ಕರ್ನಾಟಕದಲ್ಲಿ ಡ್ರಗ್ ಮಾಫಿಯಾ ರಾರಾಜಿಸುತ್ತಿದೆ, ಕಾಂಗ್ರೆಸ್ ಸರ್ಕಾರ ಇದರ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ: ಬಿ.ಜೆ.ಪಿ. ಶಾಸಕ

0
430

Kannada News | Karnataka News

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಸುರಕ್ಷತೆ ಒದಗಿಸುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ನೂರಾರು ಹಿಂದೂ ಕಾರ್ಯಕರ್ತರ ಹತ್ಯೆ ನಡೆದರೂ ಇಲ್ಲಿಯ ವರೆಗೂ ಅವರ ವಿರುದ್ಧ ಯಾವ ಕ್ರಮವು ಕೈಗೊಂಡಿಲ್ಲ, ಮಕ್ಕಳ ಆಹಾರದಲ್ಲಿ ಡ್ರಗ್ಸ್ ಬಂದರೂ ಸಹ ಏನು ಮಾಡುತ್ತಿಲ್ಲ ಎಂದು ಬಿಜೆಪಿ ಶಾಸಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಹೌದು, ಮಕ್ಕಳು ತಿನ್ನುವ ಆಹಾರದಲ್ಲಿ ನಶೆ ಪದಾರ್ಥ ಬೆರಿಕೆಯಾಗಿದೆ ಇದರ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತಿಲ್ಲ, ಮಕ್ಕಳ ಆರೋಗ್ಯದ ವಿಷಯದಲ್ಲಿ ಹೀಗೆ ಮಾಡುವುದು ಸರಿಯಲ್ಲ ಅಂತ ಬಿಜೆಪಿಯ ಜಯನಗರ ಕ್ಷೇತ್ರದ ಶಾಸಕರಾದ ಬಿ.ಎನ್.ವಿಜಯಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜ್ಯ ಬಿಜೆಪಿ ನಾಯಕರು ನಡೆಸುತ್ತಿರುವ ಬೆಂಗಳೂರು ರಕ್ಷಿಸಿ ಎಂಟನೇ ದಿನ, ಜಯನಗರದಲ್ಲಿ ಬಿಜೆಪಿ ನಾಯಕರು ಪಾದಯಾತ್ರೆ ನಡೆಸಿದರು. ಇದೆ ವೇಳೆಯಲ್ಲಿ ಮಾತನಾಡಿದ ಸ್ಥಳೀಯ ಬಿಜೆಪಿ ಶಾಸಕ ಮಕ್ಕಳು ತಿನ್ನುವ ಪಾನಿಪುರಿ, ಸೌತೇಕಾಯಿಯಲ್ಲಿ ಡ್ರಗ್ಸ್ ಇದೆ ಎಂಬ ಸ್ಪೋಟಕ ಮಾಹಿತಿ ನೀಡಿದ್ದಾರೆ.

ಜಯನಗರ ಶಾಸಕ ಬಿ.ಎನ್.ವಿಜಯಕುಮಾರ್, ಬೆಂಗಳೂರಿನಲ್ಲಿ ದಿನೇ-ದಿನೇ ಕ್ರೈಂ ರೇಟ್ ಹೆಚ್ಚಾಗುತ್ತಿದೆ. ಡ್ರಗ್ಸ್ ಮಾಫಿಯಾ ಹೆಚ್ಚಿದೆ, ಇರಾನಿಗಳು, ಸೌತ್ ಆಫ್ರಿಕಾದದಿಂದ ಬಂದಿರುವವರು ಇಲ್ಲಿ ವ್ಯಾಪಕ ಡ್ರಗ್ ಮಾಫಿಯಾ ಜಾಲವನ್ನೇ ನಡೆಸುತ್ತಿದ್ದಾರೆ, ಎಂದು ಅವರು ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಕ್ರೈಂ ರೇಟ್ ಹೆಚ್ಚಾಗಿದೆ, ಅದರಲ್ಲಿ ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಹಾಡು ಹಗಲೇ ಕೊಲೆ-ಹಲ್ಲೆಗಳು ನಡೆಯುತ್ತಿವೆ. ಕೆ. ಆರ್. ಪುರಂ ಕ್ಷೇತ್ರದಲ್ಲಿ ಇದುವರೆಗೂ 118 ಕೊಲೆಗಾಳಾಗಿವೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.

Also Read: ಸಿದ್ದರಾಮಯ್ಯ ಸರ್ಕಾರದಿಂದ ಪೊಲೀಸರಿಗೆ ಕಿಂಚಿತ್ತೂ ಗೌರವ ಸಿಗುತ್ತಿಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಲು ಅವರೇ ನೇರ ಹೊಣೆ: ಹಿರಿಯ ಐ.ಪಿ.ಎಸ್. ಅಧಿಕಾರಿಗಳು!!