ವೃತ್ತಿಪರ ಕೋರ್ಸ್​ಗೆ ಸಂಬಂಧಿಸಿದ 2019ರ CET ಪರೀಕ್ಷಾ ಫಲಿತಾಂಶ ಪ್ರಕಟ; ಯಾರಿಗಿದೆ ಶುಲ್ಕ ಮರುಪಾವತಿ ಯಾರಿಗಿದೆ ಮೀಸಲಾತಿ ಜಾರಿ. ಇಲ್ಲಿದೆ ನೋಡಿ ಮಾಹಿತಿ…

0
341

ವೃತ್ತಿಪರ ಕೋರ್ಸ್​ಗೆ ಸಂಬಂಧಿಸಿದ 2019ರ ಸಾಮಾನ್ಯ ಪ್ರವೇಶ ಪರೀಕ್ಷಾ (ಸಿಇಟಿ) ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪ್ರಕಟಗೊಳಿಸಿ ಇಂಜಿನಿಯರಿಂಗ್ ವಿಭಾಗದಲ್ಲಿ , ಮಾರತಹಳ್ಳಿಯ ಚೈತನ್ಯ ಟೆಕ್ನೊ ಕಾಲೇಜಿನ ಜಫಿನ್ ಬಿಜು ಮೊದಲ ಸ್ಥಾನ ಪಡೆದಿದ್ದಾರೆ. ಮೊದಲ 10 ಸ್ಥಾನಗಳಲ್ಲಿ ಬೆಂಗಳೂರಿನ ಏಳು, ಮಂಗಳೂರಿನ 2, ಬಳ್ಳಾರಿಯ ಒಬ್ಬ ವಿದ್ಯಾರ್ಥಿ ರಾಂಕ್ ಗಳಿಸಿದ್ದಾರೆ.

ಹೌದು ಇಂಜಿನಿಯರಿಂಗ್, ನ್ಯಾಚುರೋಪತಿ, ಯೋಗ ವಿಜ್ಞಾನ, ಬಿಎಸ್ಸಿ ಕೃಷಿ, ಪಶು ವೈದ್ಯಕೀಯ , ಬಿ ಫಾರ್ಮ, ಡಿ ಫಾರ್ಮ ಕೋರ್ಸ್‍ಗಳ ಪ್ರವೇಶಕ್ಕಾಗಿ ಕಳೆದ ಏ.29 ಮತ್ತು 30ರಂದು ರಾಜ್ಯದ 431 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಗಾಗಿ 1,94,308 ಅಭ್ಯರ್ಥಿಗಳು ಅರ್ಜಿ‌ ಸಲ್ಲಿಸಿದ್ದರು, 1,80,315 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರ ಫಲಿತಾಂಶವನ್ನು ಇಂದು ಪ್ರಕಟಿಸಿದ್ದು. ಇಂಜಿನಿಯರಿಂಗ್ ವಿಭಾಗದಲ್ಲಿ ಮಾರತ ಹಳ್ಳಿಯ ಶ್ರೀ ಚೈತನ್ಯ ಟೆಕ್ನೋ ಪಿಯು ಕಾಲೇಜ್ ವಿದ್ಯಾರ್ಥಿ ಜಫಿನ್ ಬಿಜು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಬಿಎಸ್ಸಿ ಕೃಷಿ ವಿಭಾಗದಲ್ಲಿ ನ್ಯಾಷನಲ್ ಪಬ್ಲಿಕ್ ಸ್ಕೂಲ್​ನ ಎಂ. ಕೀರ್ತನ ಮೊದಲ ರ್ಯಾಂಕ್​ ಗಳಿಸಿದ್ದರೆ, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನದಲ್ಲಿ ಮಾರತಹಳ್ಳಿಯ ಶ್ರೀ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ಪಿ. ಮಹೇಶ್ ಆನಂದ್ ಪ್ರಥಮ ರ್ಯಾಕ್ ಗಳಿಸಿದ್ದಾರೆ. ಇನ್ನೂ ಪಶು ವೈದ್ಯಕೀಯ ಹಾಗೂ ಬಿ ಫಾರ್ಮಾ ಡಿ ಫಾರ್ಮಾದಲ್ಲೂ ಬೆಂಗಳೂರು ಮೊದಲ ಸ್ಥಾನ ಗಳಿಸಿದೆ.

ಮುಂದಿನ ವರ್ಷದಿಂದ ಆನ್‍ಲೈನ್ ಪರೀಕ್ಷೆ?

ಬರುವ ಶೈಕ್ಷಣಿಕ ವರ್ಷದಿಂದ ಸಿಇಟಿಯನ್ನು ಆನ್‍ಲೈನ್‍ನಲ್ಲೇ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ನೆರೆ ರಾಜ್ಯ ಮತ್ತು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಆನ್‍ಲೈನ್ ಮೂಲಕವೇ ಸಿಇಟಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದ ಸಚಿವರು. ಹಲವಾರು ಸುತ್ತಿನ ಅಣಕು ಪರೀಕ್ಷೆಗಳನ್ನು ನಡೆಸಲಾಗುವುದು. ಅದರಲ್ಲಿ ಎಷ್ಟು ಬಾರಿ ಬೇಕಾದರೂ ವಿದ್ಯಾರ್ಥಿಗಳು ಭಾಗವಹಿಸಬಹುದು. ಗ್ರಾಮೀಣಾ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪಿಯುಸಿ ಮತ್ತು ಡಿಗ್ರಿ ಕಾಲೇಜುಗಳಲ್ಲಿ ಪರೀಕ್ಷಾಕೇಂದ್ರಗಳನ್ನು ತೆಗೆಯಲಾಗುವುದು. ಆನ್‍ಲೈನ್ ಪರೀಕ್ಷೆಯ ಪೂರ್ವ ಸಿದ್ದತೆಗಾಗಿ ಈಗಾಗಲೇ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ಜೊತೆ ಚರ್ಚೆ ನಡೆಸಲಾಗುತ್ತಿದೆ. ಎಂದು ಹೇಳಿದ್ದಾರೆ.

ಶೇ.10ರಷ್ಟು ಮೀಸಲಾತಿ ಜಾರಿ?

ಸಿಇಟಿಯಲ್ಲಿ ಎಲ್ಲಾ ವಿಧಧ ಮೊದಲ ಐದು ಟಾಪ್ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಕಾಲೇಜು ಪ್ರವೇಶ ಶುಲ್ಕವನ್ನು ಪ್ರಾಧಿಕಾರ ಮರುಪಾವತಿಸಲಿದೆ ಎಂದು ತಿಳಿಸಿದ ಅವರು ಕೇಂದ್ರ ಸರ್ಕಾರ ಮೇಲ್ವರ್ಗದವರಿಗೆ ಜಾರಿಗೊಳಿಸಿರುವ ಶೇ.10ರಷ್ಟು ಮೀಸಲಾತಿ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಧಾರ ತೆಗೆದುಕೊಂಡಿದ್ದು, ವೃತ್ತಿಪರ ಕೋರ್ಸ್‍ಗಳ ಪ್ರವೇಶದಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ಈಗಾಗಲೇ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳು ಸೇರಿ ಶೇ.50ರಷ್ಟು ಮೀಸಲಾತಿ ಜಾರಿಯಲ್ಲಿದೆ. ಮೇಲ್ವರ್ಗದ ಮೀಸಲಾತಿಯು ಒಳಗೊಂಡರೆ ಶೇ.60ರಷ್ಟು ಮೀಸಲಾತಿ ಪ್ರಮಾಣವಾಗಲಿದೆ. ಉಳಿದ 40ರಷ್ಟು ಸಾಮಾನ್ಯ ವರ್ಗದ ಸೀಟುಗಳು ಇರಲಿವೆ. ಎಂದು ಗೋಷ್ಠಿಯಲ್ಲಿ ಪರೀಕ್ಷಾ ಪ್ರಾಧಿಕಾರದ ಕಾರ್ಯದರ್ಶಿ ಬಿ.ಎಚ್.ಅನಿಲ್‍ಕುಮಾರ್ ಮತ್ತು ಕಾರ್ಯ ನಿರ್ವಾಹಕ ಅಧಿಕಾರಿ ಗಿರೀಶ್‍ಕುಮಾರ್ ತಿಳಿಸಿದ್ದಾರೆ.

Also read: ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ; ವೈದ್ಯಕೀಯ ವೆಚ್ಚ ಮರುಪಾವತಿ ಮಿತಿ 3 ಲಕ್ಷ ರೂ. ಗೆ ಹೆಚ್ಚಳ ಮಾಡಿ ಹಲವು ಬದಲಾವಣೆ ತಂದ ಸರ್ಕಾರ..