ಅಧಿಕಾರಕ್ಕೆ ಬಂದು ಒಂದೇ ತಿಂಗಳಲ್ಲಿ ಕರ್ನಾಟಕದ ಜಾನುವಾರು ಹತ್ಯಾ ನಿಷೇಧ ಮಸೂದೆಯ ಬಗ್ಗೆ ದ್ವನಿ ಎತ್ತಿದ ಬಿಜಿಪಿ ಸರ್ಕಾರ; 2010 ರ ಮಸೂದೆಯನ್ನು ಜಾರಿಗೆ ತರುತ್ತ?

0
218

ದೇಶದಲ್ಲಿ ಗೋ ಹತ್ಯೆಗೆ ಭಾರಿ ವಿರೋಧ ಕೇಳಿ ಬರುತ್ತಿದೆ. ಸಂಪೂರ್ಣವಾಗಿ ಗೂ ಹತ್ಯ ನಿಷೇಧಿಸಬೇಕು ಎನ್ನುವುದು ಎಲ್ಲರ ಅಭಿಪ್ರಾಯವಾಗಿದ್ದು, ಕರ್ನಾಟಕದಲ್ಲಿವೂ ಇದರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಕರ್ನಾಟಕದ ಜಾನುವಾರು ಹತ್ಯಾ ನಿಷೇಧ ಮಸೂದೆಯ ಬಗ್ಗೆ ಮರು ಚರ್ಚೆಯಾಗಿ ಅರ್ಜಿಯನ್ನು ವಿಚಾರಣೆ ಮಾಡಬೇಕು, ಎಂದು ಕರ್ನಾಟಕ ಪ್ರವಾಸೋದ್ಯಮ ಸಚಿವ ಟಿ.ಎನ್.ಎಂ ಜೊತೆಗೆ ಮಾತುಕತೆ ನಡೆಸಿದ ಸಿ.ಟಿ.ರವಿ, ಹಸು ಸಂರಕ್ಷಣಾ ಮಸೂದೆಯ ಅರ್ಜಿಯನ್ನು ನಾವು ಚರ್ಚಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Also read: ಮತ್ತೆ ಸರ್ಕಾರಿ ಸ್ವಾಮ್ಯದ 10 ಪ್ರಮುಖ ಬ್ಯಾಂಕುಗಳ ವಿಲೀನ ಮಾಡಿದ ಕೇಂದ್ರ ಸರ್ಕಾರ, ಗ್ರಾಹಕರ ಮೇಲಾಗುವ ಪರಿಣಾಮಗಳೇನು?

ಹೌದು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಒಂದು ತಿಂಗಳು ಕೂಡ ಆಗಿಲ್ಲ, ಇದರಲ್ಲೇ ಗೋಮಾಂಸ ಮಾರಾಟ ಮತ್ತು ಕರ್ನಾಟಕದ ಜಾನುವಾರು ಹತ್ಯಾ ನಿಷೇಧ ಮಸೂದೆ ಅರ್ಜಿಯ ಬಗ್ಗೆ ತಲೆಕೆಡಸಿಕೊಂಡಿದ್ದು, ಹಸು ಸಂರಕ್ಷಣಾ ಸಂಘಟನೆ ಹಸು ಹತ್ಯೆಯನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರಿಗೆ ಮನವಿ ಸಲ್ಲಿಸಿದೆ. ಬಿಜೆಪಿ ಸರ್ಕಾರ 2010 ರಲ್ಲೇ ಗೋಮಾಂಸವನ್ನು ನಿಷೇಧಿಸಲು ಪ್ರಯತ್ನಿಸಿದರೂ ಆಗಿನ ರಾಜ್ಯಪಾಲರು ಈ ಮಸೂದೆಯನ್ನು ತಿರಸ್ಕರಿಸಿದ್ದರು, ಆದರೆ ಈಗ ಬಿಜೆಪಿ ಸರ್ಕಾರ ಇರುವುದರಿಂದ ನಮ್ಮ ಮನವಿಯನ್ನು ಜಾರಿಗೆ ತರಬೇಕು ಎಂದು ಹಸು-ಸಂರಕ್ಷಣಾ ಸಂಘಟನೆಯ ಮುಖ್ಯಸ್ಥ ಸಿದ್ಧಾರ್ಥ್ ಗೋಯೆಂಕಾ ಯಡಿಯೂರಪ್ಪ ಅವರನ್ನು ಕೋರಿದ್ದಾರೆ, ಎಂದು ಹೇಳಲಾಗುತ್ತಿದೆ.

ಅದರಂತೆ ಟಿಎನ್‌ಎಂ ಜೊತೆ ಮಾತನಾಡಿದ ಸಿದ್ಧಾರ್ಥ್ ಗೋಯೆಂಕಾ ಅವರು 2010 ರ ಮಸೂದೆಯನ್ನು ರಾಜಕೀಯ ಕಾರಣಗಳಿಂದ ಜಾರಿಗೆ ತರಲು ಸಾಧ್ಯವಿಲ್ಲ, “ಈಗ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, 2010 ರ ಶಾಸನವನ್ನು ಇನ್ನಷ್ಟು ಬಲಪಡಿಸಬೇಕು. ಏಕೆಂದರೆ 2010 ರಲ್ಲಿ ಬಿಜೆಪಿ ಸರ್ಕಾರ ಕರ್ನಾಟಕ ಹಸು ಸಂರಕ್ಷಣಾ ಮಸೂದೆಯನ್ನು ಮಂಡಿಸಿತ್ತು. ವಿಧಾನಸಭೆಯಲ್ಲಿ ಇದರ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ನಂತರ, ಆಗಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಶಾಸನವನ್ನು “ಕಠಿಣ”, “ಅಸಂವಿಧಾನಿಕ” ಮತ್ತು “ಜಾತ್ಯತೀತತೆಗೆ ವಿರುದ್ಧ” ಎಂದು ಮಸೂದೆಯ ನಕಲನ್ನು ಹರಿದು ಅಸೆಂಬ್ಲಿಯಲ್ಲಿ ಎಸೆದಿದ್ದರು. ಅದನ್ನು ಅಂಗೀಕರಿಸಲ್ಪಟ್ಟ ನಂತರ ಆಗಿನ ಕರ್ನಾಟಕದ ರಾಜ್ಯಪಾಲರಾದ ಎಚ್.ಆರ್.ಭಾರದ್ವಾಜ್ ಅವರು ತಮ್ಮ ಒಪ್ಪಿಗೆಯನ್ನು ನೀಡಲಿಲ್ಲ ಆದ್ದರಿಂದ ಮಸೂದೆ ಕಾಯಿದೆಯಾಗಲಿಲ್ಲ. ಅದರಿಂದ ಈ ಸಲವಾದರೂ ಸರ್ಕಾರ ಈ ಜ್ಞಾಪಕ ಪತ್ರವನ್ನು ಪರಿಗಣಿಸಬೇಕು ಮತ್ತು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಮಸೂದೆಯನ್ನು ಪರಿಚಯಿಸಬೇಕು ಎಂದು ಹೇಳಿದ್ದಾರೆ.

Also read: ತಂಬಾಕು ಗುಟ್ಕಾ ಪ್ರಿಯರಿಗೆ ಬಿಗ್ ಶಾಕ್; ಮೆಗ್ನೀಸಿಯಮ್ ಕಾರ್ಬೋನೇಟ್ ಇರುವ 12 ಬಗೆಯ ಗುಟ್ಕಾ ಬ್ಯಾನ್.!

ಮಸೂದೆಯಲ್ಲಿ ಏನಿದೆ?

ಕರ್ನಾಟಕದ ಜಾನುವಾರು ಹತ್ಯಾ ನಿಷೇಧ ಮಸೂದೆಯಲ್ಲಿ ಜಾನುವಾರು ಹತ್ಯೆ, ಮಾರಾಟ, ಬಳಕೆ ಮತ್ತು ಗೋಮಾಂಸವನ್ನು ಸ್ವಾಧೀನಪಡಿಸಿಕೊಳ್ಳುವುದು, ದನಕರುಗಳ ಸಾಗಣೆಯನ್ನು ನಿರ್ಬಂಧಿಸಲಾಗಿದೆ ಮತ್ತು ಹತ್ಯ ಮಾಡಲು ದನಗಳನ್ನು ಮಾರಾಟ ಮಾಡುವುದು, ಖರೀದಿಸುವುದು ಅಥವಾ ವಿಲೇವಾರಿ ಮಾಡುವುದನ್ನು ನಿಷೇಧಿಸಲಾಗಿದೆ. ಈ ಅಪರಾಧದಲ್ಲಿ ಸಿಕ್ಕವರಿಗೆ ಒಂದು ವರ್ಷಕ್ಕಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆ , ಮತ್ತು ಏಳು ವರ್ಷಗಳವರೆಗೆ ವಿಸ್ತರಿಸಬಹುದು. ಅಷ್ಟೇ ಅಲ್ಲದೆ 25 ಸಾವಿರದಿಂದ 50,000 ರೂ.ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು. ಎರಡನೇ ಅಪರಾಧಕ್ಕೆ 50,000 ರೂ.ಗಿಂತ ಕಡಿಮೆಯಿಲ್ಲದ ದಂಡ ಅಥವಾ ಒಂದು ಲಕ್ಷ ರೂ.ವರೆಗೆ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸುತ್ತದೆ.