ಸಾಲ ಮನ್ನಾ ಮಾಡಲು ರೈತರ ಖಾತೆಗೆ ಬಂದ ಹಣ ಬ್ಯಾಂಕಿನಿಂದ ಸರಕಾರಕ್ಕೆ ವಾಪಸ್; ಕೊನೆಗೂ ಮೈತ್ರಿ ಸರ್ಕಾರದಿಂದ ರೈತರ ಕಣ್ಣಿಗೆ ಮಣ್ಣು..?

0
364

ರಾಜ್ಯದ ರೈತರ ಸಾಲಮನ್ನಾ ದೋಖಾ ಎನ್ನುವ ಸುದ್ದಿ ಎಲ್ಲೆಡೆ ಹರಡುತ್ತಿದ್ದು, ಸಾವಿರಾರು ರೈತರ ಸಾಲ ಮನ್ನಾ ಮಾಡಲು ಬ್ಯಾಂಕ್ ಖಾತೆಗಳಿಗೆ ಹಾಕಿದ ಹಣವನ್ನು ವಾಪಸ್ ಪಡೆದು ಮೈತ್ರಿ ಸರ್ಕಾರ ರೈತರಿಗೆ ಮೋಸ ಮಾಡಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ರೈತರ ಮತವನ್ನು ವಾಲಿಸಿಕೊಳ್ಳಲು ಲೋಕಸಭಾ ಚುನಾವಣೆಯ ಮೊದಲು ರೈತರ ಖಾತೆಗೆ ಹಣ ಹಣ ವರ್ಗಾವಣೆ ಮಾಡಲಾಗಿತ್ತು ಆದರೆ ಚುನಾವಣೆ ಮುಗಿದ ನಂತರ ಸಾಲ ಮನ್ನಾ ಯೋಜನೆಯಡಿ ಸರಕಾರದಿಂದ ಬಂದ ಹಣ ವಾಪಸ್ ಹೋಗಿರುವುದು ಬೆಳಕಿಗೆ ಬಂದಿದೆ.

Also read: ರೈತರಿಗೆ ಸಿಎಂ ನೀಡಿದ ಸಾಲ ಮನ್ನಾ ಘೋಷಣೆಯನ್ನು ನಂಬಿಕೊಂಡ ರೈತರಿಗೆ ಕೋರ್ಟ್ ನೊಟೀಸ್, ಕಂಗಾಲಾದ ರೈತರು!! ಎಚ್.ಡಿ.ಕೆ. ರೈತರ ಕೈ ಹಿಡಿಯುತ್ತಾರಾ ??

ಏನಿದು ಸಾಲ ಮನ್ನಾ ದೋಖಾ?

ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯ ವಿಧಾನ ಸಭಾ ಚುನಾವಣೆಯ ಮೊದಲು ರೈತರಿಗೆ ನೀಡಿದ ಸಾನ ಮನ್ನಾ ಭರವಸೆಯನ್ನು ಮುಂದಾಗಿತ್ತು, ಅದರಂತೆ ಸಾಲ ಮನ್ನಾ ಒಂದು ವರ್ಷವಾದರೂ ಆಗದ ಕಾರಣ ಎಲ್ಲಡೆ ವಿರೋಧಗಳು ಕೇಳಿ ಬರುತ್ತಿದ್ದವು ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಕೂಡ ಬಂದಿದ್ದರಿಂದ ರಾಜ್ಯದ ಸಾವಿರಾರು ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿತ್ತು ಆದರೆ ಚುನಾವಣೆಯಲ್ಲಿ ಹಿನ್ನೆಡೆಯಾದ ಮೈತ್ರಿ ಈಗ ರೈತರ ಖಾತೆಗೆ ನೀಡಿದ ಹಣವನ್ನು ವಾಪಾಸ್ ಪಡೆದು ಯಾದಗಿರಿ ಜಿಲ್ಲೆಯಲ್ಲಿ ಸಾವಿರಾರು ರೈತರಿಗೆ ಸರ್ಕಾರ ಇಂಥದ್ದೊಂದು ಆಘಾತ ನೀಡಿದೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾವಿರಾರು ರೈತರ ಖಾತೆಗಳಿಗೆ ಸಾಲ ಮನ್ನಾ ಯೋಜನೆಯಡಿ ಸರ್ಕಾರದಿಂದ ಹಣ ಜಮೆಯಾಗಿತ್ತು. ಆದರೆ, ಚುನಾವಣೆ ಫಲಿತಾಂಶ ಘೋಷಣೆಯಾಗಿ ಹತ್ತು, ಹದಿನೈದು ದಿನ ಕಳೆಯುತ್ತಿದ್ದಂತೆ ರೈತರ ಖಾತೆಯಿಂದ ಜಮೆಯಾಗಿದ್ದ ಹಣವನ್ನು ಸದ್ದಿಲ್ಲದೆ ವಾಪಸ್‌ (ರಿಫಂಡ್‌) ಪಡೆಯಲಾಗಿದೆ. ಸಾಲ ಮನ್ನಾ ಆಗಿದೆ, ಬ್ಯಾಂಕ್‌ ಖಾತೆಗೆ ಸರ್ಕಾರ ಹಣ ಜಮೆ ಮಾಡಿದೆ ಎಂಬ ಖುಷಿಯಲ್ಲಿ ಮುಂಗಾರಿಗೂ ಮುನ್ನ ಖಾತೆಗಳ ನವೀಕರಣಕ್ಕಾಗಿ ರೈತರು ಬ್ಯಾಂಕುಗಳಿಗೆ ತೆರಳಿದಾಗಲೇ ಈ ‘ರಿಫಂಡ್‌’ ವ್ಯವಹಾರ ಬೆಳಕಿಗೆ ಬಂದಿದೆ.

Also read: ಮೈತ್ರಿ ಸರ್ಕಾರದ ಪತನದ ಸೂಚನೆ ನೀಡಿದ್ರಾ ಸಿಎಂ ಪುತ್ರ? ಮಧ್ಯಂತರ ಚುನಾವಣೆಗೆ ಈಗ್ಲೇ ಸಿದ್ಧರಾಗಿ ಎಂದು ಕಾರ್ಯಕರ್ತರ ಜೊತೆಯಲ್ಲಿ ಮಾತನಾಡಿದ ವಿಡಿಯೋ ವೈರಲ್

ಜಿಲ್ಲೆಯಲ್ಲಿ ಒಟ್ಟಾರೆ ಎಷ್ಟುಮಂದಿ ರೈತರ ಖಾತೆಯಿಂದ ಹಣ ವಾಪಸ್‌ ಪಡೆಯಲಾಗಿದೆ ಎನ್ನುವ ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ. ಒಂದು ಅಂದಾಜಿನ ಪ್ರಕಾರ, ಯಾದಗಿರಿ ಜಿಲ್ಲೆಯಲ್ಲಿನ ವಿವಿಧ ಬ್ಯಾಂಕುಗಳಲ್ಲಿ ಏನಿಲ್ಲವೆಂದರೂ ಸುಮಾರು 10 ಸಾವಿರದಷ್ಟುರೈತರ ಖಾತೆಗೆ ಹಣಹಾಕಿ ನಂತರ ವಾಪಸ್‌ ಪಡೆಯಲಾಗಿದೆ. ಶಹಾಪುರ, ಸಗರ, ಗೋಗಿ ಮುಂತಾದೆಡೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕುಗಳ ಶಾಖೆಗಳಲ್ಲಿ ಖಾತೆ ಹೊಂದಿರುವ ರೈತರಿಗೆ ಈ ‘ರಿಫಂಡ್‌’ ಆಘಾತಕ್ಕೆ ತುತ್ತಾಗಿದ್ದಾರೆ.

ಸಾಲ ಮನ್ನಾ ಘೋಷಣೆ ವೇಳೆ ಕೆಲ ಬ್ಯಾಂಕ್ ಗಳು ತಪ್ಪಾಗಿ ಫಲಾನುಭಿಗಳನ್ನು ಪಟ್ಟಿ ಮಾಡಿ ಕಳುಹಿಸಿದ ಪರಿಣಾಮ ಗೊಂದಲವಾಗಿದೆ ಎಂಬುದು ಲೀಡ್ ಬ್ಯಾಂಕ್ ಅಧಿಕಾರಿ ಹೇಳುತ್ತಾರೆ. ಆದರೆ ರೈತರು ಹೇಳುತ್ತಾರೆ ಸುಮಾರು 20 ಕೋಟಿ ರೂ. ಗಿಂತಲೂ ಹೆಚ್ಚು ವಾಪಸ್ ಹೋಗಿದೆ ಎನ್ನುತ್ತಾರೆ. ಎಲ್ಲೂ ತನಿಖೆ ನಡೆಸಿದ ಬಳಿಕವೇ ಗೊತ್ತಾಗಲಿದೆ.

Also read: ನಿಖಿಲ್ ಗೆ ವೋಟ್ ಹಾಕದ ಮಂಡ್ಯದ ಜನರ ಮೇಲೆ ದರ್ಪ ತೋರಿಸಿದ ಸಚಿವ ಡಿ.ಸಿ ತಮ್ಮಣ್ಣ..

ಮಾಹಿತಿ ನೀಡದ ಬ್ಯಾಂಕ್-ಗಳು;

ಬ್ಯಾಂಕ್‌ ಖಾತೆಗೆ ಜಮೆಯಾಗಿದ್ದ ಹಣ ಹಾಗೂ ವಾಪಸ್‌ ಹೋಗಿರುವ ಹಣದ ಬಗ್ಗೆ ವಿಚಾರಿಸಿದರೆ, ಬ್ಯಾಂಕುಗಳ ಸಿಬ್ಬಂದಿ ಸಮರ್ಪಕ ಉತ್ತರ ನೀಡುತ್ತಿಲ್ಲ. ಇದು ಗೌಪ್ಯ ಮಾಹಿತಿಯಾಗಿದ್ದರಿಂದ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿ ರೈತರನ್ನು ಸಾಗ ಹಾಕುತ್ತಿದ್ದಾರೆ. ಅಧಿಕಾರಿಗಳನ್ನು ವಿಚಾರಿಸಿದರೆ ಮೇಲಿನಿಂದ ಬಂದ ಆದೇಶದಂತೆ ಹಣ ವಾಪಸ್‌ ಪಡೆದಿದ್ದೇವೆ ಎನ್ನುತ್ತಾರೆ. ಹಾಗಿದ್ದರೆ ಚುನಾವಣೆ ಸಂದರ್ಭದಲ್ಲಿ ರೈತರ ಕಣ್ಣಿಗೆ ಮಣ್ಣೆರೆಚಲು ಸರ್ಕಾರ ಈ ರೀತಿಯ ತಂತ್ರ ಮಾಡಿತ್ತೇ ಎಂಬ ಅನುಮಾನ ಹುಟ್ಟಿಕೊಂಡಿದೆ ಎಂದು ರೈತರು ಆರೋಪಿಸಿ ಹೋರಾಟಕ್ಕೆ ಇಳಿದಿದ್ದಾರೆ.