ಮನೆಯವರು ಇವರಿಬ್ಬರ ಪ್ರೇಮ ವಿವಾಹಕ್ಕೆ ಒಪ್ಪದಿದ್ದಾಗ ಈ ಪ್ರೇಮಿಗಳು ರಾಜ್ಯಪಾಲರ ಬಳಿಯೇ ಹೋಗಿ ಪ್ರೀತಿ ಹೇಗೆ ಗೆದ್ದುಕೊಂಡರು ಗೊತ್ತೇ?

0
557

ಪ್ರೀತಿ ಮಾಡಿ ಮದುವೆಯಾಗುವುದು ಹೊಸದೇನಲ್ಲ, ಒಂದು ಹುಡುಗಿ ಪರಿಚಯ ಇಲ್ಲದ ಬೇರೆ ಜಾತಿಯ ಹುಡುಗನನ್ನು ಮದುವೆಯಾಗುತ್ತಾಳೆ ಎಂದರೆ ಸಾಮಾನ್ಯವಾಗಿ ಎರಡು ಕುಟುಂಬದಲ್ಲಿ ಜಗಳ, ಪೋಲಿಸ್ ಕೇಸ್ ಅಂತ ಜಟಾಪಟಿಗಳು ಇರುವುದು ಗೊತ್ತೆ ಇದೆ. ಅದರಲ್ಲಿ ಹುಡುಗಿಯ ಮನೆಯವರು ಸ್ವಲ್ಪ ಜಾಸ್ತಿನೆ ತಕರಾರು ಮಾಡಿ ಮದುವೆಯ ಕೊನೆಯವರೆಗೂ ಹೋರಾಡಿ ತಮ್ಮ ಮಗಳು ಮಾತು ಕೆಳಲಿದ್ದಾಗ ನಮ್ಮ ಮಗಳು ಸತ್ತುಹೋದಳು ಅಂತ ತಿಥಿ ಊಟ ಮಾಡಿ. ಸ್ವಲ್ಪ ದಿನಗಳ ಮೇಲೆ ಎರಡು ಕುಟುಂಬಗಳು ಒಂದಾಗಿರುವ ಘಟನೆಗಳು ತುಂಬಾನೇ ಇವೆ. ಮತ್ತು ಅದೇ ದ್ವೇಷದಿಂದ ಹತ್ತಾರು ವರ್ಷಗಳ ನಂತರ ಪ್ರೇಮಿಗಳ ಅಂದರ್ ಮಾಡಿರುವ ಪ್ರಕರಣಗಳು ಕೂಡ ತುಂಬಾನೇ ಇವೆ.

Also read: ಅಮೇಜಾನ್‌-ನಲ್ಲಿ ಮಾರಾಟವಾಗುತ್ತಿದೆ ಶುದ್ಧ ಗಾಳಿ; ಇದು ಮಾನವ ಕುಲಕ್ಕೆ ಅವಮಾನದ ಸಂಗತಿ…

ಇದೆಲ್ಲ ಯಾಕೆ ನೆನಪಿಸುತ್ತಿರುವುದು ಯಾಕೆ ಅಂದ್ರೆ ಇಲ್ಲೊಂದು ಪ್ರೇಮ ವಿವಾಹ ನಡೆದೀದೆ ಅದು ಸಿನಿಮಯ ಕಥೆಯನ್ನು ಮೀರಿಸುವ ರೀತಿಯಲ್ಲಿ ನಡೆದಿದೆ. ಇದು ನಡೆದಿರುವುದು ಬೇರೆಲ್ಲೂ ಅಲ್ಲ ಕೊಪ್ಪಳ ಜಿಲ್ಲೆಯಲ್ಲಿ. ಈ ಮದುವೆ ಎರಡು ರಾಜ್ಯಗಳ ಪೊಲೀಸ್- ರ ಸಮ್ಮುಖದಲ್ಲಿ ಸಂಪ್ರದಾಯ ಬದ್ದವಾಗಿ ಅದ್ದೂರಿಯಾಗಿ ಹಸೆಮಣೆ ಏರಿ ಪ್ರೇಮಿಗಳಿಬ್ಬರು ಒಂದಾಗಿದ್ದಾರೆ.

ಏನಿದು ಪ್ರಕರಣ?

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನಿರಂಜನಿ ಮತ್ತು, ಹೈದ್ರಾಬಾದ್ ಮೂಲದ ವೆಂಕಟ್ ಭಾರ್ಗವ್ ಎಂಬ ಇಬ್ಬರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈವೇಳೆ ಇಬ್ಬರ ನಡುವೆ ಪ್ರೀತಿ ಶುರುವಾಗಿ ಎಂಟು ವರುಷಗಳೇ ಕಳೆದಿವೆ, ಇನ್ನೇನು ಈ ಜೋಡಿಯು ಮದುವೆಯಾಗಬೇಕು ಎನ್ನುವಷ್ಟರಲ್ಲಿಯೇ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ನಂತರ ಭಾರ್ಗವ್ ತಮ್ಮ ಮನೆಯವರ ಬಳಿ ಆಕೆಯ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾನೆ. ಆದರೆ, ಕುಟುಂಬಸ್ಥರು ಇದಕ್ಕೆ ಒಪ್ಪದಿದ್ದಾಗ ನಿರಂಜನಾ ಹಾಗೂ ವೆಂಕಟ್ ಭಾರ್ಗವ್ ನಮಗೆ ರಕ್ಷಣೆ ಬೇಕೆಂದು ತೆಲಂಗಾಣ ಹಾಗೂ ಕರ್ನಾಟಕದ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಹೀಗೆ ಮನೆಯವರನ್ನು ಒಪ್ಪಿಸಲು ಏನೆಲ್ಲಾ ಹರಸಾಹಸ ಮಾಡಿದರು ಒಪ್ಪದ ಪ್ರೇಮಿಗಳು ರಾಜ್ಯಪಾಲರ ಮೊರೆ ಹೋಗಿದ್ದರು.

Also read: ಸರ್ಕಾರ ಮಾಡಿರುವ ರೈತರ ಸಾಲ ಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯೋ ಇಲ್ಲವೋ ಎಂದು ಪರೀಕ್ಷಿಸಿಕೊಳ್ಳುವುದು ಹೇಗೆ ಅಂತ ಹೇಳ್ತೀವಿ ಓದಿ…

ಈ ಹಿನ್ನೆಯಲ್ಲಿ ಪ್ರೇಮಿಗಳಿಬ್ಬರು ಮಹಿಳಾ ಸಂಘಟನೆಯೊಂದರ ಮೊರೆ ಹೋದರು. ಮಹಿಳಾ ಸಂಘಟನೆಯವರು ಪ್ರೇಮಿಗಳ ಮದುವೆ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದರು. ಎರಡು ರಾಜ್ಯಗಳ ನಡುವಿನ ಗಂಭೀರ ಪ್ರಕರಣವಾದ ಕಾರಣ ತೆಲಂಗಾಣ ಮಹಿಳಾ ಆಯೋಗ ಪತ್ರವನ್ನು ಅಲ್ಲಿನ ರಾಜ್ಯದ ರಾಜ್ಯಪಾಲರಿಗೆ ರವಾನೆ ಮಾಡಿದೆ. ಇದನ್ನು ನೋಡಿದ ತೆಲಂಗಾಣ ರಾಜ್ಯಪಾಲ ನರಸಿಂಹನ್ ಅವರು, ರಾಜ್ಯದ ಪೊಲೀಸ್ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಕೊಪ್ಪಳ ಎಸ್ಪಿ ಅವರನ್ನು ಕೇಳಿದರೆ, ನಮಗೆ ಇದುವರೆಗೂ ಯಾವುದೇ ಪತ್ರ ತಲುಪಿಲ್ಲ. ನಾವು ಎಲ್ಲಾ ಪ್ರಕರಣಗಳಂತೆಯೇ ಪ್ರೇಮಿಗಳಿಗೆ ಅಡ್ಡಿಯಾಗಬಾರದೆಂದು ಪೊಲೀಸ್ ಬಂದೋಬಸ್ತ್ ನೀಡಿದ್ದೇವೆ ಎನ್ನುತ್ತಾರೆ ಸ್ಥಳೀಯ ಎಸ್​ಪಿ ರೇಣುಕಾ ಸುಕುಮಾರ್ ಅವರು.

ಬಳಿಕ ಗಂಗಾವತಿ ಪೊಲೀಸರೇ ತಮ್ಮ ಸಮ್ಮುಖದಲ್ಲಿ ನವಜೋಡಿಗೆ ತೆಲಂಗಾಣ ರಾಜ್ಯಪಾಲರ ಸೂಚನೆಯಂತೆ ಪೊಲೀಸ್ ಭದ್ರತೆಯಲ್ಲಿ ಮದುವೆ ನಡೆದಿದೆ ಎನ್ನಲಾಗಿದೆ. ಪೊಲೀಸರ ಸಮ್ಮುಖದಲ್ಲಿಯೇ ಮದುವೆಯಾಗುತ್ತಿರುವ ಪ್ರೇಮಿಗಳು. ನಮ್ಮ ಪ್ರೀತಿಗೆ ಜಯಸಿಕ್ಕಿದೆ ಎಂದ ನವಜೋಡಿಗಳು ನಗುನಗುತ್ತಾ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಏನೇ ಆಗಲಿ ಎಂಟು ವರ್ಷದ ಪ್ರೀತಿಗೆ ಎರಡು ಸರ್ಕಾರದ ಆಶೀರ್ವಾದವೆ ಸಾಕ್ಷಿಯಾಗಿದೆ.