ಕನ್ನಡ ಧ್ವಜ ಇಂದು ಹುಟ್ಟಿದ್ದಲ್ಲ, ಅದರ ಇತಿಹಾಸ ಕೇಳಿ ಕನ್ನಡಿಗರಿಗೆ ಇದು ಮುಖ್ಯ ಇದ್ಯೋ ಇಲ್ವೋ ನೀವೇ ನಿರ್ಧಾರ ಮಾಡಿ…!

0
1128

ಕನ್ನಡ ಧ್ವಜದ ಬಗ್ಗೆ ಭಾರಿ ಸುದ್ದಿಯಾಗುತ್ತಿದೆ. ಆದರೆ ಈ ಕನ್ನಡ ಬಾವುಟ ಹುಟ್ಟಿಕೊಂಡಿದ್ದು ಹೇಗೆ ಅನ್ನೋದು ಇಲ್ಲಿದೆ ನೋಡಿ.

ಕನ್ನಡ ಧ್ವಜ ಹುಟ್ಟಿದ್ದು ಒಂದು ಪ್ರಾದೇಶಿಕ ಪಕ್ಷ ಈ ಧ್ವಜವನ್ನು ಬೆಳಕಿಗೆ ತಂದಿದ್ದು. ಹೌದು ನಮ್ಮ ನಾಡು, ನಮ್ಮ ಜಲ, ನಮ್ಮ ಭಾಷೆ ,ಮತ್ತು ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ನಾಡಿನ ಹಿರಿಯರು ತಮ್ಮ ಒಂದು ಪ್ರಾದೇಶಿಕ ಪಕ್ಷವಾಗಿ ಈ ವಿಚಾರಗಳನ್ನು ಒಂದು ಅಜೆಂಡಾ ಮಾಡಿಕೊಂಡು. ನಮ್ಮ ನಾಡನ್ನು ಕಾಪಾಡಲು ಕನ್ನಡ ಪಕ್ಷ ತನ್ನ ಪಕ್ಷದ ಗುರುತಾಗಿ ಈ ಕನ್ನಡ ಬಾವುಟವನ್ನು ಮಾಡಿಕೊಂಡಿದ್ದರು.

ಈ ಕನ್ನಡ ಪಕ್ಷವನ್ನು ಸ್ಥಾಪನೆ ಮಾಡಿದ್ದು. ಮ.ರಾಮ ಮೂರ್ತಿಗಳು , ಸಂಸ್ಥಾಪಕ ಅಧ್ಯಕ್ಷರು. ನಂತರ ಹಲುವು ಹಿರಿಯರು ಈ ಪಕ್ಷವನ್ನು ಕಟ್ಟಿ ಬೆಳಸಿದ್ದರು. ಅ.ನ.ಕೃಷ್ಣಮೂರ್ತಿ,ತ.ರಾ.ಸು, ಜಗದೀಶ್ ರೆಡ್ಡಿ ನಾಡಿಗೆರೆ ,ಕೃಷ್ಣ ರಾವ್ ಮತ್ತಿಘಟ್ಟ, ಕೃಷ್ಣ ಮೂರ್ತಿ, ಚಂದ್ರಮೌಳಿ, ಎಂ.ಎಸ್. ,ಪುರುಷೋತ್ತಮ. ಪಿ. ಇಂತಹ ದಿಗ್ಗಜರು ಕಟ್ಟಿ ಬೆಳಸಿದಂತಹ ಒಂದು ಕನ್ನಡ ಪಕ್ಷ.

ಕನ್ನಡ ಪಕ್ಷ ,ಕರ್ನಾಟಕದ ಪ್ರಥಮ ಪ್ರಾದೇಶಿಕ ಪಕ್ಷ ಮತ್ತು ನಮ್ಮ ಕನ್ನಡದ ಬಾವುಟವು, ಕನ್ನಡ ಪಕ್ಷದ ಅದಿಕೃತ ದ್ವಜವಾಗಿತ್ತು. ಕನ್ನಡ ಪಕ್ಷದ ಸಂಸ್ಥಾಪಕ ಅಧ್ಯಕ್ಷರು ಆದ ,ಕನ್ನಡದ ವೀರ ಸೇನಾನಿ ದಿ||ಮ.ರಾಮಮೂರ್ತಿ ಗಳು ಈ ಪಕ್ಷವನ್ನು ೧೯೬೭ಸ್ಥಾಪನೆ ಮಾಡಿದ್ದರು.

ಕನ್ನಡ ಬಾವುಟದಲ್ಲಿರುವ ಕೆಂಪು ಮತ್ತು ಹಳದಿಯ ಬಣ್ಣವು ಒಂದು ಸಂಸ್ಕೃತಿಯ ಸಂಕೇತವಾಗಿದೆ. ಕೆಂಪು ಬಣ್ಣವನ್ನ ಕುಂಕುಮ ಎಂದು ನಂಬಿಕೆ ಇದೆ ಅದೇ ರೀತಿ ಹಳದಿಗೆ ಅರಿಶಿನ ಅನ್ನೋ ನಂಬಿಕೆ ಇದೆ. ನಮ್ಮ ನಾಡು ಸಂಸ್ಕೃತಿಗಳ ನಾಡು ಆಗಿರುವುದರಿಂದ ಇಂತಹ ವಿಚಾರಗಳ ಬಗ್ಗೆ ಹೆಚ್ಚು ನಮ್ಮ ಅಭಿಮಾನ ಪ್ರೀತಿ ಕಂಡುಬರುತ್ತದೆ.

ಆದ್ರೆ ಇಂತಹ ವಿಚಾರಗಳನ್ನು ರಾಜಕೀಯ ಮಾಡುತ್ತಿರುವುದೇ ವಿಪರ್ಯಾಸ. ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಇಂತಹ ವಿಚಾರಗಳನ್ನು ಬಳಸಿಕೊಳ್ಳುತ್ತಿವೆ. ನಮ್ಮ ಸರ್ಕಾರಕ್ಕೂ ಈ ವಿಚಾರ ರಾಜಕೀಯವಾಗಿದೆ ಅಂದ್ರೆ ತಪ್ಪಿಲ್ಲ ಅನ್ಸುತ್ತೆ. ಕನ್ನಡ ಬಾವುಟ ಈಗಾಗಲೇ ಇದ್ದು ಅದನ್ನು ಮತ್ತೆ ರಾಜಕೀಯ ಬಣ್ಣ ಬಳಿಯುವುದು ಅಷ್ಟು ಸರಿಯಲ್ಲ. ಇದರಿಂದ ಯಾವುದೇ ಪ್ರಯೋಜನವಾಗಲ್ಲ.