ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗದಲ್ಲಿ ಸಿಂಹಪಾಲು, ಸಿದ್ದರಾಮಯ್ಯರವರು ಮಾಡದಿದ್ದನ್ನು ಯಡಿಯೂರಪ್ಪ ಮಾಡುವರೇ??

0
202

73ನೇ ಸ್ವಾತಂತ್ರ್ಯ ದಿನಾಚಾರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಗುರುವಾರ ಮಾತನಾಡಿದ ಯಡಿಯೂರಪ್ಪನವರು ರಾಜ್ಯದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿ ಹಾಗೂ ಕೌಶಲ ಅಭಿವೃದ್ಧಿಗಾಗಿ ನೂತನ ಕೈಗಾರಿಕೆ ನೀತಿಯನ್ನು ಶೀಘ್ರವೇ ಜಾರಿಗೆ ತರಲಾಗುವುದು, ಕರ್ನಾಟಕದ ಕನ್ನಡಿಗರಿಗೆ ಸಿಂಹ ಪಾಲು ನೀಡುವ ಭರವಸೆ ನೀಡುತ್ತೇನೆ. ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಸಿಗಬೇಕು ಎಂಬ ಅಭಿಯಾನಕ್ಕೆ 100 ರಷ್ಟು ಜಯ ಸಿಗುತ್ತದೆ. ಎಂದು ಹೇಳಿದ್ದಾರೆ.

Also read: ನೆರೆಪೀಡಿತ ಗ್ರಾಮಕ್ಕೆ 10 ಕೋಟಿ ದೇಣಿಗೆ ನೀಡಿದರೆ ಗ್ರಾಮಕ್ಕೆ ದಾನಿಯ ಹೆಸರು ನಾಮಕರಣ; ಈ ನಿರ್ಧಾರ ಸರಿನಾ??

ಹೌದು ನಗರದ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಮಾತನಾಡಿದ ಅವರು “ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರ ಉದ್ಯೋಗ ಪ್ರಾತಿನಿಧ್ಯ ಕುಸಿಯುತ್ತಿದೆ ಎಂಬ ಕೂಗು ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಲಭ್ಯವಿರುವ ಉದ್ಯೋಗಗಳಲ್ಲಿ ಕನ್ನಡಿಗರು ಸಿಂಹ ಪಾಲನ್ನು ಪಡೆಯಬೇಕು ಎಂಬುದು ನಮ್ಮ ಸ್ಥಾಪಿತ ಮತ್ತು ಹೇಳಿಕೆಯ ನಿಲುವು” ಹೌದು ಈ ಸರ್ಕಾರವು ಈ ನಾಡಿನ ಜನರ ಭಾವನೆಯನ್ನು ಗೌರವಿಸುತ್ತದೆ. ಎಂದು ಹೇಳುತ್ತಿದ್ದೇನೆ. ಕನ್ನಡಿಗರ ಸ್ವಾಭಿಮಾನ ಮತ್ತು ಉದ್ಯೋಗಾವಕಾಶಗಳು ಎಂದಿಗೂ ಹೊಂದಾಣಿಕೆ ಆಗುವುದಿಲ್ಲ ಅಥವಾ ಬೆದರಿಕೆಗೆ ಒಳಗಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಎಂದು ಸಿಎಂ ಹೇಳಿದ್ದಾರೆ.

Also read: ಅನರ್ಹಗೊಂಡ 17 ಶಾಸಕರು ಮರು ಚುನಾವಣೆಗೆ ತಮ್ಮ ಪರ ಉತ್ತರಾಧಿಕಾರಿಗಳನ್ನು ಅಖಾಡಕ್ಕಿಳಿಸಲು ಸಿದ್ಧತೆ; ಯಾರ ಪರವಾಗಿ ಯಾರು ಇಲ್ಲಿದೆ ನೋಡಿ..

”ಹಾಲಿ 2014-19ರ ಕೈಗಾರಿಕೆ ನೀತಿಯ ಅವಧಿಯು ಸೆಪ್ಟೆಂಬರ್‌ಗೆ ಕೊನೆಗೊಳ್ಳಲಿದೆ. ಸಮಗ್ರ ಅಭಿವೃದ್ಧಿ ಗಮನದಲ್ಲಿರಿಸಿ ಹಿಂದುಳಿದ ಪ್ರದೇಶ ಹಾಗೂ 2, 3ನೇ ಹಂತದ ನಗರಗಳಿಗೆ ಬಂಡವಾಳ ಆಕರ್ಷಿಸಿ ಅಧಿಕ ಉದ್ಯೋಗ ಸೃಷ್ಟಿಗೆ ಅವಕಾಶವಾಗುವಂತಹ ಹೊಸ ನೀತಿ ರೂಪಿಸಲಾಗುವುದು. 9 ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ‘ಉತ್ಪನ್ನ ಆಧಾರಿತ ಕೈಗಾರಿಕೆ ಕ್ಲಸ್ಟರ್‌ ಅಭಿವೃದ್ಧಿ ಯೋಜನೆ’ಯನ್ನು ಇತರೆಡೆಯೂ ವಿಸ್ತರಣೆ ಹಾಗೂ 2019-24ರ ಜವಳಿ-ಸಿದ್ಧ ಉಡುಪು ನೀತಿಯನ್ನೂ ಜಾರಿಗೊಳಿಸಲಾಗುವುದು,” ಎಂದರು.
”ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. ಈಸ್‌ ಆಫ್‌ ಡೂಯಿಂಗ್‌ ಬಿಸಿನೆಸ್‌ನ ಗುರಿಯಲ್ಲಿ ಶೇ.98ರಷ್ಟು ಸಾಧಿಸಿದ್ದು, ಭವಿಷ್ಯದಲ್ಲಿ ಶೇ.100ರ ಗುರಿ ತಲುಪಿ ಹೂಡಿಕೆದಾರರನ್ನು ಆಕರ್ಷಿಸಲು ಪೂರಕ ಕ್ರಮ ಕೈಗೊಳ್ಳಲಾಗುವುದು,” ಎಂದು ಸ್ಪಷ್ಟಪಡಿಸಿದರು. ಅದರಂತೆ ಆಂಧ್ರಪ್ರದೇಶ ಇತ್ತೀಚೆಗೆ ಅಂಗೀಕರಿಸಿದ ನೀತಿಯನ್ನು ಹೋಲುವಂತೆ ಕರ್ನಾಟಕದಲ್ಲಿ ಜನ ಒತ್ತಾಯಿಸುತ್ತಿದ್ದಾರೆ, ಇದರಲ್ಲಿ 75% ಉದ್ಯೋಗಗಳನ್ನು ಕೈಗಾರಿಕಾ ಘಟಕಗಳಲ್ಲಿ ಸ್ಥಳೀಯರಿಗೆ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಕ್ರಮದಲ್ಲಿ ಸ್ಥಾಪಿಸಲಾದ ಕಾರ್ಖಾನೆಗಳಿಗೆ ಮೀಸಲಿಡಲಾಗಿದೆ. ಅದರಂತೆ ಕರ್ನಾಟಕದಲ್ಲಿ ಜಾರಿಗೆ ಬರಬೇಕಿದೆ.

Also read: 30 ವರ್ಷದಿಂದ ಗುಡಿಸಲಲ್ಲಿ ಜೀವನ ನಡೆಸುತ್ತಿದ್ದ ಹುತಾತ್ಮ ಯೋಧನ ಪತ್ನಿಗೆ ಸ್ವಾತಂತ್ರ್ಯ ದಿನಾಚರಣೆಗೆ ಸಿಕ್ತು ಊರಿನವರಿಂದ ಸರ್ಪ್ರೈಸ್ ಗಿಫ್ಟ್!

ಈ ಹಿಂದೆ ಫೆಬ್ರವರಿಯಲ್ಲಿ, ಆಗಿನ ಕರ್ನಾಟಕ ಸರ್ಕಾರವು ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ನೀತಿಯನ್ನು ಪರಿಚಯಿಸುವುದಾಗಿ ಘೋಷಿಸಿತ್ತು, ಅಲ್ಲಿ ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಗ್ರೂಪ್ ಸಿ ಮತ್ತು ಡಿ ಉದ್ಯೋಗಗಳಲ್ಲಿ 100% ಮೀಸಲಾತಿ ನೀಡಲಾಗುವುದು. ಇದು ಸರೋಜಿನಿ ಮಹಿಶಿ ಸಮಿತಿಯ ವರದಿಯ ಶಿಫಾರಸುಗಳನ್ನು ಆಧರಿಸಿದೆ. 1986 ರ ವರದಿಯು ಕನ್ನಡಿಗರಿಗೆ ಸರ್ಕಾರಿ ಉದ್ಯೋಗಗಳು, ಸಾರ್ವಜನಿಕ ವಲಯದ ಘಟಕಗಳು ಮತ್ತು ಖಾಸಗಿ ವಲಯದಲ್ಲಿಯೂ ಮೀಸಲಾತಿ ನೀಡುವಂತೆ ಸೂಚಿಸಿದೆ.