ಮುಗಿಯಿತು ಉಪಚುನಾವಣೆಯ ಮತದಾನ; ಯಾವ ಕ್ಷೇತದಲ್ಲಿ ಎಷ್ಟೊಂದು ಹಣ ಹಂಚಿಕೆ? ಯಾವ ಕ್ಷೇತ್ರದಲ್ಲಿ ಎಷ್ಟೊಂದು ಮತದಾನ??

0
135

ರಾಜ್ಯದ ಉಪಚುನಾವಣೆಯ ಮತದಾನ ಮುಗಿದಿದ್ದು. ಹಲವು ಕ್ಷೇತ್ರದಲ್ಲಿ ಬಹಿರಂಗವಾಗಿಯೇ ಹಣ, ಉಡುಗೊರೆ ನೀಡಿದ ಬಗ್ಗೆ ಮಾಹಿತಿ ಬಂದಿದೆ. ಅದರಂತೆ ಬಿ.ಸಿ ಪಾಟೀಲ್ ಅವರ ಕ್ಷೇತ್ರ ಹಿರೇಕೆರೂರು-ನಲ್ಲಿ ಬಹಿರಂಗವಾಗಿ ಓಟಿಗೆ 500 ರೂ. ಹಂಚಿದ ಬಗ್ಗೆ ಮಾಹಿತಿ ಇದ್ದು, ಅದರಂತೆ ಹಳೇ ಮೈಸೂರಿನಲ್ಲಿ ಮೂರೂ ರಾಜಕೀಯ ಪಕ್ಷಗಳು ಭರ್ಜರಿ ಗಿಫ್ಟ್ ಗಳನ್ನು ನೀಡಿದ್ದು, ಮತದಾರರ ಒಲಿಸಿಕೊಳ್ಳಲು ಶತಾಯಗತಾಯ ಯತ್ನಗಳನ್ನು ಮಾಡಿವೆ. ಕೆ.ಆರ್.ಪೇಟೆ ಹಾಗೂ ಹುಣಸೂರು ಕ್ಷೇತ್ರಗಳಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಯತ್ನಗಳನ್ನು ಮಾಡಿದ್ದು, ಮತದಾರರಿಗೆ ರೂ.5,000 ಗಿಫ್ಟ್ ಕೂಪನ್ ಗಳನ್ನು ನೀಡಿವೆ.

ಗಿಫ್ಟ್ ಕೂಪನ್ ಪಡೆದ ಜನರು ಆಯ್ದ ಅಂಗಡಿಗಳಿಗೆ ಹೋಗಿ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಬಹುದಾಗಿದೆ. ಇದರಂತೆ ಮತ್ತೊಂದು ಪಕ್ಷ ಒಂದು ಮತಕ್ಕೆ ರೂ.300 ನೀಡಿದೆ. ಇನ್ನು ಕೆಲ ಗ್ರಾಮಗಳಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಸೀರೆಗಳನ್ನು ನೀಡಲಾಗಿದೆ. ಇನ್ನು ಕೆಲವೆಡೆ ಉದ್ಯೋಗಕ್ಕೆ ತೆರಳುವವರಿಗೆ ರೂ.200 ಬೋನಸ್ ನಂತೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ. ಉಪ ಚುನಾವಣೆ ಹತ್ತಿರ ಬರುತ್ತಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕೂಡ ಮತದಾರರನ್ನು ಸೆಳೆಯುವ ಸಲುವಾಗಿ ಕೆ.ಆರ್.ಪೇಟೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಘೋಷಣೆ ಮಾಡಿದ್ದರು.

ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮತದಾರರನ್ನು ಸೆಳೆಯಲು ಘೋಷಣೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೆ ವಿದ್ಯುನ್ಮಾನ ಮತಯಂತ್ರದ ಮೇಲೆ ಡಿಸಿಎಂ ಲಕ್ಷ್ಮಣ ಸವದಿ ಚಿತ್ರವಿಟ್ಟು ಮತಚಲಾಯಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಯಾರೋ ಅಭಿಮಾನಿಯೊಬ್ಬ ಡಿಸಿಎಂ ಲಕ್ಷ್ಮಣ ಸವದಿ ಅವರ ಚಿತ್ರವೊಂದನ್ನು ಮತಯಂತ್ರದ ಮೇಲೆ ಇಟ್ಟು ಬಿಜೆಪಿ ಗೆ ಮತ ಹಾಕಿದ್ದಾನೆ. ಅದನ್ನು ಮೊಬೈಲ್‌ ನಲ್ಲಿ ರೆಕಾರ್ಡ್ ಸಹ ಮಾಡಿಕೊಂಡಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಲಕ್ಷ್ಮಣ ಸವದಿ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಿಲ್ಲ. ಅವರ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ ನಿಂದ ಪಕ್ಷಾಂತರ ಮಾಡಿರುವ ಮಹೇಶ್ ಕುಮಟಳ್ಳಿ ಸ್ಪರ್ಧಿಸಿದ್ದಾರೆ. ಇದರ ಬಗ್ಗೆ ಕೆಲವರು ಮರೆತಿರುತ್ತಾರೆ ಎನ್ನುವು ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ತಿಳಿದಿದೆ. ಇನ್ನೂ ಕೆಲವು ಕಡೆ ಮತ ನೀಡುವ ಫೋಟೋ, ವೀಡಿಯೋ ಕೂಡ ಮಾಡಿ ಫೇಸ್ಬುಕ್-ನಲ್ಲಿ ಹರಿಬಿಟ್ಟಿದ್ದಾರೆ.

ಎಲಲ್ಲಿ ಎಷ್ಟೆಷ್ಟು ಮತದಾನ?

ಸಂಜೆ 5 ಗಂಟೆ ವೇಳೆಯವರೆಗೆ ನಡೆದ ಮತದಾನ: ಹಿರೇಕೆರೂರು ಶೇ 67.92%, ರಾಣೇಬೆನ್ನೂರು ಶೇ 67.92, ಅಥಣಿ 70.73%, ಹುಣಸೂರು 74.47%,ಯಶವಂತಪುರ 48.34%, ಹೊಸಕೋಟೆ 76.19% ,ಕೆ.ಆರ್‌ .ಪುರಂ 37.50 ರಷ್ಟು ಮತದಾನ ನಡೆದಿರೆ 05:46 ವೇಳೆಯವರೆಗೆ ಯಲ್ಲಾಪುರ 72.23 %,ವಿಜಯನಗರ 58.93%,ಮಹಾಲಕ್ಷ್ಮೀ ಲೇಜೌಟ್‌ 40.09%,ಶಿವಾಜಿನಗರ 41.92% ರಷ್ಟು ಮತದಾನ ನಡೆದಿದೆ. ಇದೆಲ್ಲದರ ಪಲಿತಾಂಶ ಡಿ. 9ರಂದು ಹೊರಬೀಳಲಿದೆ. ಅಂದು ಹಾಲಿ ಬಿಜೆಪಿ ಸರ್ಕಾರದ ಅಳಿವು ಉಳಿವಿನ ಬಗ್ಗೆ ತಿಳಿಯಲಿದೆ.