ರಾಜ್ಯದಲ್ಲಿ ನೂತನವಾಗಿ ಅಧಿಕಾರಕೆ ಬಂದ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಬಿಜೆಪಿಯ 17 ಶಾಸಕರಿಗೆ ಸಚಿವ ಭಾಗ್ಯ ಸಿಕ್ಕಿದೆ. ಬಿಎಸ್ವೈ ಹಲವಾರು ಬಾರಿ ದೆಹಲಿಗೆ ತೆರಳಿದ್ದರೂ ಹೈ ಕಮಾಂಡ್ ಮಾತ್ರ ಯಾವುದೇ ಹಸಿರು ನಿಶಾನೆ ತೋರಿರಲಿಲ್ಲ. ಹೀಗಿರುವಾಗ ಕಳೆದೆರಡು ದಿನಗಳ ಹಿಂದೆ ಸಂಪುಟ ರಚನೆಗೆ ಇಂದು ಮಂಗಳವಾರ ದಿನಾಂಕ ಫಿಕ್ಸ್ ಆಗಿದ್ದು, ಸಚಿವರಾಗುವವರು ಯಾರು ಎಂಬುವುದು ಮಾತ್ರ ನಿಗೂಢವಾಗಿಯೇ ಇತ್ತು. ಸದ್ಯ ಕೊನೆಗೂ ಸಚಿವರಾಗುವವರ ಪಟ್ಟಿ ಲಭ್ಯವಾಗಿದ್ದು, ಒಟ್ಟು 17 ಶಾಸಕರಿಗೆ ಮಂತ್ರಿ ಭಾಗ್ಯ ದೊರಕಿದೆ.
17 ಸಚಿವ ಆಯ್ಕೆ
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಇಂದು 17 ಶಾಸಕರು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಮಿತ್ ಶಾ ಅವರು ಸೋಮವಾರ ಸಂಜೆ ಫೈನಲ್ ಮಾಡಿ ಸಚಿವರ ಪಟ್ಟಿಯನ್ನು ತಯಾರು ಮಾಡಿಕೊಟ್ಟಿದ್ದರು. ಆದರೆ ಸಚಿವ ಸಂಪುಟ ಪಟ್ಟಿಯಲ್ಲಿ ಮೆಗಾ ಟ್ವಿಸ್ಟ್ ಆಗಿದ್ದು, ಕೊನೆ ಕ್ಷಣದಲ್ಲಿ ಪಟ್ಟು ಹಿಡಿದು ಸಿಎಂ ಯಡಿಯೂರಪ್ಪ ಅವರು ಬದಲಾವಣೆ ಮಾಡಿದ್ದಾರೆ. ಬೆಳಗಿನ ಜಾವದ ಹೊತ್ತಿಗೆ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು, ಬಹುತೇಕ ಎಲ್ಲಾ ಶಾಸಕರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಆಯ್ಕೆಯಾದ ಸಚಿವರ ಪಟ್ಟಿ
1. ಗೋವಿಂದ ಕಾರಜೋಳ – ಮಾಜಿ ಸಚಿವ, ಮುಧೋಳ(ಬಾಗಲಕೋಟೆ) ಎಸ್ಸಿ (ಎಡಗೈ)
2. ಡಾ.ಅಶ್ವಥ್ನಾರಾಯಣ್ – ಮಲ್ಲೇಶ್ವರಂ(ಬೆಂಗಳೂರು), ಒಕ್ಕಲಿಗ
3. ಲಕ್ಷ್ಮಣ ಸವದಿ – ಮಾಜಿ ಶಾಸಕ, ಬಣಜಿಗ ಲಿಂಗಾಯತ, ಎಂಎಲ್ಸಿ ಮಾಡಲು ತೀರ್ಮಾನ
4. ಈಶ್ವರಪ್ಪ, ಮಾಜಿ ಡಿಸಿಎಂ – ಶಿವಮೊಗ್ಗ, ಕುರುಬ
5. ಆರ್.ಅಶೋಕ್ – ಮಾಜಿ ಡಿಸಿಎಂ ಪದ್ಮನಾಭನಗರ(ಬೆಂಗಳೂರು) ಒಕ್ಕಲಿಗ
6. ಜಗದೀಶ್ ಶೆಟ್ಟರ್ – ಮಾಜಿ ಸಿಎಂ, ಹುಬ್ಬಳ್ಳಿ ಧಾರವಾಡ, ಲಿಂಗಾಯತ
7. ಶ್ರೀರಾಮುಲು – ಮಾಜಿ ಸಚಿವ, ಮೊಳಕಾಲ್ಮೂರು(ಚಿತ್ರದುರ್ಗ) ಎಸ್ಟಿ, ವಾಲ್ಮೀಕಿ
8. ಸುರೇಶ್ ಕುಮಾರ್ – ಮಾಜಿ ಸಚಿವ, ರಾಜಾಜಿನಗರ(ಬೆಂಗಳೂರು) ಬ್ರಾಹ್ಮಣ, ಪಕ್ಷ ನಿಷ್ಠೆ
9. ವಿ.ಸೋಮಣ್ಣ – ಮಾಜಿ ಸಚಿವ, ಗೋವಿಂದರಾಜನಗರ(ಬೆಂಗಳೂರು) ಲಿಂಗಾಯತ
10. ಸಿಟಿ ರವಿ – ಚಿಕ್ಕಮಗಳೂರು, ಒಕ್ಕಲಿಗ
11. ಬಸವರಾಜ ಬೊಮ್ಮಾಯಿ – ಶಿಗ್ಗಾಂವಿ (ಹಾವೇರಿ) ಲಿಂಗಾಯತ, ಬಿಎಸ್ವೈ ಆಪ್ತ
12. ಕೋಟಾ ಶ್ರೀನಿವಾಸ್ ಪೂಜಾರಿ – ಎಂಎಲ್ಸಿ, ಬಿಲ್ಲವ, ಹಿರಿತನ, ಕರಾವಳಿ ಕೋಟಾ
13. ಜೆಸಿ ಮಾಧುಸ್ವಾಮಿ – ಚಿಕ್ಕನಾಯಕನಹಳ್ಳಿ(ತುಮಕೂರು) ಲಿಂಗಾಯತ, ಬಿಎಸ್ವೈ ಆಪ್ತ
14. ಸಿಸಿ ಪಾಟೀಲ್ – ಮಾಜಿ ಸಚಿವ, ನರಗುಂದ(ಗದಗ) ಲಿಂಗಾಯತ
15. ನಾಗೇಶ್, ಮಾಜಿ ಸಚಿವ, ಮುಳಬಾಗಲು(ಕೋಲಾರ) ಪಕ್ಷೇತರ ಶಾಸಕ, ಎಸ್ಸಿ (ಬಲಗೈ)
16. ಪ್ರಭು ಚೌಹಾಣ್ – ಔರಾದ್(ಬೀದರ್) ಎಸ್ಸಿ (ಲಂಬಾಣಿ)
17. ಶಶಿಕಲಾ ಜೊಲ್ಲೆ – ನಿಪ್ಪಾಣಿ(ಬೆಳಗಾವಿ) ಲಿಂಗಾಯತ
ಹಳೆ ಮೈಸೂರು ಭಾಗದ ಹಲವು ಶಾಸಕರು ಮಂತ್ರಿಯಾಗಿದ್ದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಓರ್ವ ಶಾಸಕನಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ ಯಾವ ಜಿಲ್ಲೆಗಳಿಗೂ ಸಿಎಂ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಮೈಸೂರು, ಮಡಿಕೇರಿ, ಹಾಸನ, ಚಾಮರಾಜನಗರ ಭಾಗದಲ್ಲಿ ಎಂಟು ಶಾಸಕರು ಇದ್ದರು ಒಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಸದ್ಯ 17 ಜನರಿಗೆ ಸಿಕ್ಕಕ್ಕೆ ಉಳಿದಂತೆ ಹಲವರಿಗೆ ಮಂತ್ರಿಗಿರಿ ವಲಿಯುತ್ತೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇವರಿಗೆ ಮಂತ್ರಿ ಸ್ಥಾನ ಕೈ ತಪ್ಪಿದೆ.