ಸಂಭಾವ್ಯ ಸಚಿವರ ಪಟ್ಟಿಯನ್ನು ಅಮಿತ್‌ ಶಾ ಅವರಿಗೆ ಸಲ್ಲಿಸಿದ ಯಡಿಯೂರಪ್ಪ; ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರಿಗೂ ಸಚಿವ ಸ್ಥಾನ?

0
156

ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರಿಗೆ ಮಂತ್ರಿ ಸ್ಥಾನ ಕೊಡುವುದು ಬಿಜೆಪಿ ಗೆ ಅನಿವಾರ್ಯವಾಗಿದ್ದು, ಒಂದು ವೇಳೆ ಸಚಿವ ಸ್ಥಾನ ಕೊಟ್ಟರೆ ಬಿಜೆಪಿ ಮೂಲ ಶಾಸಕರಲ್ಲಿ ಭಿನ್ನಮತ ಮೂಡುವ ಅನುಮಾನಗಳು ಕಂಡು ಬರುತ್ತಿದೆ. ಅದಕ್ಕಾಗಿ ಸಿಎಂ ಯಡಿಯೂರಪ್ಪನವರು ಒಂದು ಸಂಧಾನ ಸೂತ್ರ ರೆಡಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಧಾನ ಸೂತ್ರದ ಮೇಲೆ ಸಂಪುಟ ವಿಸ್ತರಣೆ ಆಗುತ್ತೆ ಎನ್ನಲಾಗುತ್ತಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ಶನಿವಾರ ಚರ್ಚಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಚರ್ಚೆ ಮಾಡಿದ್ದಾರೆ ಇದಕ್ಕೆ ಅಮಿತ್ ಶಾ ಕೂಡ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

Also read: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಆಯ್ಕೆಯಾದರು ಅಧಿಕೃತ ಘೋಷಣೆಗೆ ವಿಳಂಬ ಮಾಡುತ್ತಿರುವುದು ಯಾಕೇ?

ಹೌದು ಸಂಪುಟ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿಗಳು ಅಮಿತ್‌ ಶಾ ಜತೆ ಅರ್ಧ ಗಂಟೆ ಸಂಪುಟ ವಿಸ್ತರಣೆ ಕುರಿತಂತೆ ಚರ್ಚಿಸಿದ್ದು, ದಾವೋಸ್‌ ಪ್ರವಾಸದಿಂದ ಹಿಂದಿರುಗಿದ ಬಳಿಕ ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಈಗಾಗಲೇ ಸಂಭವನೀಯ ಸಚಿವರ ಪಟ್ಟಿಯನ್ನು ಶಾ ಅವರಿಗೆ ಸಲ್ಲಿಕೆ ಮಾಡಲಾಗಿದೆ ಎಂದು ಮೂಲಗಳು ಹೇಳಿದ್ದು, ಪಕ್ಷದ ವರಿಷ್ಠರ ಸಮ್ಮತಿ ದೊರೆತ ಬಳಿಕ ಅಂದರೆ, ಮಾಸಾಂತ್ಯಕ್ಕೆ ಸಂಪುಟ ವಿಸ್ತರಣೆಯಾಗುತ್ತೆ. ಎನ್ನುವುದು ತಿಳಿದು ಬಂದಿದೆ. ವಿಶೇಷ ವಿಮಾನದಲ್ಲಿ ಒಟ್ಟಿಗೆ ಹುಬ್ಬಳ್ಳಿಗೆ ತೆರಳಿದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಕುರಿತು ಶಾ ಅವರ ಜತೆ ಚರ್ಚಿಸಿದ್ದಾರೆ. ಸದ್ಯ 17 ಸಚಿವರಷ್ಟೇ ಇದ್ದು, ಪ್ರಮುಖ ಖಾತೆಗಳನ್ನು ಹೆಚ್ಚುವರಿಯಾಗಿ ಹಾಲಿ ಸಚಿವರಿಗೆ ವಹಿಸಲಾಗಿದೆ.

Also read: ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕೆಂಬುದು ಬಿಜೆಪಿಯವರ ಹಿಡನ್ ಅಜೆಂಡಾ ಆಗಿದೆ; ಯಾವುದೇ ಕಾರಣಕ್ಕೂ ಹಿಂದೂ ರಾಷ್ಟ್ರವಾಗಲು ಬಿಡಲ್ಲ: ಸಿದ್ದರಾಮಯ್ಯ.!

ಸಂಪುಟ ವಿಸ್ತರಣೆ ಅನಿವಾರ್ಯವಾಗಿದ್ದು, ತ್ವರಿತ ವಾಗಿ ಖಾತೆ ಹಂಚಿಕೆ ಮಾಡಿ ಆಡಳಿತಕ್ಕೆ ಇನ್ನಷ್ಟು ಚುರುಕು ಮುಟ್ಟಿಸಬೇಕಿದೆ ಎಂದು ಯಡಿಯೂರಪ್ಪ ಅವರು ಸಂಭಾವ್ಯ ಸಚಿವರ ಪಟ್ಟಿಯನ್ನು ಅಮಿತ್‌ ಶಾ ಅವರಿಗೆ ಸಲ್ಲಿಸಿದ್ದಾರೆ. ಜತೆಗೆ ಮೂಲ ಬಿಜೆಪಿಗರ ಪೈಕಿ ಹಲವರು ಸಚಿವ ಸ್ಥಾನಕ್ಕೆ ಮನವಿ ಮಾಡಿರುವ ಬಗ್ಗೆಯೂ ಪ್ರಸ್ತಾವಿಸಿದ್ದಾರೆ. ಈ ಬಗ್ಗೆ ಪರಿಶೀಲಿಸುವುದಾಗಿ ಅಮಿತ್‌ ಶಾ ಹೇಳಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ. ಮುಖ್ಯಮಂತ್ರಿಗಳು ಸಲ್ಲಿಸಿದ್ದಾರೆ ಎನ್ನಲಾದ ಸಂಭಾವ್ಯರ ಪಟ್ಟಿಯಲ್ಲಿ ಯಾರ ಹೆಸರಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಉಪಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್‌ ತಕರಾರು ಇಲ್ಲ ಎಂಬ ಮಾಹಿತಿಯಿದ್ದು, ಇದೇ ಮಾತನ್ನು ಯಡಿಯೂರಪ್ಪ ಅವರು ಹಲವು ಬಾರಿ ಪುನರುಚ್ಚರಿಸಿದ್ದಾರೆ.

Also read: ವೇದ ಉಪನಿಷತ್ತು ಮಕ್ಕಳ ಬಾಳಿಗೆ ದೀಪವಾಗಿದೆ. ಶಿಕ್ಷಣದ ಜೊತೆ ವೇದ ಉಪನಿಷತ್ತು ಅಗತ್ಯ; ಅಮಿತ್​ ಶಾ

ಇನ್ನೊಂದು ಮಾಹಿತಿಯಂತೆ, ಸಿಎಂ ಯಡಿಯೂರಪ್ಪನವರು ಸಂಧಾನ ಸೂತ್ರ ರೆಡಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಧಾನ ಸೂತ್ರದ ಸಕ್ಸಸ್ ಮೇಲೆಯೇ ನಿಂತಿದೆಯಂತೆ ಸಂಪುಟ ವಿಸ್ತರಣೆ. ಈ ಸಂಧಾನ ಸೂತ್ರ ಸಕ್ಸಸ್ ಆದರೆ ಈ ತಿಂಗಳಲ್ಲೇ ಸಂಪುಟ ವಿಸ್ತರಣೆ ನಡೆಸಲಾಗುತ್ತದೆಯಂತೆ. ಒಂದು ವೇಳೆ ಈ ಸಂಧಾನ ಸೂತ್ರ ಫೇಲ್ ಆದ್ರೆ ಸಂಪುಟ ಕಸರತ್ತು ಫೆಬ್ರವರಿಯಲ್ಲಿ ನಡೆಯಲಿದೆಯೆಂತಲೂ ಹೇಳಲಾಗುತ್ತಿದೆ. ಮೂಲ ಬಿಜೆಪಿಗೆ ಶಾಸಕರನ್ನು ಸಚಿವರಾಗಿ ಮಾಡಲು ರೂಪಿಸಿದ ಸಂಧಾನ ಸೂತ್ರವಿದಂತೆ. ಸಚಿವ ಸಂಪುಟದಲ್ಲಿ 7 ರಿಂದ 8 ಜನ ಅರ್ಹರಿಗೆ ಮಾತ್ರ ಸೇರ್ಪಡೆ ಮಾಡಿಕೊಂಡು, ಕಡೆಯ ಪಕ್ಷ ಮೂವರು ಅರ್ಹ ಶಾಸಕರಿಗೆ ಸಚಿವ ಸ್ಥಾನ ಕೊಡದಿರಲು ಯಡಿಯೂರಪ್ಪ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗುತ್ತಿದೆ.