ಮತ್ತೆ 6 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ! ಹಿಂದೆ ಇದ್ದ ಕಾನೂನನ್ನು ಮತ್ತೆ ಜಾರಿಗೆ ತರಲು ಮುಂದಾದ ಸರ್ಕಾರ.!

0
258

ಮೊದಲು ಇದ್ದ ಏಳನೇಯ ತರಗತಿ ಪಬ್ಲಿಕ್ ಪರೀಕ್ಷೆ ಕುರಿತಂತೆ ಮತ್ತೆ ಚರ್ಚೆಗಳು ಶುರುವಾಗಿದ್ದು, ಈಗ ಆರನೇ ತರಗತಿಗೆ ಮತ್ತು ಎಂಟನೆ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಬಗ್ಗೆ ಹಾಗೂ ಸರ್ಕಾರಿ ಶಾಲೆಗಳಿಗೂ ಸೇರಿ ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗೆ ವಿಮಾ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ವಿಚಾರ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಆತಂಕ ಮೂಡಿಸಿದ್ದು, ಪಬ್ಲಿಕ್ ಪರೀಕ್ಷೆ ಮಕ್ಕಳಿಗೆ ಒತ್ತಡ ಹೇರುತ್ತೆ ಎನ್ನುವ ಮಾತುಗಳು ಕೇಳಿಬರುತ್ತಿವೆ ಆದರೆ ಈ ರೀತಿಯ ಪರೀಕ್ಷೆಗಳು ಮಕ್ಕಳಲ್ಲಿ ಪರೀಕ್ಷೆಯ ಭಯ ಕಡಿಮೆ ಮಾಡುತ್ತೆ ಎನ್ನುವ ಉದ್ದೇಶವನ್ನು ಸಚಿವರು ತಿಳಿಸಿದ್ದಾರೆ.

Also read: ವಾಹನ ದಾಖಲಾತಿಯಲ್ಲಿ ಭಾರಿ ಬದಲಾವಣೆ; ಅಕ್ಟೋಬರ್​​ 1ರಿಂದಲೇ ದೇಶಾದ್ಯಂತ ಒಂದೇ ಮಾದರಿ ಡಿಎಲ್, ಆರ್.ಸಿ.

ಹೌದು ಒಂದನೇ ತರಗತಿಯಿಂದ ಯಾವುದೇ ತಾಪತ್ರೆ ಇಲ್ಲದೆ ಪರೀಕ್ಷೆ ಬರೆಯುವ ಮಕ್ಕಳಿಗೆ SSLC ಪರೀಕ್ಷೆ ಸಾಕಷ್ಟು ಒತ್ತಡ ತಂದು ಪಾಲಕರು ಮಕ್ಕಳ ಹೆಚ್ಚಿನ ಅಭ್ಯಾಸಕ್ಕೆ ಟ್ಯೂಷನ್‌ಗೆ ಕಳುಹಿಸಿ ಹೇಗಾದರೂ ಹೆಚ್ಚಿನ ಅಂಕ ಪಡೆದರೆ ಸಾಕು ಎನ್ನುತ್ತಿದ್ದರು ಆದರೆ ಈಗ ಮತ್ತೆ 6ನೇ ತರಗತಿ ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಿದರೆ ಮತ್ತಷ್ಟು ಗೊಂದಲಗಳನ್ನು ಸೃಷ್ಟಿ ಮಾಡಲಿದೇ ಎನ್ನುವ ಚರ್ಚೆಗಳು ಶುರುವಾಗಿವೆ. ಆದರೆ ಆರು ಮತ್ತು ಎಂಟನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಹಾಗೂ ಸರ್ಕಾರಿ ಶಾಲೆಗಳಿಗೂ ಸೇರಿ ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗೆ ವಿಮಾ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪಬ್ಲಿಕ್ ಪರೀಕ್ಷೆ ಉದ್ದೇಶ ವೇನು?

Also read: ದಲಿತ ಮಕ್ಕಳು ಬಯಲಲ್ಲಿ ಮಲ ವಿಸರ್ಜನೆ ಮಾಡಿದ್ದಕ್ಕೆ ಮಕ್ಕಳನ್ನೇ ಹೊಡೆದು ಕೊಂದ ಗ್ರಾಮಸ್ಥರು.!

ವಿದ್ಯಾರ್ಥಿಗಳು ನೇರವಾಗಿ ಎಸ್ಸೆಸ್ಸೆಲ್ಸಿಯಲ್ಲಿ ಪಬ್ಲಿಕ್ ಪರೀಕ್ಷೆ ಎದುರಿಸಬೇಕಾಗುತ್ತದೆ. ಭಯ ಹೋಗಲಾಡಿಸಲು ಆರು ಹಾಗೂ ಎಂಟನೇ ತರಗತಿಯಿಂದಲೇ ಪಬ್ಲಿಕ್ ಪರೀಕ್ಷೆ ನಡೆಸುವಂತೆ ವಿಧಾನಪರಿಷತ್ ಸದಸ್ಯರು ಒತ್ತಾಯಿಸಿದ್ದಾರೆ. ಅದರಂತೆ ರಾಜ್ಯದಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆ ಯಾವುದೇ ಇರಲಿ ಎಲ್ಲಾ ಶಾಲಾಮಕ್ಕಳಿಗೂ ವಿಮಾ ಸೌಲಭ್ಯ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಸರ್ಕಾರಿ ಶಾಲೆಯಲ್ಲಿ ಸಮವಸ್ತ್ರ ಮತ್ತು ಪಠ್ಯಪುಸ್ತಕ ಕುರಿತಂತೆ ಆಗುತ್ತಿರುವ ಗೊಂದಲ ಪರಿಹಾರಕ್ಕೂ ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ. ಶಾಲೆಗಳು ಪ್ರಾರಂಭವಾಗಿ ಮೂರು ತಿಂಗಳಾದರೂ ಶಾಲೆಯಲ್ಲಿ ಸಮವಸ್ತ್ರ ವಿತರಣೆಯಾಗಿಲ್ಲ. ಮುಂದಿನ ವರ್ಷದಿಂದಲೇ ಶಾಲೆ ಆರಂಭವಾದ ದಿನವೇ ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕ ಒದಗಿಸುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದೇ ರೀತಿಯಲ್ಲಿ ಶಿಕ್ಷಣದಲ್ಲಿ ಹಲವು ಬದಲಾವಣೆಯನ್ನು ಮಾಡುವ ಮಾಹಿತಿ ಲಭ್ಯವಾಗಿದೆ.

Also read: ನೀವೂ ಬ್ರೂಕ್ ಬಾಂಡ್ ರೆಡ್ ಲೇಬಲ್, ತ್ರೀ ರೋಸಸ್‍ ಬ್ರಾಂಡ್ ಟೀ ಕುಡಿಯುತ್ತಿರಾ? ಹಾಗಾದ್ರೆ ಅದೆಲ್ಲವೂ ನಕಲಿ ಟೀ ಪೌಡರ್ ಅಂತೆ, ಹೇಗೆ ಅಂತ ಮಾಹಿತಿ ನೋಡಿ.!

ಈಗಾಗಲೇ ಶಿಕ್ಷಕರ ಕಡ್ಡಾಯ ವರ್ಗಾವಣೆ ಕುರಿತು ವಿವಾದ ಎದ್ದಿದ್ದು ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯನ್ನು ತಡೆ ಹಿಡಿದಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮನೆಮುಂದೆ ಶಿಕ್ಷಕರು ಪ್ರತಿಭಟನೆ ನಡೆಸಿದ್ದರು. ರಾಜ್ಯದ ಹಲವು ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಶಿಕ್ಷಕರು ಬಂದಿದ್ದಾರೆ. ಸಚಿವ ಸುರೇಶ್ ಕುಮಾರ್ ಶಿಕ್ಷಕರ ಅಹವಾಲನ್ನು ಸ್ವೀಕರಿಸಿದ್ದಾರೆ. ಆದರೆ ಹಲವು ಬದಲಾವಣೆ ಮಾಡುವ ವಿಚಾರ ಹೊತ್ತಿರುವ ಸರ್ಕಾರ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತೋ ಕಾದು ನೋಡಬೇಕಿದೆ.