ಓಲಾ ಮೇಲೆ ಸಾರಿಗೆ ನಿಯಮ ಉಲ್ಲಂಘಿಸಿದ ಆರೋಪ; ರಾಜ್ಯದಲ್ಲಿ ಇಂದಿನಿಂದ OLA ಕ್ಯಾಬ್ ಸೇವೆಗೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ..

0
293

ಹಲವು ವರ್ಷಗಳಿಂದ ತನ್ನದೇ ಹವಾ ಸೃಷ್ಟಿಸಿದ OLA ಪ್ರಯಾಣಿಕರ ಮೆಚ್ಚಿನ ಕ್ಯಾಬ್ ಆಗಿತ್ತು, ನಗರದ ಯಾವುದೇ ಪ್ರಯಾಣವಿದ್ದರು ಸಹ ಓಲಾ ಬಂದ ಮೇಲೆ ಎಲ್ಲವು ಸುಲಭವಾಗಿತ್ತು. ಮತ್ತು ಪ್ರಯಾಣಿಕರಿಗೆ ಚಾರ್ಜ್ ಕೂಡ ತಕ್ಕಷ್ಟು ಇತ್ತು. ಇದೆಲ್ಲ ಕಾರಣಗಳಿಂದ ಹೆಸರು ಮಾಡಿದ OLA ತಾನು ಬೆಳೆಯುತ್ತಿದಂತೆ ನಿಯಮವನ್ನೇ ಗಾಳಿಗೆ ತೂರಿ ತನ್ನ ಇಚ್ಚೆಯಂತೆ ಮೆರೆಯುತ್ತಿದ ವಿಷಯ ಅರಿತ ಸಾರಿಗೆ ಇಲಾಖೆ. OLA ನಿಯಮ ಉಲ್ಲಂಘಿಸಿದ ಆರೋಪ ಮೇಲೆ ನಿಷೇಧ ಹೇರಲಾಗಿದೆ.

Also read: ಕಡೆಗೂ ಕ್ರಿಕೆಟಿಗರು ರಾಜಕೀಯ ಪ್ರವೇಶ; ಅಧಿಕೃತವಾಗಿ ಬಿಜೆಪಿಗೆ ಸೇರಿದ ಗೌತಮ್ ಗಂಭೀರ್ ನವದೆಹಲಿ ಕ್ಷೇತ್ರದಿಂದ ಚುನಾವಣೆಗೆ ಅಕಾಡಕ್ಕೆ

ಹೌದು ಬೆಂಗಳೂರಿನಲ್ಲಿ ಅಕ್ರಮವಾಗಿ ಬೈಕ್‌ ಟ್ಯಾಕ್ಸಿ ಸೇವೆ ಆರಂಭಿಸಿದ್ದ ‘ಓಲಾ’ ಕಂಪನಿಗೆ ಬುದ್ದಿ ಕಲಿಸಲು ಸಾರಿಗೆ ಇಲಾಖೆ, ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ನೀಡಲು ರಾಜ್ಯ ಸಾರಿಗೆ ಪ್ರಾಧಿಕಾರದಿಂದ (ಆರ್‌ಟಿಒ) ಅದು ಪಡೆದಿದ್ದ ಅಗ್ರಿಗೇಟ​ರ್ಸ್ ಪರವಾನಗಿಯನ್ನು ಆರು ತಿಂಗಳ ಕಾಲ ಅಮಾನುತುಗೊಳಿಸಿದೆ. ಹೀಗಾಗಿ ಇಂದಿನಿಂದಲೇ ರಾಜ್ಯಾದ್ಯಂತ ಓಲಾ ಕ್ಯಾಬ್‌, ಆಟೋ ಸೇವೆ ಬಂದ್‌ ಆಗಲಿದೆ.

ಏನಿದು OLA ಗೋಳು?

ಕರ್ನಾಟಕ ಮೋಟಾರ್ ವಾಹನ ನಿಯಮಾವಳಿಗಳನ್ನು ಗಾಳಿಗೆ ತೂರಿ ಪ್ರತಿ ತಿಂಗಳು ನೂರಾರು ಕೋಟಿ ವ್ಯವಹಾರ ನಡೆಸುತ್ತಿರುವ ಓಲಾ ಸಂಸ್ಥೆಯು 02-04-2016ರಿಂದ ಜಾರಿಗೆ ಬರುವಂತೆ ಅನಿ ಟೆಕ್ನಾಲಜಿಸ್ ಪ್ರೈ. ಲಿಮಿಟೆಡ್(ಓಲಾ) ಸಂಸ್ಥೆಯು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಿಗಾಗಿ ಸಾರಿಗೆ ಇಲಾಖೆಯಿಂದ ಅನುಮತಿ ಪಡೆದಿತ್ತು. ಅದರನ್ವಯ ಅಕ್ರಮವಾಗಿ ಟ್ಯಾಕ್ಸಿ ಸೇವೆಗಳನ್ನು ನೀಡುತ್ತಿದ್ದು, ಕಾನೂನು ಬಾಹಿರವಾಗಿ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದೆ. ಹೀಗಾಗಿ ಬರೋಬ್ಬರಿ ಆರು ತಿಂಗಳು ಕಾಲ ಓಲಾ ಸೇವೆಗಳನ್ನು
ನಿಷೇಧಗೊಳಿಸಿರುವ ಸಾರಿಗೆ ಇಲಾಖೆಯು ತತಕ್ಷಣದಿಂದಲೇ ಆದೇಶ ಜಾರಿಗೆ ಬರುವಂತೆ ಸುತ್ತೋಲೆ ಹೊರಡಿಸಿದೆ.

Also read: ಬೆಂಗಳೂರಿನ ಪ್ರತಿಷ್ಠಿತ ಮಳಿಗೆಗಳ ಮೇಲೆ ಬಿಬಿಎಂಪಿ ಅಧಿಕಾರಿಗಳ ದಾಳಿ; ಸಾವಿರಾರು ಕೆಜಿ ಪ್ಲಾಸ್ಟಿಕ್ ವಶ, ಲಕ್ಷಾಂತರ ದಂಡ ವಸೂಲಿ..

ಓಲಾ ಸಂಸ್ಥೆ ನಿಗದಿಗಿಂತ ದುಪ್ಪಟ್ಟು ದರ ಸುಲಿಗೆ ಮಾಡುವುದೂ ಸೇರಿದಂತೆ ಅನೇಕ ದೂರುಗಳು ಓಲಾ ವಿರುದ್ಧ ಕೇಳಿಬಂದಿದ್ದವು. ಹಾಗೆಯೇ ಅನುಮತಿ ಇಲ್ಲದಿದ್ದರೂ ಓಲಾದಿಂದ ದ್ವಿಚಕ್ರ ಸೇವೆ ನಡೆಯುತ್ತಿದ್ದುದೂ ಸಾರಿಗೆ ನಿಯಮಗಳ ಉಲ್ಲಂಘನೆಯಾಗಿತ್ತು. ಈ ಸಂಬಂಧ ಒಂದು ವಾರದೊಳಗೆ ವಿವರಣೆ ನೀಡಬೇಕೆಂದು ಸಾರಿಗೆ ಇಲಾಖೆ ಫೆ. 15ರಂದು ನೋಟೀಸ್ ಕೂಡ ನೀಡಿತ್ತು. ಇದಕ್ಕೆ ಓಲಾ ಸಂಸ್ಥೆ ನೀಡಿದ ವಿವರಣೆ ಸಮಪರ್ಕವಾಗಿಲ್ಲವೆಂದು ಈ ಕ್ರಮ ಕೈಗೊಂಡಿದೆ.

ನಿಯಮ ಮಿರಿ ಕೋಟಿ ಕೋಟಿ ಹಣ?

2010ರಲ್ಲಿ ಕೇವಲ ರೂ.10 ಕೋಟಿ ಬಂಡವಾಳದೊಂದಿಗೆ ಆರಂಭವಾಗಿದ್ದ ಓಲಾ ಸಂಸ್ಥೆಯು ಸದ್ಯದ ಮಾರುಕಟ್ಟೆಯ ಮೌಲ್ಯದ ಪ್ರಕಾರ ರೂ. 29 ಸಾವಿರ ಕೋಟಿಯಷ್ಟು ಬೆಲೆಬಾಳುವ ದೇಶದ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದ್ದು, ರೂ. 758 ಕೋಟಿ ವಾರ್ಷಿಕ ಆದಾಯವನ್ನು ಅಧಿಕೃತವಾಗಿ ಘೋಷಣೆ ಮಾಡಿಕೊಂಡಿತ್ತು. ಆದ್ರೆ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಕೋಟಿ ಕೋಟಿ ಸಂಪಾದನೆ ಮಾಡಲು ಹೋದ ಓಲಾ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ಇದನ್ನೇ ನಂಬಿಕೊಂಡಿರುವ ಸಾವಿರಾರು ಕ್ಯಾಬ್ ಚಾಲಕನ ಜೀವನ ಅತಂತ್ರವಾಗಿದೆ.

40 ಸಾವಿರ OLA ಕ್ಯಾಬ್ ಚಾಲಕರು ಬೀದಿಗೆ?

Also read: ಮತ್ತೆ ಭಾರತದ ತಂಟೆಗೆ ಹೋದ್ರೆ ಪರಿಣಾಮ ನೆಟ್ಟಗಿರಲ್ಲ; ಪಾಕಿಸ್ತಾನಕ್ಕೆ ಅಮೆರಿಕದಿಂದ ಮತ್ತೊಂದು ಎಚ್ಚರಿಕೆ..

ಓಲಾ ಸಂಸ್ಥೆ ಚಾಲಕರ ಭವಿಷ್ಯದ ಬಗ್ಗೆ ಯೋಚಿಸದೇ ಮಾಡಿದ ತಪ್ಪಿನಿಂದ ಚಾಲಕರ ಸ್ಥಿತಿ ಅತಂತ್ರವಾಗಿದೆ. ನಗರದಲ್ಲಿ ಸುಮಾರು 40 ಸಾವಿರ ಚಾಲಕರು ಓಲಾ ಸಂಸ್ಥೆಯ ಪಾಲುದಾರರಾಗಿ ಕ್ಯಾಬ್‌ ಸೇವೆ ನೀಡುತ್ತಿದ್ದಾರೆ. ಬ್ಯಾಂಕ್‌, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಕಾರುಗಳನ್ನು ಖರೀದಿಸಿ, ಸಂಸ್ಥೆ ಜೊತೆಗೂಡಿ ಜೀವನ ದೂಡುತ್ತಿದ್ದಾರೆ. ಇದೀಗ ಆರು ತಿಂಗಳು ಕ್ಯಾಬ್‌ ಸೇವೆ ಸ್ಥಗಿತಗೊಳಿಸದರೆ ಚಾಲಕರು ಏನು ಮಾಡಬೇಕು? ಇನ್ನು ಮೂರು ದಿನಗಳ ವರೆಗೆ ಕಾದು ನೋಡುತ್ತೇವೆ. ಅಷ್ಟರಲ್ಲಿ ಓಲಾ ಸಂಸ್ಥೆ ಏನು ಕ್ರಮ ಕೈಗೊಳ್ಳಲಿದೆ ಎಂಬುದು ಗೊತ್ತಾಗುತ್ತದೆ. ನಂತರ ಚಾಲಕರ ಮುಂದಿನ ನಡೆ ಬಗ್ಗೆ ಚರ್ಚಿಸಲಿದ್ದೇವೆ ಎಂದು ಜೈ ಭಾರತ್‌ ಓಲಾ ಚಾಲಕರ ಸಂಘದ ಅಧ್ಯಕ್ಷ ಚಂದ್ರು ತಿಳಿಸಿದ್ದಾರೆ.