರ್ನಾಟಕದ ಶ್ರೀಗಂಧಕ್ಕೆ ಚೀನಾದಲ್ಲಿ ಅಧಿಕ ಬೇಡಿಕೆ. ಬೌದ್ಧ ಧರ್ಮ ಪ್ರಸಾರಕ್ಕೆಂದು ಚೀನೀ ಗ್ರಂಥಗಳನ್ನು ತರ್ಜುಮೆ ಮಾಡಿದ್ದಾರೆ.

ಯುರೋಪ್ ಕೊಡುಗೆ: ಭಾರತಕ್ಕೆ ಭೇಟಿ ನೀಡಿದ ಯುರೋಪ್ ಪ್ರವಾಸಿಗರಲ್ಲಿ ಮೊದಲಿಗ ವೆನಿಸ್ ನ ಮಾರ್ಕೋ ಪೋಲೋ. ಈತನನ್ನು ‘ಮಧ್ಯಕಾಲೀನ ಪ್ರವಾಸಿಗಳ ರಾಜಕೂಮಾರ’ ಎಂದು ಕರೆಯಲಾಗುತ್ತದೆ. ಚೀನಾದೇಶದ ಪ್ರವಾಸ ಮುಗಿಸಿ ವಾಪಸ್ ಸ್ವದೇಶಕ್ಕೆ ಮರಳುವಾಗ ದಕ್ಷಿಣ ಭಾರಕ್ಕೂ ಭೇಟಿ ನೀಡಿದ. ದಕ್ಷಿಣ ಭಾರತೀಯರು ಸಮುದ್ರಯಾನದಲ್ಲಿ ಬಹಳ ಆಸಕ್ತರು ಎಂದು ಆತ ತನ್ನ ಬರಹಗಳಲ್ಲಿ ಹೇಳಿದ್ದಾನೆಂದು ಇತಿಹಾಸತಜ್ಞರು ಹೇಳುತ್ತಾರೆ. ದಖನ್ ಮತ್ತು ಪಶ್ಚಿಮ ಕರಾವಳಿಯನ್ನು ಸುತ್ತಿದವರಲ್ಲಿ ಪ್ರಮುಖರಾದ ಸಂತ ಥಾಮಸ್, ಸಂತ ಒಡೋರಿಕ್, ಸಂತ ಜೋಡರ್ಡೋ ಪ್ರಮುಖರು.

ವಿಜಯನಗರ ಇತಿಹಾಸ ತಿಳಿಸಲು ವಿದೇಶಿ ಪ್ರವಾಸಿಗರ ಕಥನಗಲು ತುಂಬಾ ಉಪಯುಕ್ತವಾಗಿವೆ, ಬಹುತೇಕರು ವಿಜಯನಗರವನ್ನು ವರ್ಣಿಸಿದ್ದಾರೆ, ಕೊಂಡಾಡಿದ್ದಾರೆ, ಅವರಲ್ಲಿ ವೆನಿಸ್ ನ ನಿಕೊಲೊಕೊಂಟಿ (ಕ್ರಿ.ಶ.1420), ಪರ್ಶಿಯಾದ ರಾಯಭಾರಿ ಅಬ್ದುಲ್ ರಜಾಕ್ (ಕ್ರಿ.ಶ.1422), ಪೊರ್ಚುಗಲ್ನ ಡುವಟ್ ಬರ್ಬೋಸ, ಡೊಮಿಂಗೋ ಪೇಸ್, ಇಟಲಿಯ ಪೀಟರ್ ಡೊಲ್ಲವೆಲ್ಲಾ ಪ್ರಮುಖರು. ಕ್ರಿ.ಶ.1470ರಲ್ಲಿ ದಖನ್ ಗೆ ಭೇಟಿ ನೀಡಿದ ರಷ್ಯಾ ವ್ಯಾಪಾರಿ ಅಥನೇಸಸ್ ನ ಬರವಣಿಗೆಯಿಂದ ಬಹುಮನಿ ಸುಲ್ತಾನರ ಆಡಳಿತ ವೈಕರಿಯನ್ನು ತಿಳಿಯಬಹುದು.

*ಚೀನೀ ಯಾತ್ರಿಕ ಹ್ಯೂಯನ್ ತ್ಸಾಂಗ್ ಹರ್ಷವರ್ಧನನ ಆಸ್ಥಾನದಲ್ಲಿ ಉಳಿದಿದ್ದ ಭಾರತಕ್ಕೆ ಭೇಟಿ ನೀಡಿದ ಯುರೋಪ್ ನ ಮೊದಲ ಪ್ರವಾಸಿಗ ವೆನಿಸ್ ನ ಮಾರ್ಕೋ ಪೋಲೋ

*’ಸಿ-ಯು-ಕಿ ಗ್ರಂಥದಲ್ಲಿದೆ.