7 ವರ್ಷದ ಈ ಹುಡುಗಿ ರಾಜ್ಯಕ್ಕೆ ಹೆಮ್ಮೆ ತರುವಂತಹ ಕೆಲಸ ಮಾಡುತ್ತಿದ್ದಾಳೆ, ಆಕೆಯ ಕೆಲಸ ತಿಳಿದರೆ ಅಚ್ಚರಿ ಪಡುತ್ತೀರ…

0
949

ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳು, ಅಭಿಯಾನಗಳು ಕೇವಲ ಯುವಕರಿಗೆ, ವೃದ್ಧರಿಗೆ ಮಾತ್ರವಲ್ಲ ಚಿಕ್ಕ ಮಕ್ಕಳನ್ನು ತಲುಪುತ್ತಿದೆ ಎಂಬುದಕ್ಕೆ ಈ 7 ವರ್ಷದ ಬಾಲಕಿಯೇ ಸಾಕ್ಷಿ, ತಮ್ಮ ಭಾಷಣದ ಮೂಲಕ ಎಲ್ಲರನ್ನು ಮೋಡಿ ಮಾಡುವ ಪ್ರಧಾನಿ ಮೋದಿಯವರಂತೆ ಅವರ ಒಬ್ಬ ಪುಟ್ಟ ಅನುಯಯೀ ಕೂಡ ತನ್ನ ಭಾಷಣ ಮತ್ತು ಮಾತುಗಾರಿಕೆ ಮೂಲಕ ಒಂದು ಊರಿನ ಜನರನ್ನು ತಿದ್ದುತ್ತಿದ್ದಾಳೆ, ಅಷ್ಟಕ್ಕೂ ಆ ಅಭಿಯಾನವಾದ್ರೂ ಯಾವುದು, ಯಾರು ಆ ಬಾಲಕಿ ಎಂಬ ನಿಮ್ಮಲ್ಲ ಪ್ರಶ್ನೆಯ ಉತ್ತರಕ್ಕಾಗಿ ಮುಂದೆ ಓದಿ.

ಆ 7 ವರ್ಷದ ಹುಡುಗಿಯ ಹೆಸರು ಪೃಥ್ವಿ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ನಿವಾಸಿ ಹಾಗು ನಾಲ್ಕನೇ ತರಗತಿ ಶಾಲಾ ವಿದ್ಯಾರ್ಥಿ. ಒಂದು ದಿನ ಪೃಥ್ವಿ ಹಾಗು ಅವರ ಮನೆಯವರು ಊರಿಗೆ ಹೋಗುವ ಇವರ ವಾಹನದ ಲೈಟ್ ನೋಡಿ ಬಯಲು ಶೌಚಕ್ಕೆ ಕುಳಿತಿದ್ದ ಮಹಿಳೆಯರು ಎದ್ದು ನಿಂತರಂತೆ, ಇದನ್ನು ಗಮನಿಸಿದ ಪೃಥ್ವಿ ತಾಯಿ ಅನಿತಾರನ್ನು ಕುತೂಹಲದಿಂದ ಅಮ್ಮ ಅವರು ಯಾಕೆ ರಸ್ತೆ ಬದಿಯಲ್ಲಿ ಕುಳಿತ್ತಿದ್ದಾರೆ, ನಮ್ಮನ್ನು ನೋಡಿ ಯಾಕೆ ಎದ್ದು ನಿಲ್ಲುತ್ತಿದ್ದಾರೆ ಎಂದು ಕೇಳಿದಳಂತೆ, ಆಗ ಅವಳ ತಾಯಿ ಅವರ ಮನೆಯಲ್ಲಿ ಶೌಚಾಲಯವಿಲ್ಲ ಅದಕ್ಕೆ ಅವರು ಇಲ್ಲಿ ಬರುತ್ತಾರೆ ಎಂದು ಹೇಳಿದರಂತೆ, ಈ ಘಟನೆ ಅವಳ ಮನಸ್ಸಿನಲ್ಲಿ ಹಾಗೆ ಕುಳಿತ್ತಿತ್ತಂತೆ.

ಸ್ವಚ್ಛಭಾರತ ಅಭಿಯಾನದ ಬಗ್ಗೆ ಮಾಹಿತಿ ಪಡೆದು, ಎಲ್ಲರಿಗು ಇದರ ಮಹತ್ವ ತಿಳಿಸಬೇಕು, ಬಯಲಿನಲ್ಲಿ ಶೌಚ ಮಾಡಿದರೆ ಏನೆಲ್ಲ ಕಾಯಿಲೆ ಬರುತ್ತವೆ, ಶೌಚಾಲಯ ಕಟ್ಟಿಸಿ ಅದನ್ನು ಉಪಯೋಗಿಸಿದರೆ ಏನು ಉಪಯೋಗವಾಗುತ್ತದೆ ಎಂದು ಜನರಿಗೆ ಮನದಟ್ಟು ಮಾಡಬೇಕು ಅನಿಸಿತಂತೆ, ಚಿಕ್ಕ ವಯಸಿನ್ನಲೇ ಜನರಿಗೆ ತಿಳುವಳಿಕೆ ನೀಡಬೇಕು ಎಂಬ ಪೃಥ್ವಿಯ ಈ ಅಭಿಯಾನಕ್ಕೆ ತಾಯಿ ಅನಿತಾ ಹಾಗೂ ಮಾವ ಜಗದೀಶ್ ಜೊತೆಗೂಡಿ ಸಹಾಯ ಮಾಡುತ್ತಿದ್ದಾರಂತೆ.

ಈಗ ಈ ಚಿಕ್ಕ ಹುಡುಗಿ, ಸ್ವಚ್ಛ ಭಾರತದ ಅಭಿಯಾನದ ಅಡಿಯಲ್ಲಿ ಬರುವ ಎಲ್ಲಾ ಯೋಜನೆಗಳು, ಶೌಚಾಲಯ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಅನುದಾನದ ಬಗ್ಗೆ ಊರಿನ ಎಲ್ಲ ವಯೋಮಾನದವರನ್ನು ಕೂಡಿಸಿ ಪಾಠ ಹೇಳುತ್ತಿದ್ದಳಂತೆ, ಜನರು ಈ ಪುಟ್ಟ ಬಾಲಕಿ ಹೇಳುವ ಪಾಠದಿಂದ ಪರಿವರ್ತನೆಯಾಗುತ್ತಿದ್ದಾರಂತೆ, ಇವಳ ಈ ಕಾರ್ಯಕ್ಕೆ ಗ್ರಾಮ ಪಂಚಾಯ್ತಿ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಚಿಕ್ಕ ವಯಸಿನ್ನಲೇ ಇಂತಹ ಚಿಂತನೆ ಇರುವ ಈ ಹುಡುಗಿ ರಾಜ್ಯಕ್ಕೆ ಹೆಮ್ಮೆ ತರುವಂತಹ ಕೆಲಸ ಮಾಡುತ್ತಿದ್ದಾಳೆ ಅಲ್ಲವೇ…!