ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರದಿಂದ ಬಿಸಿತುಪ್ಪ; ಜಯಂತಿಗೆ ರಜೆ ರದ್ದು ಮಾಡಿದ ಮೈತ್ರಿ ನಾಲ್ಕನೇ ಶನಿವಾರ ರಜೆ ಘೋಷಣೆ..

0
432

ಮೈತ್ರಿ ಸರ್ಕಾರದಿಂದ ರಾಜ್ಯ ಸರ್ಕಾರಿ ನೌಕರಿಗೆ ಒಂದಿಲ್ಲದೊಂದು ಸಿಹಿಸುದ್ದಿ ಕೇಳಿಬರುತ್ತಿದ್ದು ವೇತನಕ್ಕೆ ಸಂಬಂಧಪಟ್ಟಂತೆ ಹಲವು ಬಂಪರ್ ನೀಡಿದ ಸರ್ಕಾರ ಈಗ ರಜೆಯಲ್ಲಿ ಬದಲಾವಣೆ ಮಾಡಿ ನೌಕರರಿಗೆ ಸಿಹಿ-ಕಹಿ ರೀತಿಯಲ್ಲಿ ಆದೇಶ ಹೊರಡಿಸಿದ ದೋಸ್ತಿ ಸರ್ಕಾರ ಸರಕಾರಿ ನೌಕರರ ಬಹುದಿನಗಳ ಈ ಬೇಡಿಕೆಯನ್ನು ಈಡೇರಿಸಿ ನಾಲ್ಕನೇ ಶನಿವಾರ ಸಾರ್ವತ್ರಿಕ ರಜೆ ಎಂದು ಘೋಷಣೆ ಮಾಡಲಾಗಿದೆ.

ಹೌದು ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡಲಾಗಿದೆಯಾದರೂ 8 ರಜೆಗಳಿಗೆ ಕತ್ತರಿ ಹಾಕಿದೆ. 3 ಸಾಂದರ್ಭಿಕ ರಜೆ ಹಾಗೂ 5 ವಿವಿಧ ಜಯಂತಿ ಆಚರಣೆಯ ರಜೆಗಳನ್ನು ರದ್ದು ಮಾಡಿದೆ. ಬೇಕಾಬಿಟ್ಟಿ ರಜೆಗಳನ್ನು ಕಡಿತ ಮಾಡಲಾಗಿದೆ. ಇನ್ನು ಮುಂದೆ ಜಯಂತಿ ಗಳಿಗೆ ರಜೆ ಇಲ್ಲ. ಈ ಮೂಲಕ ಬಸವ ಜಯಂತಿ, ಕನಕ ಜಯಂತಿ, ವಾಲ್ಮೀಕಿ ಜಯಂತಿ ಸೇರಿದಂತೆ ಹಲವು ಜಯಂತಿಗಳಿಗೆ ಕತ್ತರಿ ಹಾಕಲಾಗಿದೆ. ಈ ಆದೇಶ ಮುಂದಿನ ವರ್ಷದಿಂದ ಜಾರಿಗೆ ಬರಲಿದೆ.

ಆಯೋಗದ ವರದಿಯಲ್ಲಿ ಏನಿದೆ?

ಸರಕಾರವು ಪ್ರತಿ ತಿಂಗಳು ಒಂದು ಹೆಚ್ಚುವರಿ ಶನಿವಾರವನ್ನು (2ನೇ ಶನಿವಾರವಲ್ಲದೇ) ಸಾರ್ವತ್ರಿಕ ರಜೆಯೆಂದು ಘೋಷಿಸಲು ಸಾಧ್ಯವಿದೆ ಎಂದು ಆರನೇ ವೇತನ ಆಯೋಗದ ವರದಿಯ 2ನೇ ಸಂಪುಟದಲ್ಲಿ ಪ್ರಸ್ತಾಪಿಸಲಾಗಿತ್ತು. ಸಾಂಪ್ರದಾಯಿಕವಾಗಿ ಎರಡನೇ ಶನಿವಾರ ಸಾರ್ವತ್ರಿಕ ರಜೆ ದಿನವಾಗಿದ್ದು, ಬ್ಯಾಂಕ್‌ಗಳಿಗೆ 4ನೇ ಶನಿವಾರ ಸಹ ರಜೆ ದಿನವಾಗಿದೆ. ಹಾಗಾಗಿ, 4ನೇ ಶನಿವಾರವನ್ನು ರಜೆ ದಿನವಾಗಿ ಘೋಷಿಸಿದರೆ ಸರಕಾರಿ ನೌಕರರಿಗೆ ಒಂದು ತಿಂಗಳಲ್ಲಿ ಐದು ದಿನಗಳ ಎರಡು ವಾರಾಂತ್ಯಗಳು ದೊರೆಯಲಿವೆ. ನೌಕರರು ತಮ್ಮ ಖಾಸಗಿ ಮತ್ತು ಕೌಟುಂಬಿಕ ಕರ್ತವ್ಯಗಳನ್ನು ನಿರ್ವಹಣೆ ಮಾಡಲು ಸಹ ಅನುಕೂಲವಾಗಲಿದೆ. ಇದರಿಂದ ಸಾರ್ವತ್ರಿಕ ರಜೆ ಮತ್ತು ಸಾಂದರ್ಭಿಕ ರಜೆಗಳಿಗೆ ಕಡಿವಾಣ ಬೀಳಲಿದ್ದು, ನೌಕರರ ತೃಪ್ತಿಯ ಮಟ್ಟ ಸಹ ಹೆಚ್ಚಲಿದೆ. ನೌಕರರ ಕಾರ್ಯಕ್ಷಮತೆಯಲ್ಲೂ ಸಕಾರಾತ್ಮಕ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಸರ್ಕಾರಿ ರಜೆಗಳಿಗೆ ಬ್ರೇಕ್‌ ಹಾಕಲಿದೆ ಸರ್ಕಾರ

ಪ್ರತಿ ವರ್ಷದ ಕರ್ತವ್ಯದ ದಿನಗಳ ಸಂಖ್ಯೆಯಲ್ಲಿ ಯಾವುದೇ ಗಣನೀಯ ಇಳಿಕೆ ಇಲ್ಲದೆ ಸರ್ಕಾರಿ ನೌಕರರಿಗೆ ಒಂದು ತಿಂಗಳಿನಲ್ಲಿ ಎರಡು ದಿನಗಳ ಎರಡು ವಾರಾಂತ್ಯಗಳು ದೊರೆಯಲಿದ್ದು, ತಮ್ಮ ಖಾಸಗಿ/ಕೌಟುಂಬಿಕ ಕರ್ತವ್ಯಗಳ ನಿರ್ವಹಣೆಗೆ ಅವಕಾಶ ಸಿಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅದರಂತೆ ಜಯಂತಿಗಳ ರಜೆಯನ್ನು ಹಿಂಪಡೆದು ಬದಲಿಗೆ ಆಯಾ ಮಹಾನ್ ವ್ಯಕ್ತಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುವಂತೆ ಸೂಚನೆ ನೀಡದ್ದು ಈಗಾಗಲೇ ರಜೆಯ ಕತ್ತರಿ ಹಾಕಲು ಸಿಎಂ ಅನುಮೋದಿಸಿದ್ದಾರೆ.

ಯಾವ ಯಾವ ಜಯಂತಿಗೆ ರಜೆ ರದ್ದು?

ಕನಕ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿ, ಮಹಾವೀರ ಜಯಂತಿ, ಮಹಾಲಯ ಅಮಾವಾಸ್ಯೆ, ಈದ್ ಮಿಲಾದ್, ಗುಡ್ ಫ್ರೈಡೇ, ಕಾರ್ಮಿಕ ದಿನಾಚರಣೆ ರದ್ದುಪಡಿಸಿ ಅವುಗಳನ್ನು ಕೆಲಸದ ದಿನಗಳನ್ನಾಗಿ ಪರಿವರ್ತಿಸುವುದು. ದೀಪಾವಳಿ ಹಬ್ಬದ ನಿಮಿತ್ತ ನೀಡುವ ರಜೆಗಳಲ್ಲಿ 1ನೇ ಮತ್ತು 3ನೇ ದಿನ ನೀಡುವ ಬದಲು 1ನೇ ಮತ್ತು 2ನೇ ದಿನ ನೀಡಲು ನಿರ್ಧರಿಸಲಾಗಿದೆ.

Also read: ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿದ ತವರು ಜಿಲ್ಲೆ ಹಾಸನಕ್ಕೆ ‘ನೋ ಫ್ರಿಲ್ಸ್‌’ ವಿಮಾನ ನಿಲ್ದಾಣ, ನೀರಾವರಿ ಕಾಮಗಾರಿ ಕೈಗೊಂಡ ದೋಸ್ತಿ ಸರ್ಕಾರ..