ತುರ್ತು ಸಂದರ್ಭದಲ್ಲಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಎದುರಾಗಬಹುದು ಎಂಬ ನಿಟ್ಟಿನಲ್ಲಿ, ಅಗ್ನಿಶಾಮಕ ಈಗ ದ್ವಿಚಕ್ರ ವಾಹನದಲ್ಲಿ..

0
661

ಬೆಂಗಳೂರು ತನ್ನ ನೈಸರ್ಗಿಕ ಸೌಂದರ್ಯ, ಉದ್ಯಾನವನಗಳು, ಸ್ವಚ್ಛ ವಾತಾವರಣ, ಮೆಟ್ರೋ ರೈಲು, ಐಟಿ ಪಾರ್ಕ್ ಮತ್ತು ಕಂಪನಿಗಳಿಗೆ ಇತ್ಯಾದಿಗಳಿಗೆ ತುಂಬಾನೆ ಫೇಮಸ್, ಅಭಿವೃದ್ಧಿ ವಿಷಯದಲ್ಲಿ ಭಾರತದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಾನಗರ. ಗಾರ್ಡನ್ ಸಿಟಿ , ಸಿಲಿಕಾನ್ ಸಿಟಿ , ಐಟಿ ಹಬ್ ಅಂತಾನೆ ಸಾಕಷ್ಟು ಹೆಸರು ಮಾಡಿ, ಬೇರೆ ರಾಜ್ಯದವರು, ಇಂತಹ ಮಹಾನಗರ ನಮ್ಮ ರಾಜ್ಯದಲ್ಲಿ ಏಕಿಲ್ಲ ಎಂಬುವ ಮಟ್ಟಿಗೆ ಬೆಳೆದಿದೆ.

ಬೆಳಿಯುತ್ತಿರುವ ನಗರದ ಜೊತೆ-ಜೊತೆಗೆ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ದಿನದಿಂದ ದಿನ್ನಕ್ಕೆ ಮಿತಿ ಮೀರುತ್ತಿದೆ, ಎಷ್ಟು ದೊಡ್ಡ ರಸ್ತೆ ನಿರ್ಮಿಸಿದರು, ಬ್ರಿಡ್ಜ್ ಮತ್ತು ಫ್ಲೈ ಓವರ್ ಗಳನ್ನೂ ಕಟ್ಟಿಸಿದರು, ಮೆಟ್ರೋ ರೈಲಿನಿಂದಲೂ ಸಹ ಈ ಸಮಸ್ಯೆಯನ್ನು ಬಗೆಹರಿಸಲು ಸಾದ್ಯವಾಗುತ್ತಿಲ್ಲ, ಇದಕ್ಕೆ ಕಾರಣ ಹೆಚ್ಚುತ್ತಿರುವ ಖಾಸಗಿ ವಾಹನಗಳೆಂದು ದೂರಲಾಗುತ್ತಿದೆ.

ಇನ್ನು ಈ ಟ್ರಾಫಿಕ್-ನಲ್ಲಿ ಸಿಕ್ಕಿಕೊಂಡವರನ್ನು ದೇವರೇ ಕಾಪಾಡಬೇಕು, ಒಂದು ಅಧ್ಯಯನದ ಪ್ರಕಾರ ಬೆಂಗಳೂರಿನ ಸರಾಸರಿ ವಾಹನ ವೇಗ ಕೇವಲ 4 ಕಿ.ಮೀ ಪ್ರತಿ ಗಂಟೆಗಂತೆ ಇಂತಹ ಟ್ರಾಫಿಕ್ ನಲ್ಲಿ ಒಂದು ವೇಳೆ ತುರ್ತು ವಾಹನಗಳಾದ ಆಂಬುಲೆನ್ಸ್, ಅಗ್ನಿಶಾಮಕ ವಾಹನ ಇತ್ಯಾದಿ ಸಿಲುಕಿಕೊಂಡರೆ ಏನು ಗತಿ, ಆಂಬುಲೆನ್ಸ್-ಗಳು ಕಾಲಕ್ಕೆ ತಕ್ಕಂತೆ ಬದಲಾಗಿ ಟೆಂಪೋ-ಟ್ರಾವೆಲ್ಲರ್, ಚಿಕ್ಕ ವ್ಯಾನ್ ಮೂಲಕವೂ ಕಾರ್ಯ ನಿರ್ವಹಿಸುತ್ತಿವೆ.

ಆದರೆ ಅಗ್ನಿಶಾಮಕ ವಾಹನಕ್ಕೆ ತುಂಬ ದೊಡ್ಡ ಸ್ಥಳ ಬೇಕು ಅದಲ್ಲದೆ ಇದು ಚಿಕ್ಕ ರಸ್ತೆಯಲ್ಲಿ ಹೋಗಲು ಸಾಧ್ಯವಿಲ್ಲ, ಇನ್ನು ಟ್ರಾಫಿಕ್-ನಲ್ಲಿ ಇದು ಸುಲಭವಾಗಿ ನುಸುಳಿ ತುರ್ತು ಸಂದರ್ಭಗಳಿರುವ ಸ್ಥಳಕ್ಕೆ ತಲುಪುವುದು ತುಂಬ ಕಠಿಣ. ಈ ಸಮಸ್ಯೆಯನ್ನು ಮನಗಂಡ ಕರ್ನಾಟಕ ಅಗ್ನಿಶಾಮಕ ಇಲಾಖೆ ಒಂದು ಉಪಾಯವನ್ನು ಕಂಡುಹಿಡಿದಿದೆ, ಇದು ಜಾರಿಯಾದರೆ ಇನ್ನು ಗಲ್ಲಿ-ಗಲ್ಲಿಗಳಲ್ಲಿ ಅಗ್ನಿಶಾಮಕ ವಾಹನ ಸಂಚರಿಸಬಹುದು, ಅದೇನು ಉಪಾಯ ಅಂತ ಮುಂದೆ ನೋಡಿ.

ಕರ್ನಾಟಕ ಅಗ್ನಿಶಾಮಕ ಇಲಾಖೆಯು ತನ್ನ ಸಂಪ್ರಧಾಯಿಕ ಹಳೆಯ ಅಗ್ನಿಶಾಮಕ ವಾಹನದ ಬದಲಾಗಿ ಅಗ್ನಿಶಾಮಕ ಉಪಕರಣಗಳು ಹೊಂದಿರುವ ಹೊಸ ಜೀಪ್, ಟೆಂಪೋ-ಟ್ರಾವೆಲ್ಲರ್ ಮತ್ತು ರಾಯಲ್ ಏನ್-ಫೀಲ್ಡ್ ಬುಲೆಟ್ ಗಾಡಿಯನ್ನು ಬಳಸಲು ನಿರ್ಧರಿಸಿದೆ, ಈ ಕುರಿತು ಬಿಬಿಎಂಪಿ ಗೆ ತಿಳಿಸಿದೆ ಹಾಗು ಈ ವಾಹನಗಳನ್ನು ಪಡೆಯಲು ಟೆಂಡರ್ ಕರೆಯುವುದಾಗಿಯೂ ಹೇಳಿದೆ. ಅದಲ್ಲದೆ 2 ಕಿ.ಮೀ ಸುತ್ತಳತೆಯಲ್ಲಿ ಇಂತಹ ವಾಹನಗಳಿರುವ ಕಚೇರಿಯನ್ನು ನಿರ್ಮಿಸಲು ಕ್ರಮಕೈಗೊಳ್ಳುತ್ತಿದೆ.

ಒಟ್ಟಿನಲ್ಲಿ ಈ ವಾಹನಗಳು ಬೇಗನೆ ರಸ್ತೆಗಿಳಿದು ತುರ್ತು ಸಂದರ್ಭಗಳಲ್ಲಿ ಬೇಗನೆ ತಲುಪಿ ನೆರವಾಗಲಿ ಎಂಬುದೇ ನಮ್ಮ ಆಶಯ…!