ಮರಳು ಲಭ್ಯವಿಲ್ಲ ಎಂಬ ಕಾರಣದಿಂದ ಮನೆಕಟ್ಟಿಸುವುದನ್ನು ನಿಲ್ಲಿಸಿದ್ದೀರಾ, ಹಾಗಾದರೆ ನಿಮಗಿಲ್ಲಿದೆ ಸಿಹಿ ಸುದ್ದಿ ಈಗ ಬಂದಿದೆ ವಿದೇಶಿ ಮರಳು!!

0
1315

ರಾಜ್ಯದಲ್ಲಿ ಇನ್ನು ಮುಂದೆ ಮನೆಕಟ್ಟುವವರಿಗೊಂದು ಸಿಹಿ ಸುದ್ದಿ ಕಾದಿದೆ, ಇನ್ನು ಬಿಲ್ಡರ್ಸ್ ಗಳಿಗೆ ಅಂತೂ ಈ ಸುದ್ದಿ ವರದಾನವಾಗಲಿದೆ. ಸರಕಾರ ಮನೆ ಕಟ್ಟುವವರನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಗು ಈ ನಿಟ್ಟಿನಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಒಂದು ಹೊಸ ಮಾರ್ಗ ಕಂಡುಕೊಂಡಿದೆ. ಏನದು ಸುದ್ದಿ, ಮನೆ ಕಟ್ಟುವುದಕ್ಕೂ ಅದಕ್ಕೂ ಏನು ಸಂಭಂದ ಅಂತೀರಾ, ನೀವೇ ನೋಡಿ.

ರಾಜ್ಯದಲ್ಲಿ ಮನೆಕಟ್ಟುವವರಿಗೆ, ಮರಳು ತರುವುದು ಒಂದು ದೊಡ್ಡ ಸವಾಲಾಗಿತ್ತು. ಇನ್ನು ಉತ್ತಮ ಗುಣಮಟ್ಟದ ನದಿ ಮರಳು ಸಿಗುವುದಂತೂ ಮರೀಚಿಕೆಯಾಗಿತ್ತು. ಇನ್ನು ಅಪಾರ್ಟ್ಮೆಂಟ್ ನಂತಹ ದೊಡ್ಡ-ದೊಡ್ಡ ಕಾಮಗಾರಿಗಳನ್ನು ಮಾಡಿಸುವ ಬಿಲ್ದರ್ಗಳಂತೂ ಮರುಳಿನ ಕೊರತೆಯಿಂದ ಎಷ್ಟೋ ತಿಂಗಳುಗಳ ಕಾಲ ನಿರ್ಮಾಣವನ್ನು ನಿಲ್ಲಿಸಿದ ಉದಾಹರಣೆಗಳು ಸಾಕಷ್ಟು ಇವೆ.

ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡಿ, ಇವರ ಸಮಸ್ಯೆಯನ್ನು ಬಗೆಹರಿಸಲೆಂದೇ M-ಸ್ಯಾಂಡ್ ಎಂಬ ಹೊಸ ಹಾಗು ನೈಸರ್ಗಿಕ ಮರುಳನ್ನು ಪರಿಚಯಿಸಿತ್ತು. ಆದರೆ, ಜನ ಇದನ್ನು ಕೊಳ್ಳಲು ಹಿಂದೇಟು ಹಾಕಿದರು. ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಲು ಚಿಂತಿಸುತ್ತಿರುವಾಗಲೇ ಅವರಿಗೆ ಹೊಳೆದದ್ದೆ, ಮರಳು ಆಮದು ಮಾಡಿಕೊಳ್ಳುವುದು.

ಹೌದು, ಸರ್ಕಾರ ಬೇರೆ ದೇಶದಿಂದ ಮರಳು ಆಮದು ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದ MSIL ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಸಿ.ಪ್ರಕಾಶ್ ತಿಳಿಸಿ, MSIL ವತಿಯಿಂದ ದೇಶದಲ್ಲಿಯೇ ಪ್ರಥಮ ಬಾರಿಗೆ ಬ್ರಾಂಡೆಡ್ ನೈಸರ್ಗಿಕ ನದಿ ಮರಳನ್ನು ಚೀಲಗಳಲ್ಲಿ ಇಂದಿನಿಂದ ಮಾರಾಟ ಮಾಡಲಾಗುತ್ತಿದೆ ಎಂದರು. ಬಿಡದಿಯಲ್ಲಿ ಯಾರ್ಡ್ ಮಾಡಲಾಗಿದ್ದು, ಅಲ್ಲಿ ಮರಳು ಮಾರಾಟಕ್ಕೆ ಲಭ್ಯವಿದೆ. ನಂತರ ಬೆಂಗಳೂರಿನ ಚನ್ನಸಂದ್ರ, ದೊಡ್ಡಬಳ್ಳಾಪುರ, ತುಮಕೂರಿನ ಕ್ಯಾತ್ಸಂದ್ರ, ಮಂಡ್ಯ, ಮೈಸೂರು, ಹುಬ್ಬಳ್ಳಿ ಸೇರಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.

MSIL ವತಿಯಿಂದ ನಿಗದಿತ ದರದಲ್ಲೇ ಮಾರಾಟ ಮಾಡಲಾಗುತ್ತದೆ. 50 ಕೆಜಿ ಚೀಲ ಹಾಗೂ ಟನ್ ಲೆಕ್ಕದಲ್ಲಿ ಮರಳನ್ನು ಖರೀದಿಸಬಹುದು. ಪ್ರತಿ ಟನ್‌ಗೆ ಜಿಎಸ್‌ಟಿ ತೆರಿಗೆ ಸೇರಿ 4 ಸಾವಿರ ರೂ. ದರ ನಿಗದಿಪಡಿಸಲಾಗಿದೆ. 50 ಕೆಜಿ ಚೀಲಕ್ಕೆ 200 ರಿಂದ 220 ರೂ. ದರ ನಿಗದಿ ಪಡಿಸಲಾಗಿದೆ, ಯಾರು ಬೇಕಾದರೂ ಕೊಳ್ಳಬಹುದು, ಇಷ್ಟೇ ಟನ್ ಕೊಳ್ಳಬಹುದೆಂಬ ನಿಯಮವೇನಿಲ್ಲ, ತಮ್ಮ ಅನುಕೂಲಕ್ಕೆ ತಕ್ಕಂತೆ ಏಟು ಬೇಕಾದರೂ ಕೊಳ್ಳಬಹುದಾಗಿದೆ.

MSIL, 50 ಕೆಜಿ ಚೀಲಕ್ಕೆ 190 ರೂ. ದರ ನಿಗದಿಪಡಿಸಿದೆ, 20 ಚೀಲಕ್ಕೆ (1 ಟನ್) ಎಲ್ಲ ತೆರಿಗೆ ಸೇರಿ 4 ಸಾವಿರ ರೂ. ಇರಲಿದೆ. ಸದ್ಯ ರಾಜ್ಯದಲ್ಲಿ ಮರಳಿನ ಬೆಲೆ 10 ಟನ್ ಲಾರಿ ಲೋಡ್‌ಗೆ 50 ರಿಂದ 60 ಸಾವಿರ ರೂ ಇದೆ. ಮಲೇಷ್ಯಾ ಮರಳು ಖರೀದಿಯಿಂದ 10 ರಿಂದ 22 ಸಾವಿರ ರೂ. ವರೆಗೆ ಉಳಿತಾಯವಾಗಲಿದೆ. ಮೊದಲ ಹಂತವಾಗಿ ಮಲೇಷ್ಯಾದಿಂದ, ಹಡಗು ಮೂಲಕ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ, ಕೃಷ್ಣಪಟ್ನಂ ಬಂದರ್‌‌ಗೆ 54 ಸಾವಿರ ಟನ್ ಮರಳು ಪೂರೈಕೆಯಾಗಿದೆ.

ಸರ್ಕಾರ ಇದಲ್ಲದೆ, ಖಾಸಗಿ ಕಂಪನಿಗಳು, ಮರಳು ವ್ಯಾಪಾರಸ್ಥರು ಸೇರಿ ಅಗತ್ಯವಿರುವವರು ವಿದೇಶಗಳಿಂದ ರಾಜ್ಯಕ್ಕೆ ಮರಳು ಆಮದು ಮಾಡಿಕೊಳ್ಳಲು ಅವಕಾಶ ನೀಡಿದೆ. ಆದರೆ, ಇವರಿಗೆ ಕೆಲವು ನಿಯಮ ಮತ್ತು ನಿರ್ಬಂಧನೆಗಳನ್ನು ವಿಧಿಸಿದೆ. ಕರ್ನಾಟಕ ಪಾರದರ್ಶಕ ನಿಯಮದ ಪ್ರಕಾರ ಗ್ಲೋಬಲ್ ಟೆಂಡರ್‍ ಕರೆದು ಸರಬರಾಜುದಾರರನ್ನು ಗುರುತಿಸಿ ಮರಳನ್ನು ಆಮದು ಮಾಡಿಕೊಳ್ಳಲು ಆರಂಭಿಸಲಾಗಿದೆ ಎಂದು ಸಿಎಂ ಹೇಳಿದರು.

ಒಟ್ಟಿನಲ್ಲಿ ಇನ್ನು ಮುಂದೆ ಮರಳು ಲಭ್ಯವಿಲ್ಲ ಅಥವಾ ಕಳಪೆ ಇದೆ ಎಂಬ ಕಾರಣದಿಂದ ಮನೆಕಟ್ಟುವುದನ್ನು ಅರ್ಧಕ್ಕೆ ನಿಲ್ಲಿಸುತ್ತಿದವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ.